ಕುಡಿಯುವ ನೀರಿಗೆ 86 ಕೋಟಿ ರೂ. ಯೋಜನೆ
ಹಾಸನ

ಕುಡಿಯುವ ನೀರಿಗೆ 86 ಕೋಟಿ ರೂ. ಯೋಜನೆ

July 5, 2019

ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂಗೆ ಸಚಿವ ರೇವಣ್ಣ ಸೂಚನೆ
ಹಾಸನ, ಜು.4- ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 86 ಕೋಟಿ ರೂ. ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಆದಷ್ಟೂ ಬೇಗ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ಜಿಲ್ಲಾ ಪಂಚಾಯಿತಿಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಗ್ರಾಮವೂ ನೀರಿನ ಬವಣೆ ಎದುರಿಸದಂತೆ ನಿಗಾವಹಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ನದಿಗಳು, ಹಳ್ಳಗಳು ಹರಿಯು ತ್ತವೆ, ಮಲೆನಾಡಿನಲ್ಲ್ಲಿ ನೀರು ಸಿಗುತ್ತಿದೆ. ಅವೆಲ್ಲದರ ಸದ್ಬಳಕೆಯಾಗಬೇಕು, ಪ್ರತಿ ಹಳ್ಳಿಗೂ ನಲ್ಲಿಗಳಲ್ಲೇ ನೀರು ಪೂರೈಕೆ ಯಾಗಬೇಕು. ಜಲಧಾರೆ ಯೋಜನೆಯೂ ವ್ಯಾಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಪಂ ಇಂಜಿನಿಯರಿಂಗ್ ವಿಭಾಗದ ಇಇ ಆನಂದ್ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿ ಈ ಹಿಂದೆ 154 ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ. ಅದರಲ್ಲಿ 119 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಬಳಕೆಯಾಗಿದೆ. ಉಳಿದ 35 ಕೋಟಿ ರೂ.ಗಳಲ್ಲಿ ವಿದ್ಯುಚ್ಚಕ್ತಿ ಬಿಲ್‍ಗೆ 16 ಕೋಟಿ ರೂ., ಮುಂದುವರೆದ ಕಾಮಗಾರಿಗಳಿಗೆ 7 ಕೋಟಿ ರೂ. ಪಾವತಿಸಬೇಕಿದೆ. ಉಳಿದ 12 ಕೋಟಿ ರೂ.ಗಳಲ್ಲಿ ಹೊಸ ಕೆಲಸಗಳನ್ನು ಮಾಡಿಸಬಹುದಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಹೆಚ್.ಕೆ. ಕುಮಾರಸ್ವಾಮಿ ಅವರು, ವಿದ್ಯುತ್ ಬಿಲ್‍ಗೆ ಶೇ.50ರಷ್ಟು ಹಣ ಪಾವತಿಸಿ ಉಳಿದ ಮೊತ್ತ ವನ್ನು ಕುಡಿಯುವ ನೀರಿನ ಕಾಮಗಾರಿ ಗಳಿಗೆ ಬಳಸಬೇಕು. ಅದರಿಂದ ಒಟ್ಟಾರೆ 20 ಕೋಟಿ ರೂ. ಹೊಸ ಯೋಜನೆಗೆ ಲಭ್ಯವಾಗಲಿದೆ ಎಂದು ಸಲಹೆ ನೀಡಿದರು.

ಲಭ್ಯ ಹಣಕ್ಕೆ ಪೂರಕವಾಗಿ ರೂಪಿಸಿದ ಯೋಜನೆಗಳಿಗೆ ಅನುಮೋದನೆ ನೀಡ ಲಾಗುವುದು. ಈ ಹಿಂದೆ ತೀವ್ರ ಬರ ಇದ್ದ ಹಿನ್ನೆಲೆಯಲ್ಲಿ ತಮ್ಮ ಕೋರಿಕೆ ಮೇರೆಗೆ ನೀರಾವರಿ ಇಲಾಖೆ ಮುಖ್ಯ ಇಂಜಿನಿ ಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲಾದ್ಯಂತ ಸಂಚರಿಸಿ 35 ಕೋಟಿ ರೂ.ಗಳ ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದರು. ಅವೆಲ್ಲವೂ ಸೇರಿದಂತೆ ಒಟ್ಟು 86 ಕೋಟಿ ರೂ.ಗಳ ವಿಸ್ತøತ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವ ರೇವಣ್ಣ ಸೂಚಿಸಿದರು. ಆಲೂರು ತಾಲೂಕಿಗೆ ಗೊರೂರು, ಯಗಚಿ ಕೋಶಗಳಿಂದ ನೀರು ಪೂರೈಸುವ ಯೋಜನೆ ರೂಪಿಸುವಂತೆಯೂ ಹೇಳಿದರು.

ಕೃಷಿ ತೋಟಗಾರಿಕೆ, ರೇಷ್ಮೆ, ಸಣ್ಣ ನೀರಾ ವರಿ, ಅರಣ್ಯ, ಪಶುಪಾಲನೆ ಇಲಾಖೆ ಹಾಗೂ ಹಾಸನ ಹಾಲು ಒಕ್ಕೂಟ ಮೂಲಕ ಜಿಲ್ಲೆ ಯಲ್ಲಿ ಸಾಧ್ಯವಿರುವ ಕಡೆಗಳಲ್ಲಿ ದನ-ಕರು ಗಳಿಗೆ ಮೇವು ಬೆಳೆಯುವಂತೆ, ಮೆಕ್ಕೆ ಜೋಳ ಖರೀದಿಗೆ ಕ್ರಮವಹಿಸುವಂತೆಯೂ ತಿಳಿಸಿದರು. ಹೇಮಾವತಿ ಜಲಾಶಯದ ಹಿನ್ನೀರು ಹಾಗೂ ಇತರ ಜಲಾಶಯ, ಕೆರೆಗಳ ಭಾಗದಲ್ಲಿ ಬೀಜ ವಿತರಣಾ ಕಿಟ್ ಬಳಸಿ ಮೇವು ಬೆಳೆಯಲು ನಿರ್ದೇಶನ ನೀಡಿದರು. ಜಿಪಂ ಅಧ್ಯಕ್ಷೆ ಶ್ವೇತಾ, ಪ್ರಭಾರ ಸಿಇಒ ವೈಶಾಲಿ, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿದ್ದರು.

Translate »