ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ  ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

June 16, 2018

ಮೈಸೂರು: “ಆಡಿದ ಮಾತು, ಕಳೆದುಕೊಂಡ ಅವಕಾಶ ಹಾಗೂ ಘಟಿಸಿದ ಕಾಲವನ್ನು ಮರಳಿ ಪಡೆಲು ಸಾಧ್ಯವಿಲ್ಲ” ಎಂದು ಕೌಟಿಲ್ಯ ವಿದ್ಯಾ ಲಯದ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸೇನಾಧಿಕಾರಿ ‘ಕರ್ನಲ್ ಮಹೇಂದ್ರ ಬಾಬು’ ಅವರು ವಿದ್ಯಾರ್ಥಿ ನಾಯಕರಿಗೆ ಕಿವಿಮಾತು ಹೇಳಿದರು.

ಮುಂದಿನ ಭವ್ಯ ಭವಿಷ್ಯದ ಪ್ರಜೆಗಳಾಗಿ ಹೊರಬರಲಿರುವ ವಿದ್ಯಾರ್ಥಿಗಳಲ್ಲಿ ನಾಯಕ ತ್ವದ ಗುಣವನ್ನು ಬೆಳೆಸುವ ಸಲುವಾಗಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಕಾಂಕ್ಷಿತ ಪ್ರತಿನಿಧಿಗಳಿಗೆ ಚುನಾವಣೆ ನಡೆಸಲಾಯಿತು. ವಿದ್ಯಾಲಯದ ನಾಯಕ, ನಾಯಕಿ, ಸಾಂಸ್ಕೃತಿಕ, ಕ್ರೀಡೆ, ಶಿಸ್ತಿನ ನಾಯಕರುಗಳನ್ನು ಆಯ್ಕೆ ಮಾಡುವ ಸಲುವಾಗಿ ಎಲ್ಲಾ ವಿದ್ಯಾರ್ಥಿ ಗಳು ತಮ್ಮ ಅಮೂಲ್ಯವಾದ ಮತ ಚಲಾ ಯಿಸಿದರು. ಈ ಚುನಾವಣೆಗೆ ಸುಮಾರು 18 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, 600 ವಿದ್ಯಾರ್ಥಿಗಳು ಮತ ಚಲಾಯಿಸಿದರು. ಗಣಕೀಕೃತ ಯಂತ್ರದ ಮೂಲಕ ನಡೆದ ಮತದಾನದಲ್ಲಿ ವಿದ್ಯಾರ್ಥಿ ನಾಯಕನಾಗಿ ‘ಅರ್ನವ್. ಎಸ್(10ನೇತರಗತಿ), ವಿದ್ಯಾರ್ಥಿ ನಾಯಕಿಯಾಗಿ ಅನುಷ್ಕ(10ನೇತರಗತಿ), ಸಾಂಸ್ಕೃತಿಕ ನಾಯಕಿಯಾಗಿ ತನುಶ್ರೀ (9ನೇತರಗತಿ), ಕ್ರೀಡಾ ನಾಯಕನಾಗಿ ರಾಹುಲ್.ಆರ್(8ನೇತರಗತಿ), ಶಿಸ್ತಿನ ಪರಿಪಾಲನ ನಾಯಕನಾಗಿ ಪುನೀತ್.ಡಿ. ರಾಜು(10ನೇತರಗತಿ) ಆಯ್ಕೆಯಾದರು.

ಸದರಿ ವಿದ್ಯಾರ್ಥಿಗಳಿಗೆ ಕರ್ನಲ್ ಮಹೇಂದ್ರಬಾಬುರವರು, “ಪ್ರತಿಜ್ಞಾ ವಿಧಿ ಸ್ವೀಕಾರ” ಮಾಡಿ ನಾಯಕರಿಗೆ ತಮ್ಮ ತಮ್ಮ ಕರ್ತವ್ಯ ಪಾಲನೆಯ ಜವಬ್ದಾರಿಯನ್ನು ನಿಭಾ ಯಿಸಬೇಕೆಂದು ಪ್ರತಿಜ್ಞೆಯನ್ನು ಬೋಧಿಸುತ್ತಾ, ವಿದ್ಯಾರ್ಥಿ ಮುಖಂಡರು ಗಳು ಮುಂದಿನ ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗಿ ಬಾಳಬೇಕೆಂದು ಕರೆ ನೀಡಿದರು. ಅಲ್ಲದೇ, ಸಿಯಾಚಿನ್ ಪ್ರದೇಶದಲ್ಲಿ ನಡೆದ ಯುದ್ದದ ನೈಜ ದೃಶ್ಯಗಳನ್ನು ಸಾಕ್ಷ್ಯ ಚಿತ್ರದ ಮೂಲಕ ಪ್ರದರ್ಶಿಸಿ, ವಿದ್ಯಾರ್ಥಿ ಗಳಲ್ಲಿ ದೇಶಾಭಿಮಾನವನ್ನು ಮೂಡಿಸು ವಂತಹ ಹಿತನುಡಿಗಳನ್ನು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾಲಯದ ಪ್ರಾಂಶುಪಾಲರುಗಳಾದ ಡಾ.ಎಲ್.ಸವಿತ ರವರು ವಿಶ್ವಗುರು ಎಂದು ಗುರ್ತಿಸಲ್ಪಟ್ಟಿ ರುವ ಭಾರತದಲ್ಲಿ ಉತ್ತಮ ನಾಯಕರ ಕೊರತೆಯಿರುವುದು ವಿಪರ್ಯಾಸ ಎಂದು ಹಾಗೂ ದೇಶಕ್ಕೆ ನಾಯಕರನ್ನು ಕೊಡುಗೆಯಾಗಿ ನೀಡುವಲ್ಲಿ ಶಾಲೆಗಳ ಪಾತ್ರ ಮಹತ್ತರ ವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶು ಪಾಲರಾದ ಶ್ರೀಮತಿ ರಾಧಿಕ.ಬಿ.ಬಿ ಮತ್ತು ಶ್ರೀಮತಿ ಪೂಜಾ ಕೆ.ಎಸ್ ಹಾಜರಿದ್ದರು. ಈ ಕಾರ್ಯಕ್ರಮದ ಉಸ್ತುವಾರಿ ಸಮಿ ತಿಯ ಮುಖ್ಯಸ್ಥರಾಗಿ ಶ್ರೀಯುತ ಉಮೇಶ್ ಕುಮಾರ್.ಎಸ್.ಎಸ್, ಸದಸ್ಯ ರಾದ ಶ್ರೀಮತಿ ಚಾರುಲತಾ.ಕೆ, ಶ್ರೀಮತಿ ದೃತಿಮಾ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Translate »