ರಾಮನಾಥಪುರ,ಸೆ.27- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿವಿಧ ರೀತಿಯ ಪ್ರತಿಭೆ ಇರುತ್ತದೆ. ವಿದ್ಯೆ, ಕ್ರೀಡೆ, ಸಾಹಿತ್ಯದ ಜೊತೆಗೆ ಸಂಗೀತವನ್ನೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗಾನಕಲಾ ಭೂಷಣ ವಿದ್ವಾನ್ ಅರ್.ಕೆ.ಪದ್ಮನಾಭ ಹೇಳಿದರು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಕರ ದಿನಾಚರಣೆ ಮತ್ತು ಅರ್.ಕೆ. ಪದ್ಮನಾಭ ಅವರ 70ನೇ ವರ್ಷದ ಹುಟ್ಟು ಹಬ್ಬ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿದ ಅವರು, ಗುರಿ ಇಲ್ಲದೇ ಯಾವುದೇ ಕೆಲಸವನ್ನು ಮಾಡಬಾರದು, ಕಾಲವನ್ನು ಸಮರ್ಪ ಕವಾಗಿ ಉಪಯೋಗಿಸಿ ಕೊಂಡು, ಸ್ವರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಲಾನ ಎಂಬು ದನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸು ವುದು ಪೋಷಕರ ಕರ್ತವ್ಯ. ತಾಯಂದಿರು ಮಕ್ಕಳಲ್ಲಿ ಶಿಸ್ತು, ಸನ್ನಡತೆ, ಸಹನೆ ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯ ಎಂದು ಸಲಹೆ ನೀಡಿದರು.ಸಂಗೀತ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಗುಣಾತ್ಮಕ ಬೋಧನೆ ನೀಡುತ್ತಿ ರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಭಾಗದ ಗ್ರಾಮೀಣ ಶಾಲೆಗಳಿಗೆ ನಾನು ಹೋದರೆ, ಒಂದು ಹಾಡು ಹಾಡಿ ಎಂದು ವಿದ್ಯಾರ್ಥಿಗಳು ಕೇಳುತ್ತಾರೆ. ಅದೇ ನನಗೆ ಸಂತೋಷ ತರುತ್ತದೆ. ವ್ಯಕ್ತಿ ಬರೀ ವೃತ್ತಿಯಿಂದಷ್ಟೇ ಧಾರ್ಮಿಕನಾಗಿದ್ದರೆ ಸಾಲದು, ಪ್ರವೃತ್ತಿಯಿಂದಲೂ ಧಾರ್ಮಿಕ ನಾಗಿರಬೇಕು ಎಂದು ಮಾರ್ಗದರ್ಶನ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಂಜುಂಡಾಚಾರ್, ಸದಸ್ಯರಾದ ಮುರುಳೀಧರ್, ಚಂದ್ರಶೇಖರ್, ಹರೀಶ್, ಸ್ವಾಮಿಗೌಡ, ಗಿರೀಶ್, ಧಾನಿಗಳಾದ ವೆಂಕಟೇಶ್, ಜವರನಾಯ್ಕ, ಗುಂಡುರಾ ಮಯ್ಯ, ಮಾರ್ಕಂಡಯ್ಯ, ವೆಂಕಟೇಶ್, ಗ್ರಾ.ಪಂ. ಸದಸ್ಯ ಕೇಶವಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕ ಬಿ.ಜೆ. ಶಿವೇಗೌಡ, ದಿವಾ ಕರ್, ರವಿಗೌಡ, ಸಾಹಿತಿ ಪರಮೇಶ್, ಮೂರ್ತಿ, ಅರ್.ಕೆ.ಪದ್ಮನಾಭ ಬಳಗದ ಅಧ್ಯಕ್ಷ ರಮೇಶ್ ವಾಟಾಳ್, ಮುಖ್ಯ ಶಿಕ್ಷಕ ನಾಗರಾಜಶೆಟ್ಟಿ, ಶಿಕ್ಷಕ ಮೂರ್ತಿ ಉಪಸ್ಥಿತರಿದ್ದರು.