370ನೇ ವಿಧಿ ರದ್ದು: ಶ್ಯಾಮಪ್ರಸಾದ್ ಮುಖರ್ಜಿ ಕನಸು ನನಸು
ಹಾಸನ

370ನೇ ವಿಧಿ ರದ್ದು: ಶ್ಯಾಮಪ್ರಸಾದ್ ಮುಖರ್ಜಿ ಕನಸು ನನಸು

September 28, 2019

ಅರಸೀಕೆರೆ,ಸೆ.27-ಒಂದು ದೇಶ-ಒಂದು ಸಂವಿಧಾನ ಎಂಬ ಕನಸು ಕಂಡಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಕಾಶ್ಮೀರವನ್ನು ಭಾರತ ದೇಶಕ್ಕೇ ಸೇರ್ಪಡೆ ಗೊಳಿಸಬೇಕೆಂಬ ಕನಸಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿ ಧಾನದ 370ನೇ ವಿಧಿ ರದ್ದಾಗುವ ಮೂಲಕ ಅದು ಈಗ ನನಸಾಗಿದೆ ಎಂದು ಮಾಜಿ ಎಂಎಲ್‍ಸಿ ಹಾಗೂ ಬಿಜೆಪಿ ರಾಜ್ಯ ಉಪಾ ಧ್ಯಕ್ಷ ಭಾನುಪ್ರಕಾಶ್ ಹೇಳಿದರು.

ನಗರದ ಬಸವೇಶ್ವರ ಕಾಂಪ್ಲೇಕ್ಸ್‍ನಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ `ಒಂದು ದೇಶ ಒಂದು ಸಂವಿಧಾನ-ರಾಷ್ಟ್ರೀಯ ಏಕತಾ ಅಭಿ ಯಾನ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಕಾಶ್ಮೀರವನ್ನು ಭಾರತ ದಿಂದ ಪ್ರತ್ಯೇಕವಾಗಿಡುವ 370ನೇ ವಿಧಿ ಜಾರಿಗೆ ಬರಲು ನೆಹರು ಅವರೇ ಕಾರಣ. ನೆಹರು ಅವರಿಂದಾಗಿಯೇ ಕಾಶ್ಮೀರದ ಸಮಸ್ಯೆ ವಿಶ್ವಮಟ್ಟಕ್ಕೆ ಹೋಯಿತು. 70 ವರ್ಷಗಳ ಕಾಶ್ಮೀರ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು ಈಗ ಇಲ್ಲವಾಗಿಸಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಇಂದು ಮುಸ್ಲಿಂ ಸಮಾ ಜವೇ 370ನೇ ವಿಧಿ ರದ್ದು ಸರಿ ಎನ್ನುತ್ತಿದೆ. ಇದು ಶ್ಲಾಘನೀಯ ವಿಚಾರ ಎಂದರು.

370ನೇ ವಿಧಿಯಿಂದಾಗಿ ಕಾಶ್ಮೀರದಲ್ಲಿ ಕೆಲವೇ ಕುಟುಂಬಗಳ ಅಧಿಪತ್ಯವಿತ್ತು. ಆ ಕುಟುಂಬಗಳವರು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಕೂಲಗಳನ್ನು ಪಡೆಯುತ್ತಾ ಅಮಾಯಕ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಇಂದು ಅವರ ದಬ್ಬಾಳಿಕೆ ಅಂತ್ಯಗೊಂಡಿದೆ.

ಈಗ ದೇಶದ ಎಲ್ಲಾ ಪ್ರಜೆಗಳು ಕಾಶ್ಮೀರದಲ್ಲಿ ವ್ಯವಹಾರ ನಡೆಸಬಹುದು, ಭೂಮಿ ಖರೀದಿ ಮಾಡಿ ಮನೆ ಕಟ್ಟಬಹುದು, ಕಾಶ್ಮೀರದ ಹೆಣ್ಣು ಮಕ್ಕಳು ಭಾರತದ ಇತರೇ ಪ್ರದೇಶಗಳಿಗೆ ಮದುವೆಯಾದರೇ ಅಲ್ಲಿನ ಪೌರತ್ವವನ್ನು ಕಳೆದುಕೊಳ್ಳುತ್ತಿದ್ದರು. ಆದರೇ ಇಂದು ತಂದೆ ಆಸ್ತಿಯಲ್ಲಿ ಅವರಿಗೂ ಸಮಪಾಲು ದೊರೆಯುವಂತಾಗಿದೆ. ಕಾಶ್ಮೀರದ 40 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಇಂದು ನಮ್ಮ ರಾಷ್ಟ್ರಧ್ವಜ ಹಾರಾಡುತ್ತಿವೆ. ಇದೆಲ್ಲವೂ ಹೆಮ್ಮೆಯ ವಿಚಾರ ಎಂದರು.

ಮಾಜಿ ಶಾಸಕ ಎ.ಎಸ್.ಬಸವರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‍ವಿಕ್ರಂ, ಗ್ರಾಮಾಂತರ ಮಂಡಲ ಅಧ್ಯಕ್ಷ ಜಿವಿಟಿ ಬಸವರಾಜ್, ನಗರಾಧ್ಯಕ್ಷ ಮನೋಜ್‍ಕುಮಾರ್, ಮುಖಂಡರಾದ ಮರಿಸ್ವಾಮಿ, ಬಾಣಾವರ ಜಯಣ್ಣ, ಲಾಳನಕೆರೆ ಯೋಗೀಶ್, ದುಮೇನಹಳ್ಳಿ ಗಂಗಾಧರ್, ವಿಜಿಕುಮಾರ್, ರಮೇಶ್ ನಾಯ್ಡು, ಶಿವನರಾಜ್, ಶಿಲ್ಪಾ ಸತೀಶ್, ಮಂಜು, ರವಿಕುಮಾರ್, ಜೇನುಕಲ್ ಚಂದ್ರು, ಎಸ್‍ಎಲ್‍ಎನ್ ವಿಜಯ ಕುಮಾರ್ ಉಪಸ್ಥಿತರಿದ್ದರು.

Translate »