ಜನರ ಬಳಿಗೇ ತೆರಳಿ ಸಮಸ್ಯೆ ಪರಿಹರಿಸಿ
ಹಾಸನ

ಜನರ ಬಳಿಗೇ ತೆರಳಿ ಸಮಸ್ಯೆ ಪರಿಹರಿಸಿ

September 28, 2019

ಹಾಸನ ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೂಚನೆ
ಹಾಸನ,ಸೆ.27-ಅಧಿಕಾರಿಗಳು ಕೇವಲ ಕಚೇರಿಯಲ್ಲೇ ಕುಳಿತು ಕೆಲಸ ಮಾಡದೇ, ಜನರ ಬಳಿಗೂ ತೆರಳಿ ಜನಸಾಮಾನ್ಯರ ಸಮಸ್ಯೆ ಅರಿತು ಪರಿಹರಿಸಬೇಕು. ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

ಜಿಪಂನ ಹೊಯ್ಸಳ ಸಭಾಂಗಣದ ಲ್ಲಿಂದು ಜಿಲ್ಲೆಯ ಬರ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ಹಾಗೂ ಪ್ರಗತಿ ಪರಿ ಶೀಲನೆ ಸಭೆ ನಡೆಸಿದ ಸಚಿವರು, ಕಾಟಾ ಚಾರಕ್ಕೆ ಸಭೆ ನಡೆಸುತ್ತಿಲ್ಲ, ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಬೇಕು, ಕರ್ತವ್ಯ ದಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ. ಉತ್ತಮ ಆಡಳಿತ ನೀಡಬೇಕು. ಸರ್ಕಾರದ ಎಲ್ಲಾ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಹೇಳಿದರು.

ನೆರೆ ಮತ್ತು ಬರ ನಿರ್ವಹಣೆ ಬಗ್ಗೆ ಸ್ಪಷ್ಟ ವಿವರ ಒದಗಿಸಬೇಕು ಹಾಗೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆದಷ್ಟೂ ಬೇಗ ಅಗತ್ಯ ನೆರವು ಒದಗಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಾಕಿಯಿರುವ ಏತ ನೀರಾ ವರಿ ಯೋಜನೆ ಕಾಮಗಾರಿಗಳನ್ನು ಬೇಗ ಮುಗಿಸಬೇಕು. ಸಣ್ಣ ನೀರಾವರಿ ಇಲಾಖೆ ಕೆಲಸಗಳೆಲ್ಲಾ ಸಕಾಲದಲ್ಲಿ ಮುಗಿಯಬೇಕು. ಅಲ್ಲದೇ, ಪ್ರವಾಹ ನಿಯಂತ್ರಣ, ನಿರ್ವ ಹಣೆ, ಹಂಚಿಕೆ, ಅತಿಯಾಗಿ ಹರಿದು ಬರುವ ನೀರು ವ್ಯರ್ಥವಾಗಿ ಹೋಗದಂತೆ ಸಂಗ್ರಹಿಸುವ ಮಾರ್ಗೊಪಾಯಗಳ ಬಗ್ಗೆ ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳಿಯವಾಗಿ ಹೆಚ್ಚುವರಿ ನೀರು ಸಂಗ್ರಹಿಸಿ ಬರ ಪೀಡಿತ ಪ್ರದೇಶಗಳಿಗೆ ಹರಿಸÀಬೇಕು. ಎಲ್ಲಾ ಜಿಲ್ಲೆಯ ರೈತರು ಸಮಾನರು ಎಂಬ ಮನೋಭಾವ ಬರಬೇಕು ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಎತ್ತಿನ ಹೊಳೆ ಯೋಜನೆ ಆದಷ್ಟೂ ಬೇಗ ಪೂರ್ಣಗೊಳಿಸಿ, ಅದಕ್ಕೆ ಅಗತ್ಯ ವಿರುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತ ವಾಗಬೇಕು. ಅರಣ್ಯ ತೆರವು, ಅರಣ್ಯೀ ಕರಣಕ್ಕೆ ಪರ್ಯಾಯ ಭೂಮಿ ಒದಗಿ ಸುವ ಕಾರ್ಯ ಬೇಗ ಮುಗಿಸಿ. ಸರ್ಕಾರ ದಿಂದ ಸೂಚನೆ ಇಲ್ಲದೆ ಎತ್ತಿನ ಹೊಳೆ ನೀರನ್ನು ಬೇರೆ ಯಾವುದೇ ನದಿಗೆ ಪ್ರಾಯೋಗಿಕವಾಗಿಯೇ ಆದರೂ ಹರಿಸಬೇಡಿ. ಇದರಿಂದ ಮುಂದೆ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.

ವಿಶೇಷ ಭೂ ಸ್ವಾಧೀನಾಧಿಕಾರಿಗಳು ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಅಥವಾ ಯಾರಿಗೋ ಅನುಕೂಲ ಕಲ್ಪಿಸುವ ಭಯದಿಂದ ಕರ್ತವ್ಯ ನಿರ್ವಹಿಸಬಾರದು. ಪ್ರತಿ ಕ್ಷೇತ್ರಕ್ಕೆ 4-5 ಕೆರೆಗಳ ಹೂಳೆತ್ತಲು ಅನುದಾನ ಒದಗಿ ಸಲಾಗುವುದು, ಈ ನೆಪದಲ್ಲಿ ಮರಳು ಸಾಗಣೆ ಮಾಡಿದರೆ, ಅದಕ್ಕೆ ಪ್ರೇರಣೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಗಳನ್ನು ತ್ವರಿತವಾಗಿ ಸಂಚಾರಯೋಗ್ಯವಾಗಿಸಿ ಎಂದು ನಿರ್ದೇಶನ ನೀಡಿದರು.

ತಹಸೀಲ್ದಾರರು ಅರ್ಜಿಗಳನ್ನು ತ್ವರಿತ ವಾಗಿ ವಿಲೇವಾರಿ ಮಾಡಬೇಕು, ದೃಢೀ ಕರಣ ಪತ್ರಗಳಿಗೆ ಜನಸಾಮಾನ್ಯರನ್ನು ಅಲೆದಾಡಿಸಬೇಡಿ. ಪಿಂಚಣಿ ಹಾಗೂ ಸರ್ಕಾರದ ಸಬ್ಸಿಡಿ ಹಣವನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಹಾಕುವ ಬದಲಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಆದ್ಯತೆ ನೀಡಿ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಲ್ಲೆಯ ನೆರೆ ಹಾಗೂ ಬರ ಪರಿಸ್ಥಿತಿಗಳ ಬಗ್ಗೆ ವಿವರಿಸಿ ಸಚಿವರ ಮಾರ್ಗದರ್ಶನದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ಜಿಪಂ ಅಧ್ಯಕ್ಷೆ ಶ್ವೇತಾ, ಶಾಸಕ ಕೆ.ಎಂ. ಲಿಂಗೇಶ್, ಎಸ್‍ಪಿ ರಾಮ್ ನಿವಾಸ್ ಸೆಫಟ್, ಜಿಪಂ ಸಿಇಒ ಬಿ.ಎ ಪರಮೇಶ್ ಹಾಜರಿದ್ದರು.

Translate »