ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಮೈಸೂರು

ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

September 28, 2019

ಮೈಸೂರು, ಸೆ.27-ಭಾರತೀಯ ಜೀವ ವಿಮಾ ನಿಗಮವು 8000 ಸಹಾಯಕರ ಹುದ್ದೆ ಗಳಿಗಾಗಿ ಪ್ರಾಥಮಿಕ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅ.21 ಮತ್ತು 22ರಂದು ದೇಶದಾದ್ಯಂತ ನಡೆಸಲಿದೆ. ಕರ್ನಾಟಕದಲ್ಲಿ 355 ಹುದ್ದೆಗಳಿದ್ದು, ಮೈಸೂರು ವಿಭಾಗದಲ್ಲಿ 55 ಹುದ್ದೆಗಳು ಭರ್ತಿಗೊಳ್ಳಲಿವೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅ.1 ಕಡೇ ದಿನವಾಗಿದ್ದು, 18ರಿಂದ 30ರ ವಯೋಮಾನದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹು ದಾಗಿದೆ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿ ಸಲ್ಲಿಸಲು http://www.licindia.in/ careers ಅನ್ನು ಸಂಪರ್ಕಿಸಿ ಪಡೆಯಬಹುದು. ರಾಷ್ಟ್ರೀಯ ವಿಮಾ ನೌಕರರ ಸಂಘಟನೆ (NOIW)ಗೆ ಸಂಯೋಜಿತವಾದ ವಿಮಾ ನೌಕರರ ಸಂಘಟನೆ (IWO) ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ತರಬೇತಿಗಳನ್ನು ನಡೆಸಲಿದ್ದು, ಈ ತರಗತಿಗಳು ಗೋಪಾಲ ಸ್ವಾಮಿ ಶಿಶುವಿಹಾರದ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿದೆ. ಉಚಿತ ತರಗತಿಗಳು ಸೆ.28ರಂದು ಸಂಜೆ 6 ಗಂಟೆಗೆ ಗೋಪಾಲಸ್ವಾಮಿ ಶಿಶುವಿಹಾರದ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಾರಂಭಗೊಳ್ಳಲಿದೆ. ಆಸಕ್ತರು ಉಚಿತ ತರಬೇತಿ ತರಗತಿಗಳಿಗೆ ಹೆಸರನ್ನು ನೋಂದಾಯಿ ಸಲು ಮೊ.7406524968, 9448293519, 9449018878 ಅಥವಾ ಗೋಪಾಲಸ್ವಾಮಿ ಶಿಶುವಿಹಾರ ವಿದ್ಯಾಸಂಸ್ಥೆಯ ದೂಸಂಖ್ಯೆ 0821-2331480 ಸಂಪರ್ಕಿಸಲು ಕೋರಲಾಗಿದೆ.

Translate »