ನ್ಯೂ ಜಂಬೋ ಸರ್ಕಸ್‍ಗೆ ಪ್ರಮೋದಾದೇವಿ ಚಾಲನೆ
ಮೈಸೂರು

ನ್ಯೂ ಜಂಬೋ ಸರ್ಕಸ್‍ಗೆ ಪ್ರಮೋದಾದೇವಿ ಚಾಲನೆ

September 28, 2019

ಮೈಸೂರು, ಸೆ.27(ಎಂಕೆ)- ಮೈಸೂರಿನ ನಜರ್‍ಬಾದ್‍ನ ಕಾರಂಜಿಕೆರೆ ಬಳಿ ಆಯೋಜಿಸಿರುವ ನ್ಯೂ ಜಂಬೋ ಸರ್ಕಸ್‍ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಭಾರಿಯೂ ದಸರಾ ಮಹೋತ್ಸವದ ಅಂಗವಾಗಿ ಜಂಬೋ ಸರ್ಕಸ್ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನವರಾತ್ರಿ ವೈಭವದೊಂದಿಗೆ ಸರ್ಕಸ್ ನೋಡಿ ಆನಂದಿಸಿ. ದಸರಾ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಸರ್ಕಾರವು ಉತ್ತಮವಾಗಿ ಸಹಕರಿಸುತ್ತಿದೆ. ನಾಡಿನ ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ಮುಖಂಡ ಸೋಮಶೇಖರ್, ವ್ಯವಸ್ಥಾಪಕ ಅಜೀಜ್, ಪ್ರೇಮನಾಥ್, ನಾಗೇಶ್ ಉಪಸ್ಥಿತರಿದ್ದರು.

ದಿನಕ್ಕೆ 3 ಪ್ರದರ್ಶನ: ಇಂದಿನಿಂದ ಅ.26ರವರೆಗೆ ಜಂಬೋ ಸರ್ಕಸ್ ಪ್ರದರ್ಶನ ನಡೆಯಲಿದ್ದು, ಮಧ್ಯಾಹ್ನ 1 ಗಂಟೆ, ಸಂಜೆ 4 ಮತ್ತು ರಾತ್ರಿ 7 ಗಂಟೆಗೆ ಪ್ರದರ್ಶನಗಳು ನಡೆಯಲಿವೆ. ಟಿಕೆಟ್ ದರ 100, 200 ಮತ್ತು 300 ರೂ. ಇದ್ದು, ಆಫ್ರಿಕನ್, ಅಮೇರಿಕನ್ ಮತ್ತು ಚೈನಿಸ್‍ನ ನುರಿತ ಸರ್ಕಸ್ ಪಟುಗಳ ಸಾಹಸವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

Translate »