ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ಬೆಂಬಲಿಸಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ
ಹಾಸನ

ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಅಭ್ಯರ್ಥಿ ಬೆಂಬಲಿಸಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ

April 14, 2019

ಹಾಸನ: ಜಿಲ್ಲೆ ಅಭಿವೃದ್ಧಿ ಆಗ ಬೇಕಾದರೇ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರನ್ನು ಆಯ್ಕೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ನಗರದ ಬಿ.ಎಂ.ರಸ್ತೆಯ ಎಪಿಎಂಸಿ ಬಳಿ ಇರುವ ಹಬೀಬಿಯಾ ಸಾಮೀಲ್ ರಸ್ತೆಯಲ್ಲಿ ಶನಿವಾರ ನಡೆದ ದಲಿತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್.ಡಿ.ರೇವಣ್ಣನವರ ಕೊಡುಗೆ ಸಾಕಷ್ಟು ಇದ್ದು, ಅವರ ರೀತಿ ಕೆಲಸ ಮಾಡುವುದಕ್ಕೆ ಯಾವ ರಾಜಕಾರಣಿ ಯಿಂದ ಆಗುವುದಿಲ್ಲ ಎಂದು ಗುಣಗಾನ ಮಾಡಿದರು. ದೇಶದಲ್ಲಿ ಆಡಳಿತ ವರ್ಗ ಮತ್ತು ದುಡಿಯುವ ವರ್ಗ ಎರಡು ನಿಂತಿದ್ದು, ನಮ್ಮದು ದುಡಿಯುವ ವರ್ಗ, ಈ ಎರಡು ವರ್ಗಗಳ ನಡುವೇ ಸಂಘರ್ಷ ಆಗು ತ್ತಿದ್ದು, ಕೊನೆಗೆ ದುಡಿಯುವ ವರ್ಗವೇ ಮೇಲೆ ಬರುತ್ತದೆ. ದೇಶಕ್ಕೆ ಸುಳ್ಳು ಹೇಳಿ ಅನೇಕ ಭರವಸೆ ನೀಡಿ ಈಡೇರಿಸದೆ ಇರುವ ಬಿಜೆಪಿಗೆ ಜನತೆ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಾಜಿ ಸಚಿವ ಹೆಚ್.ಡಿ.ಮಹದೇವಪ್ಪ ಮಾತನಾಡಿ, ಇಂದು ನಡೆಯುತ್ತಿರುವ ಚುನಾವಣೆ ಒಂದು ರೀತಿ 2ನೇ ಸ್ವಾತಂತ್ರ ಸಂಗ್ರಾಮ. ಕೋಮುವಾದಿಗಳನ್ನು ನಾಶ ಮಾಡದೇ ಸಂವಿಧಾನ ಉಳಿಸಲು ಆಗುವುದಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರ ಅಭಿವೃದ್ಧಿ ವಿಚಾರ ಹೇಳದೇ ಕೇವಲ ಮೋದಿ ಹೆಸರು ಹೇಳುತ್ತಿದ್ದಾರೆ. ಸೈನಿ ಕರನ್ನು ಇಟ್ಟುಕೊಂಡು ಮತ ಯಾಚನೆ ಮಾಡಲಾಗುತ್ತಿದೆ ಎಂದು ದೂರಿದರು.

ಅಧಿಕಾರಕ್ಕಾಗಿ ಏನು ಬೇಕಾದರೂ ಬಿಜೆಪಿ ಅವರು ಟೋಪಿ ಹಾಕುತ್ತಾರೆ. ಎಲ್ಲಿ ಮೇವು ಸಿಗುತ್ತದೆ ಅಲ್ಲಿಗೆ ಹುಡುಕಿಕೊಂಡು ಹೋಗುವ ಕೆಲವು ಬಿಜೆಪಿ ಮುಖಂಡರು ಇದ್ದಾರೆ. ಜಿಲ್ಲೆ ಅಭಿವೃದ್ಧಿಯಾಗಬೇಕು. ಇಲ್ಲಿ ನಾಲ್ಕೈದು ವರ್ಷದಿಂದ ಮಳೆ ಇಲ್ಲ. ನೀರು ಇದ್ದರೂ ತಮಿಳುನಾಡಿಗೆ ಬಿಡ ಲಾಗುತ್ತಿದೆ. ಈಗಾಗಲೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಜ್ವಲ್‍ಗೆ ಆಶೀರ್ವದಿಸಿದ್ದಾರೆ. ಹೆಚ್.ಸಿ. ಮಹದೇವಪ್ಪ ಅವರು ನಮ್ಮ ಕುಟುಂಬದಲ್ಲಿ ಒಬ್ಬರು. ನಮ್ಮ ಮೇಲೆ ಗೌರವ ಇಟ್ಟಿದ್ದಾರೆ. ಅವ ರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವ ಗಲ್ ಮಂಜುನಾಥ್, ಮುಖಂಡರಾದ ಹೆಚ್.ಕೆ.ಮಹೇಶ್, ಎಸ್.ಎಂ.ಆನಂದ್, ಹೆಚ್.ಕೆ.ಜವರೇಗೌಡ, ಹೆಚ್.ಪಿ.ಕುಮಾರ್, ನಿವೃತ್ತ ಡಿಸಿ ಸಿದ್ದಯ್ಯ, ಎಂ.ಆರ್.ವೆಂಕ ಟೇಶ್, ಜಿ.ಓ.ಮಹಾಂತಪ್ಪ, ಪಟೇಲ್ ಶಿವರಾಂ, ಕೆ.ಎಂ.ರಾಜೇಗೌಡ, ಚನ್ನವೀರಪ್ಪ, ಹೆಚ್.ಪಿ.ಪುಟ್ಟರಾಜು, ಹೆಚ್.ಕೆ.ಸಂದೇಶ್ ಇತರರು ಪಾಲ್ಗೊಂಡಿದ್ದರು.

ಚುನಾವಣೆ ನಂತರ ಮೈತ್ರಿ ಸರ್ಕಾರ ಪತನವಾಗುವುದಿಲ್ಲ
ಹಾಸನ: ಲೋಕಸಭೆ ಚುನಾವಣೆ ನಂತರ ಯಾವ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗು ವುದಿಲ್ಲ. ಬಿಜೆಪಿಯಿಂದ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿ.ಎಂ.ರಸ್ತೆ ಬಳಿ ಇರುವ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕ ಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಪಡೆಯಲಿದ್ದಾರೆ. ಚುನಾವಣೆ ನಂತರವೂ ಮೈತ್ರಿ ಸರ್ಕಾರವನ್ನು ಯಾವುದೇ ಕಾರಣಕ್ಕೂ ಕೆಡವಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಹಿಂದೆ ಇದ್ದಿದ್ದು 10 ಪರ್ಸೆಂಟ್ ಸರ್ಕಾರ, ಈಗಿ ರುವ ಸಮ್ಮಿಶ್ರ ಸರ್ಕಾರ 20 ಪರ್ಸೆಂಟ್ ಕಮಿಷನ್ ಪಡೆಯು ತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿಗೆ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳು ಸಿಗುತ್ತವೆ. ಮೈತ್ರಿ ಸರ್ಕಾರ ಯಾವ ಯೋಜನೆ ಮತ್ತು ಕ್ಷೇತ್ರದಲ್ಲಿ ಕಮಿಷನ್ ಪಡೆದಿದೆ ಎಂಬುದನ್ನು ಸಾಬೀತು ಪಡಿಸಲಿ. ಇಲ್ಲವಾದರೆ ಜವಾ ಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.

ಜನತೆ ಚುನಾಯಿಸಿರುವ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಸಂವಿಧಾನದ ಗಣತಂತ್ರ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಣ್ಣ, ತಮ್ಮಂದಿರು, ಕುಟುಂಬದ ರೀತಿ ಇರಬೇಕು. ಹೀಗಿರುವಾಗ ಒಂದು ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಸಹಿಸಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಲ್ವಾಮಾ ಹಾಗೂ ಬಾಲಾಕೋಟ್ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದನ್ನು ಚುನಾವಣಾ ಆಯೋ ಗದ ಗಮನಕ್ಕೂ ತರಲಾಗಿದೆ. ಸೈನಿಕರು, ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳ ಬಾರದು ಎಂದು ಆಯೋಗ ಹೇಳಿದೆ. ಆದರೂ, ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಹೆಚ್.ಸಿ.ಮಹ ದೇವಪ್ಪ, ಬಿ.ಶಿವರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜು ನಾಥ್, ಮುಖಂಡರಾದ ಹೆಚ್.ಕೆ.ಮಹೇಶ್, ಎಸ್.ಎಂ.ಆನಂದ್, ಹೆಚ್.ಕೆ.ಜವರೇಗೌಡ, ಎಚ್.ಪಿ.ಕುಮಾರ್, ಸಿದ್ದಯ್ಯ ಇತರರಿದ್ದರು.

Translate »