ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ
ಮೈಸೂರು

ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ

April 14, 2019

ಮೈಸೂರು: ನ್ಯಾಷನಲ್ ಇನ್ಸ್‍ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ (ಎನ್‍ಐಆರ್‍ಎಫ್) 2019ನೇ ಸಾಲಿಗೆ ನಡೆಸಿದ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ದೇಶದ ಒಟ್ಟು 1479 ವಿಶ್ವ ವಿದ್ಯಾ ನಿಲಯಗಳ ಪೈಕಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 34ನೇ ಸ್ಥಾನ ಗಳಿಸಿದೆ.

ಭಾರತ ಸರ್ಕಾರದ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂಹೆಚ್ ಆರ್‍ಡಿ) ಎನ್‍ಐಆರ್‍ಎಫ್‍ನ 2018ನೇ ರ್ಯಾಂಕಿಂಗ್ ಪಟ್ಟಿಯಲ್ಲಿ 37ನೇ ಸ್ಥಾನ ಪಡೆ ದಿದ್ದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‍ಎಸ್ ಅಕಾಡೆಮಿ) ಈ ಬಾರಿ 34ನೇ ಸ್ಥಾನಕ್ಕೇ ರಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ್ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯನ್ನು ಎದುರಿಸಿ ನಮ್ಮ ಸಂಸ್ಥೆ ಉತ್ತಮ ಸ್ಥಾನ ಪಡೆಯುವಲ್ಲಿ ಯಶಸ್ವಿ ಯಾಗಿದೆ. ಅಕಾಡೆಮಿಯ ಕುಲಾಧಿಪತಿ ಗಳೂ ಆದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಪ್ರೋತ್ಸಾಹ ಹಾಗೂ ಕುಲಪತಿ ಡಾ.ಬಿ. ಸುರೇಶ್ ಅವರ ಬಹುಮುಖ ಪ್ರತಿಭೆ ಯಿಂದ ಈ ಸಾಧನೆ ಸಾಕಾರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
4ನೇ ಆವೃತ್ತಿಯ 2019ನೇ ಸಾಲಿನ ರ್ಯಾಂಕಿಂಗ್ ಪಟ್ಟಿಯನ್ನು ಏ.8ರಂದು ದೆಹಲಿ ಯಲ್ಲಿ ರಾಷ್ಟ್ರಪತಿಗಳು ಬಿಡುಗಡೆ ಮಾಡಿ ದರು. 9 ವಿಭಾಗಗಳಲ್ಲಿ ಶ್ರೇಯಾಂಕಗಳನ್ನು ಬಿಡುಗಡೆಗೊಳಿಸಿದ್ದು, ವಿವಿಗಳ ವಿಭಾಗ ದಲ್ಲಿ ದೇಶದ ಒಟ್ಟು 1479 ವಿವಿಗಳ ಪೈಕಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿ 34ನೇ ಸ್ಥಾನ ಪಡೆದರೆ, ದೇಶದ ಸಮಗ್ರ ಶಿಕ್ಷಣ ಸಂಸ್ಥೆಗಳ ವಿಭಾಗ ದಲ್ಲಿ 55ನೇ ಸ್ಥಾನ ಗಳಿಸಿದೆ. ಅದೇ ರೀತಿ ದೇಶದ ಒಟ್ಟು 113 ವೈದ್ಯಕೀಯ ಕಾಲೇಜು ಗಳ ಪೈಕಿ 17ನೇ ಸ್ಥಾನ, ದೇಶದ 301 ಔಷಧ ಮಹಾವಿದ್ಯಾಲಯಗಳ ಪೈಕಿ ಮೈಸೂರಿನ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ 10ನೇ ಹಾಗೂ ಊಟಿಯ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ 8ನೇ ಸ್ಥಾನ ಪಡೆದಿವೆ ಎಂದು ತಿಳಿಸಿದರು.

ಅರಿಯಾ ರ್ಯಾಂಕಿಂಗ್‍ನಲ್ಲಿ 4ನೇ ಸ್ಥಾನ: ಎಂಹೆಚ್‍ಆರ್‍ಡಿಯ ಅಟಲ್ ರ್ಯಾಂಕಿಂಗ್ ಆಫ್ ಇನ್ಸ್‍ಟಿಟ್ಯೂಷನ್ಸ್ ಆನ್ ಇನ್ನೋ ವೇಷನ್ಸ್ (ಅರಿಯಾ) ವಿಭಾಗದಲ್ಲಿ ಜೆಎಸ್‍ಎಸ್ ಅಕಾಡೆಮಿ 4ನೇ ಸ್ಥಾನ ಪಡೆದಿದೆ. ದೇಶದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಈ ಸ್ಥಾನ ಗಳಿಸಿದೆ. ಟೈಮ್ಸ್ ಹೈಯರ್ ಎಜುಕೇಷನ್ ವಲ್ರ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ ಪಟ್ಟಿಯಲ್ಲೂ ಜೆಎಸ್‍ಎಸ್ ಅಕಾಡೆಮಿ ಸ್ಥಾನ ಪಡೆದಿದ್ದು, ವಲ್ರ್ಡ್ ಯೂನಿವರ್ಸಿಟಿ ರ್ಯಾಂಕಿಂಗ್‍ನಲ್ಲಿ ಭಾರತ ದಲ್ಲಿ 3ನೇ ಸ್ಥಾನವನ್ನು ಸಂಸ್ಥೆ ಗಳಿಸಿದೆ ಎಂದು ಅವರು ವಿವರಿಸಿದರು.

ಜೆಎಸ್‍ಎಸ್ ಅಕಾಡೆಮಿ ಕುಲಸಚಿವ ಡಾ.ಬಿ.ಮಂಜುನಾಥ್, ನಿರ್ದೇಶಕ (ಶೈಕ್ಷ ಣಿಕ) ಡಾ.ಪಿ.ಎ.ಕುಶಾಲಪ್ಪ, ಸಂಸ್ಥೆಯ ಡಾ.ಸುಮಾ, ಡಾ.ಧನಪಾಲ್, ಡಾ.ಬಾಲ ಸುಬ್ರಹ್ಮಣ್ಯ, ಡಾ.ಪ್ರಮೋದ್‍ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »