ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ
ಮೈಸೂರು

ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ

April 14, 2019

ಮೈಸೂರು: ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾ ವಣೆಯಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನೈತಿಕ ಚುನಾ ವಣೆಗೆ ಬೆಂಬಲಿಸಿ ಮತದಾನ ಮಾಡು ವಂತೆ ಕಡಕೊಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೃಷ್ಣ ತಿಳಿಸಿದರು. ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಟೋ ಲೀವ್ ಖಾಸಗಿ ಕಂಪನಿಯ ಸುಮಾರು 200ಕ್ಕೂ ಹೆಚ್ಚು ನೌಕರರಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಇವಿಎಂ ಹಾಗೂ ವಿವಿಪ್ಯಾಟ್‍ಗಳ ಮೂಲಕ ಮತದಾನ ಮಾಡುವುದರ ಬಗ್ಗೆ ಅರಿವು ಮೂಡಿಸಿದರು. ನಿಮ್ಮ ಮತದಾನ ಹಕ್ಕನ್ನು ನಿರ್ಭೀತಿಯಿಂದ ಸ್ವತಂತ್ರವಾಗಿ ಚಲಾಯಿಸಿ ಎಂದು ಅವರು ತಿಳಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿ ಮಂಜುಳಾ ಪಾಟೀಲ್, ಸೆಕ್ಟರ್ ಅಧಿಕಾರಿ ಭಾಸ್ಕರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಮ್ಮ ಹಾಗೂ ಆಟೋಲೀವ್ ಖಾಸಗಿ ಕಂಪನಿಯ ಸಿಬ್ಬಂದಿಗಳು ಮತ್ತು ನೌಕರರು ಉಪಸ್ಥಿತರಿದ್ದರು.

Translate »