ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ
ಮೈಸೂರು

ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ

April 14, 2019

ಮೈಸೂರು: `ಶ್ರೀ ರಾಮ ನವ ಮಿಯ ದಿವಸ ರಾವi ನಾಮಾಮೃತವೇ ಪಾನಕ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಪದ್ಯದ ಸಾಲುಗಳನ್ನು ನೆನಪಿಸುವಂತೆ ಮೈಸೂರಿನಲ್ಲಿ ಶನಿವಾರ ರಾಮನವಮಿ ಸಂಭ್ರಮ ಕಳೆಕಟ್ಟಿತ್ತು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ನಡೆಯುವ ಶ್ರೀರಾಮನವಮಿ ಅಂಗ ವಾಗಿ ಬೆಳಿಗ್ಗೆಯಿಂದಲೇ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಗೆ ಸಂಗೀತೋತ್ಸವ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾ ಯಿತು. ಅರಮನೆ ಕೋಟೆ ಉತ್ತರ ಬಾಗಿಲು ಶ್ರೀರಾಮ ದೇವಸ್ಥಾನ, ಕೃಷ್ಣಮೂರ್ತಿಪುರಂ ರಾಮಮಂದಿರ, ಕಬೀರ್ ರಸ್ತೆ ಪಾಂಡುರಂಗ ದೇವಸ್ಥಾನದಲ್ಲಿರುವ ಶ್ರೀರಾಮ ಮಂದಿರ, ಜೆ.ಪಿ.ನಗರ ಇ ಬ್ಲಾಕ್ 11ನೇ ಮುಖ್ಯ ರಸ್ತೆಯ ರಾಮ ಮಂದಿರ, ನಾರಾಯಣಶಾಸ್ತ್ರಿ ರಸ್ತೆ ಪ್ರಸನ್ನ ಸೀತಾ ರಾಮ ಮಂದಿರ ಸೇರಿದಂತೆ ಮೈಸೂರಿನ ಎಲ್ಲಾ ರಾಮ ಮಂದಿರಗಳ ಲ್ಲಿಯೂ ಮುಂಜಾನೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ, ಸಹಸ್ರನಾಮ ಪಾರಾಯಣಗಳು ನಡೆದವು.

ಕಬೀರ್‍ರಸ್ತೆ ಪಾಂಡುರಂಗಸ್ವಾಮಿ ದೇವಸ್ಥಾನದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಬಳಿಕ ಜ್ಞಾನೇಶ್ವರಿ ಮಹಾಗ್ರಂಥ ಪಾರಾಯಣ, ಪ್ರವಚನ, ಪಂಡರೀ ಭಜನೆ ನಡೆಯಿತು. ಸರಸ್ವತಿಪುರಂ 2ನೇ ಮುಖ್ಯರಸ್ತೆ ತೆಂಗಿನ ತೋಪು ಸಮುದಾಯ ಭವನದಲ್ಲಿ ಶ್ರೀಶಂಕರ ಜಯಂತಿ ಸಭಾ ವತಿಯಿಂದ ರಾಮೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಅರಸು ಮಂಡಳಿಯಲ್ಲಿ ರಾಮೋತ್ಸವ ನಡೆಯಿತು. ಬೃಂದಾವನ ಬಡಾವಣೆ ಸಾಧನಾ ಮಂದಿರ ಸೇರಿದಂತೆ ವಿವಿಧೆಡೆ ಸಂಗೀತ ಕಾರ್ಯಕ್ರಮಗಳು ನಡೆದವು. ರಾಮಕೃಷ್ಣನಗರ ವೃತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಶಿವರಾಂ ಪೇಟೆ, ನಾರಾಯಣ ಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಕುವೆಂಪುನಗರ, ಶಾರದಾದೇವಿನಗರ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ರಾಮಭಕ್ತರು ಶ್ರೀರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಿ, ಪಾನಕ, ನೀರು ಮಜ್ಜಿಗೆ, ಕೋಸಂಬರಿ ವಿತರಿಸಿದರು.

Translate »