ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್ ನಿಧನ
ಮೈಸೂರು

ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್ ನಿಧನ

April 14, 2019

ಬೆಂಗಳೂರು: ಭಾರತ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ – ಇಸ್ರೋದ ಮಹ ತ್ವದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್(65) ಶನಿವಾರ ನಿಧನರಾದರು. ಕಳೆದ 10 ದಿನ ಗಳಿಂದ ಅನಾರೋಗ್ಯಕ್ಕೀಡಾಗಿ ಬೆಂಗಳೂ ರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾ ಗದೆ ಅಸುನೀಗಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಿವಕುಮಾರ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಮೈಸೂರು ಮೂಲದ ಶಿವಕುಮಾರ್ ಚಂದ್ರಯಾನ ಯೋಜನೆಯಲ್ಲಿ ಚಂದ್ರ ಯಾನ-1ಗೆ ಟೆಲಿಮೆಟ್ರಿ ಸಿಸ್ಟಮ್ ಅಭಿ ವೃದ್ಧಿಪಡಿಸಿದ ತಂಡದ ಸದಸ್ಯರಾಗಿದ್ದರು. ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿವಿನಲ್ಲಿ ಪದವಿ ವ್ಯಾಸಂಗದ ನಂತರ ಬೆಂಗಳೂರಿನ ಐಐಎಸ್ಸಿ ನಲ್ಲಿ ‘ಫಿಸಿಕಲ್ ಎಂಜಿನಿಯರಿಂಗ್’ನಲ್ಲಿ ‘ಎಂ.ಟೆಕ್ ಶಿಕ್ಷಣ’ ಪಡೆದು 1976ರಲ್ಲಿ ಇಸ್ರೋಗೆ ಸೇರಿದ್ದರು. ಇಸ್ರೋ ಬ್ಯಾಲಾಳು ಉಪಗ್ರಹ ಕೇಂದ್ರ ಸ್ಥಾಪನೆಯ ಹಿಂದೆ ಇವರ ಅಪಾರ ಪರಿಶ್ರಮವಿದೆ. ಇಸ್ರೋದ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ಶಿವಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟ ರೇಟ್ ಅಲ್ಲದೆ 2010ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು. ಇಂದು ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.

Translate »