ರಂಗಾಯಣ: ಚಿಣ್ಣರ ಮೇಳಕ್ಕೆ ಚಾಲನೆ
ಮೈಸೂರು

ರಂಗಾಯಣ: ಚಿಣ್ಣರ ಮೇಳಕ್ಕೆ ಚಾಲನೆ

April 14, 2019

ಮೈಸೂರು: ರಂಗಾಯಣದ ವನರಂಗದಲ್ಲಿ ಚಿಣ್ಣರಿಗೆ `ರಂಗಸಂಗೀತ ದೀಕ್ಷೆ’ ನೀಡಿ, ಗಿಡಕ್ಕೆ ನೀರು ಹಾಕುವ ಮೂಲಕ ಈ ಬಾರಿಯ ಚಿಣ್ಣರ ಮೇಳ-2019ಕ್ಕೆ ಚಾಲನೆ ನೀಡಲಾಯಿತು.

ಇಂದಿನಿಂದ ಮೇ 8 ರವರೆಗೆ ಚಿಣ್ಣರ ಮೇಳ ನಡೆಯಲಿದ್ದು, ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ರಚಿತ `ಕಾಯೇ ಶ್ರೀ ಗೌರಿ’, ಬಿಎಂಶ್ರೀ ರಚಿತ `ಕರುಣಾಳು ಬಾ ಬೆಳಕೆ’, ಪುರಂದರ ದಾಸರ `ಲೊಳ ಲೊಟ್ಟೆ’ ಗೀತೆ ಹಾಡು ವುದರ ಮೂಲಕ ಹಿರಿಯ ಕಲಾವಿದ ರಾಮಚಂದ್ರ ಹಡಪದ ರಂಗಸಂಗೀತ ದೀಕ್ಷೆ ನೀಡಿದರೆ, ಅಸ್ಸಾಂ ಚಲನಚಿತ್ರ ನಿರ್ದೇಶಕ ಬಾರುಲ್ ಇಸ್ಲಾಂ ಇತರೆ ಗಣ್ಯರು ಗಿಡಕ್ಕೆ ನೀರು ಹಾಕುವ ಮೂಲಕ ಚಿಣ್ಣರ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ನಿರ್ದೇಶಕ ಬಾರುಲ್ ಇಸ್ಲಾಂ ಮಾತನಾಡಿ, ಮಕ್ಕಳು ರಂಗಭೂಮಿ ಚಟು ವಟಿಕೆಯಲ್ಲಿ ತೊಡಗಿಕೊಳ್ಳುವುದ ರಿಂದ ಭವಿಷ್ಯದಲ್ಲಿ ಪ್ರಜ್ಞಾವಂತರಾಗಿ, ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ರಂಗಭೂಮಿ ಚಟುವಟಿಕೆಗಳಿಂದ ಮಕ್ಕಳು ಉತ್ತಮ ಕಲಾ ವಿದರಾಗದಿದ್ದರೂ ಭವಿಷ್ಯ ದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುತ್ತಾರೆ. ಸಾಮಾಜಿಕ ಪ್ರಜ್ಞೆ, ಅವರ ಆಲೋಚನಾ ಕ್ರಮ ಸೇರಿ ದಂತೆ ದಿನನಿತ್ಯ ಕಾರ್ಯ ಚಟುವಟಿಕೆಗಳಲ್ಲೂ ಬದಲಾವಣೆ ಕಾಣ ಬಹುದು ಎಂದರು.

ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ಹಾಡು, ನೃತ್ಯ ಕಲಿತರೆ ಒಬ್ಬರೇ ಪ್ರದರ್ಶಿಸ ಬಹುದು. ಆದರೆ, ಒಬ್ಬ ವ್ಯಕ್ತಿಯಿಂದ ನಾಟಕ ಪ್ರದರ್ಶಿಸಲು ಸಾಧ್ಯವಿಲ್ಲ. ಆದ್ದ ರಿಂದ ಈ ಚಿಣ್ಣರ ಮೇಳದಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ನಾಟಕಗಳ ಕಲಿಕೆಗೂ ಅವಕಾಶವಿದೆ ಎಂದರು.

26 ದಿನಗಳ ಚಿಣ್ಣರ ಮೇಳದಲ್ಲಿ ಸಾಧ್ಯವಾದಷ್ಟು ಕಲಿಕೆಗೆ ಹೆಚ್ಚಿನ ಅವ ಕಾಶವಿದೆ. ಮಕ್ಕಳೊಂದಿಗೆ ಎಲ್ಲರೂ ಮಕ್ಕ ಳಾಗಿ ಬೆರೆಯಬೇಕು. ಆಗ ಮಾತ್ರ ಚಿಣ್ಣರ ಮೇಳದ ಉದ್ದೇಶ ಸಫಲವಾಗುತ್ತದೆ . ಪ್ರತಿಯೊಬ್ಬರೂ ಒಳ್ಳೆಯ ಆಸೆ, ಕನಸು ಗಳನ್ನು ಕಟ್ಟುತ್ತಾ ಹೋಗೋಣ ಎಂದರು.

ಈ ಬಾರಿಯ ಚಿಣ್ಣರ ಮೇಳದಲ್ಲಿ 7ರಿಂದ 14 ವರ್ಷದೊಳಗಿನ 450ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದು, ಇವರನ್ನು 9 ತಂಡಗಳಾಗಿ ವಿಂಗಡಿಸ ಲಾಗಿದೆ. ಸಮಯ ಪ್ರಜ್ಞೆ, ಕಾಳಜಿ, ಸರಳ ಜೀವನ, ದೃಷ್ಟಿ, ವಿಶ್ವಾಸ, ಅಂತರ್ಮುಖಿ, ಅನುರಾಗ, ಪರಿವರ್ತನೆ, ಸ್ನೇಹ, ಸ್ವೀಕಾರ ಎಂಬ ಹೆಸರುಗಳನ್ನು ತಂಡಗಳಿಗೆ ಇಡಲಾಗಿದೆ. ವಿಶೇಷ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ಕಲಾತ್ಮಕ ಸೃಜನಶೀಲ ರಂಗಪಯಣವನ್ನು ನಡೆಸಲಿ z್ದÁರೆ ಎಂದರು. ನಂತರ ವಿವಿಧ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಜಾನಪದ ಕಲೆಗಳನ್ನು ಪ್ರದ ರ್ಶಿಸಿದರು. ರಂಗಾಯಣದ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ವೇದಿಕೆಯಲ್ಲಿ ಇದ್ದರು.

Translate »