ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಶಾಸಕ ಸಿ.ಟಿ.ರವಿ
ಹಾಸನ

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಶಾಸಕ ಸಿ.ಟಿ.ರವಿ

April 8, 2019

ಬೇಲೂರು: ಚೌಕಿದಾರ ಮತ್ತು ಚೋರರ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಪಟ್ಟಣದ ದೇವಾಂಗ ಬೀದಿಯ ಸಮೀಪ ದಲ್ಲಿರುವ ರೇಣುಕಾ ಚಿತ್ರಮಂದಿರದ ಪಕ್ಕ ದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಂದೆಡೆ ಆಂತರಿಕ ಭಯೋತ್ಪಾದನೆ ಇನ್ನೊಂದೆಡೆ ಬಾಹ್ಯ ವಾಗಿ ಶತ್ರು ರಾಷ್ಟ್ರಗಳ ದಾಳಿ ನಡೆಯು ತ್ತಿದ್ದರೂ, ಇದಾವುದಕ್ಕೂ ಹೆದರದೇ 5 ವರ್ಷ ಆಡಳಿತ ನಡೆಸಿ ಮಹತ್ತರ ಬದ ಲಾವಣೆಯನ್ನು ಮೋದಿ ಮಾಡಿದ್ದಾರೆ. ನಿರುದ್ಯೋಗ, ಬಡತನ, ಭಯೋತ್ಪಾದನೆ, ಭ್ರಷ್ಟಾಚಾರದಂತಹ ಹಲವು ಪಿಡುಗುಗಳನ್ನು ನಾಶ ಮಾಡಿದ್ದಾರೆ ಎಂದು ತಿಳಿಸಿದರು.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಹದಗೆಟ್ಟಿದ್ದ ಆರ್ಥಿಕ ವ್ಯವಸ್ಥೆಯನ್ನು ತಹಬದಿಗೆ ತಂದಿ ದ್ದಾರೆ. ನಿರುದ್ಯೋಗ, ಬಡತನ, ಭ್ರಷ್ಟಾ ಚಾರ, ಭಯೋತ್ಪಾದನೆ ಅಂತಹ ಪಾರ್ಶ್ವ ವಾಯುವಿನಿಂದ ನರಳುತ್ತಿದ್ದ ದೇಶವನ್ನು ಸುಸ್ಥಿತಿಗೆ ತಂದಿದ್ದಾರೆ ಎಂದರು.

ಒಂದೇ ದೇಶ, ಒಂದೇ ತೆರಿಗೆ ಜಾರಿಗೆ ತರುವ ಮೂಲಕ ಚೆಕ್‍ಪೆÇೀಸ್ಟ್‍ಗಳಲ್ಲಿ ನಡೆ ಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತಡೆಗಟ್ಟಿದ್ದಾರೆ. ವಿದೇಶದಲ್ಲೂ ನಮ್ಮ ದೇಶ ವನ್ನು ಪ್ರಶಂಸಿಸುವಂತೆ ಮಾಡಿದ ಏಕೈಕ ಪ್ರಧಾನಿ ಮೋದಿ ಎಂದು ಬಣ್ಣಿಸಿದರು.
ದೇವೇಗೌಡರ ಕುಟುಂಬದವರಿಗೆ ಮತ ದಾರರನ್ನು ಕೊಳ್ಳುವಷ್ಟು ಹಣವಿದೆ ಎಂಬ ಅಹಂ ಮನೆ ಮಾಡಿದೆ. ಅವರು ಮತದಾ ರರನ್ನು ಸಂತೆಯ ಕುರಿಗಳು ಎಂದುಕೊಂಡಿ ದ್ದಾರೆ. ಆದರೆ, ನಾವು ಸಂತೆಯ ಕುರಿ ಗಳಲ್ಲ. ಪ್ರಜ್ಞಾವಂತ ಮತದಾರರು ಎಂದು ಈ ಬಾರಿ ಮತದಾನ ಮಾಡುವ ಮೂಲಕ ಉತ್ತರ ನೀಡಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಮಾತನಾಡಿ, ದೇಶಕ್ಕೆ ಮೋದಿ ಅನಿವಾ ರ್ಯತೆ ಇದೆ ಎಂದು ಈಗಾಗಲೇ ಕಟ್ಟಕ ಡೆಯ ಮತದಾರನಿಗೂ ತಿಳಿದಿದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ಏಕೈಕ ಪ್ರಧಾನಿ ಮೋದಿ ಎಂಬುದು ಬೇರೆ ರಾಷ್ಟ್ರಗಳಿಗೆ ಮನವರಿಕೆ ಆಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಬೆಣ್ಣೂರು ರೇಣುಕುಮಾರ್, ಜಿಲ್ಲಾ ಉಪಾ ಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಹೆಚ್.ಕೆ. ಸುರೇಶ್, ತಾಲೂಕು ಅಧ್ಯಕ್ಷ ಕೊರಟಿಗೆರೆ ಪ್ರಕಾಶ್, ಮಾಜಿ ಅಧ್ಯಕ್ಷ ಜಿ.ಕೆ.ಕುಮಾರ್, ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಚೇತನ ಕುಮಾರ್, ಮುಖಂಡರಾದ ಶಿವ ಕುಮಾರ್, ದರ್ಶನ್, ರೇಣುಕಾನಂದ, ಹೊಸಳ್ಳಿ ರಾಜು ಇತರರು ಇದ್ದರು.

Translate »