ವಿಕಲಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಿ  ಪ್ರಾದೇಶಿಕ ಆಯುಕ್ತ ಅನಿಲ್‍ಕುಮಾರ್ ಸೂಚನೆ
ಹಾಸನ

ವಿಕಲಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಿ ಪ್ರಾದೇಶಿಕ ಆಯುಕ್ತ ಅನಿಲ್‍ಕುಮಾರ್ ಸೂಚನೆ

April 8, 2019

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಕಲಚೇತನರ ಮತದಾನಕ್ಕೆ ವಿಶೇಷ ಸೌಲಭ್ಯಗಳನ್ನು ಚುನಾವಣಾ ಆಯೋಗ ಕಲ್ಪಿಸುತ್ತಿದ್ದು, ಅದಕ್ಕಾಗಿ ಅಗತ್ಯ ಕ್ರಮ ವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಅನಿಲ್‍ಕುಮಾರ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಭಾನು ವಾರ ನಡೆದ ಲೋಕಸಭಾ ಚುನಾವಣೆಯ ವಿಶೇಷ ಚೇತನರ ಸೌಲಭ್ಯ ಪೂರ್ವಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾ ಡಿದ ಅವರು, ಜಿಲ್ಲೆಯಲ್ಲಿ ಇರುವ ಎಲ್ಲಾ ವಿಕಲಚೇತನ ಮತದಾ ರರ ಮ್ಯಾಪಿಂಗ್ ಕಾರ್ಯ ನಡೆಯಬೇಕು. ಎಲ್ಲರಿಗೂ ಗುರುತಿನ ಚೀಟಿ ವಿತರಣೆಯಾಗಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ಮಾತಗಟ್ಟೆಗಳಲ್ಲಿ ರ್ಯಾಂಪ್ ಇರಬಹುದು. ಆದರೆ ಅಲ್ಲಿಯ ವರೆಗೆ ವಿಕಲಚೇತನರು ವಾಹನಗಳ ಮೂಲಕ ತಲುಪಲು ಮಾರ್ಗ ಇದೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಾ 1985 ಮತಗಟ್ಟೆಗಳಲ್ಲಿ ಗಾಲಿ ಖುರ್ಚಿ ಲಭ್ಯವಿರುವಂತೆ ನೋಡಿಕೊಳ್ಳಿ, 18 ವರ್ಷಗೊಳಗಿನ ಸ್ವಯಂ ಸೇವಕರನ್ನು ಮತಗಟ್ಟೆಗಳಲ್ಲಿ ಮತದಾರರ ಸಹಾಯಕ್ಕಾಗಿ ನೇಮಕ ಮಾಡಿಕೊಳ್ಳಿ, ಸಾಧ್ಯವಾದರೆ ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಅವ ರನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ವಿಕಲಚೇತನರನ್ನು ಮತಗಟ್ಟೆಗೆ ಕರೆತರಲು ನಿಯೋಜಿಸಲ್ಪಟ್ಟಿ ರುವ ಆಟೋ ಚಾಲಕರಿಗೆ ಮೊದಲೇ ಕರೆದು ನಿಷ್ಪಕ್ಷಪಾತ ಸೇವೆಗೆ ಸೂಚನೆ ನೀಡಬೇಕು. ಬಳಸಲ್ಪಟ್ಟಿರುವ ಆಟೋದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯ ಫೋಟೋ, ಚಿಹ್ನೆಗಳು ಇರ ದಂತೆ ಎಚ್ಚರವಹಿಸಬೇಕು ಹಾಗೂ ಇಂತಹ ಆಟೋಗಳನ್ನು ಸೆಕ್ಟರ್ ಅಧಿಕಾರಿಗಳ ನಿಗಾಕ್ಕೆ ವಹಿಸಬೇಕು ಎಂದು ತಿಳಿಸಿದರು.

ವಿಕಲಚೇತನರ ನೆರವು ಹಾಗೂ ಸೌಲಭ್ಯಗಳ ಪೂರೈಕೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿ ಪಾಲನೆ ಯಾಗುತ್ತಿರುವುದನ್ನು ಪರಿಶೀಲಿಸಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಎನ್.ವಿಜಯಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ 1985 ಮತಗಟ್ಟೆ ಗಳಿವೆ. ಇದರಲ್ಲಿ 12,811 ವಿಕಲಚೇತನರಿದ್ದಾರೆ. ಅದರಲ್ಲಿ 2,074 ಮಂದಿ ತೀವ್ರ ಸ್ವರೂಪದ ವಿಕಲಚೇತನರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ 901 ಗಾಲಿ ಖುರ್ಚಿಗಳು ಲಭ್ಯವಿದ್ದು, ಉಳಿದ 1,084 ಗಾಲಿ ಖುರ್ಚಿಗಳ ಖರೀದಿಗೆ ಆದೇಶ ನೀಡಲಾಗಿದ್ದು, ಒಂದೆರಡು ದಿನಗಳಲ್ಲಿ ಆಗಮಿಸಲಿವೆ. ಈಗಾಗಲೇ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಯನ್ನು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎಲ್ಲಾ ರೀತಿಯ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿಕಲಚೇತನರನ್ನು ಮತಗಟ್ಟೆಗೆ ಕರೆತಂದು ಕರೆದೊಯ್ಯಲು ಈಗಾಲೇ ಸಾರಿಗೆ ವ್ಯವಸ್ಥೆ ಯೋಜನೆ ರೂಪಿಸಿ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

Translate »