ಲೋಕಸಭಾ ಚುನಾವಣೆ: ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳ ಸಭೆ
ಹಾಸನ

ಲೋಕಸಭಾ ಚುನಾವಣೆ: ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳ ಸಭೆ

April 8, 2019

ನಿರ್ಲಕ್ಷ್ಯ ವಹಿಸುವವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ
ಹಾಸನ: ಲೋಕಸಭಾ ಚುನಾ ವಣೆಯಲ್ಲಿ ವಿಕಲಚೇತನ ಮತದಾರರ ಮತದಾನ ಸೌಲಭ್ಯ ಪೂರೈಕೆ ವಿಲೇವಾರಿ ಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸ ಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್. ವಿಜಯಪ್ರಕಾಶ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಭಾನುವಾರ ಪ್ರಾದೇಶಿಕ ಚುನಾ ವಣಾ ಆಯುಕ್ತರ ಸಭೆಯ ನಂತರ ನಡೆದ ಜಿಲ್ಲಾ ಮಟ್ಟದ ಚುನಾವಣಾಧಿಕಾರಿ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯ ಮತದಾನ ವ್ಯವಸ್ಥೆಯಲ್ಲಿ ಏ. 18ರಂದು ವಿಕಲಚೇತನ ರಿಗೆ ಹಲವು ಸೌಲಭ್ಯಗಳನ್ನು ನೀಡಬೇಕಾ ಗಿದೆ. ಅದಕ್ಕಾಗಿ ಪೂರ್ವಸಿದ್ಧತೆ ಮಾಡಿ ಕೊಳ್ಳಬೇಕಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಡಿ ಪಿಓಗಳು ನಗರ ಸ್ಥಳೀಯ ಸಂಸ್ಥೆಯ ಅಧಿ ಕಾರಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇದನ್ನು ಕರ್ತವ್ಯ ಲೋಪ ಎಂದು ಭಾವಿಸ ಲಾಗುತ್ತದೆ ಎಂದು ಹೇಳಿದರು.

ಪ್ರಾದೇಶಿಕ ಆಯುಕ್ತರ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಹಾಗೂ ಸಮ ರ್ಪಕವಾಗಿ ಉತ್ತರ ನೀಡಲು ವಿಫಲ ರಾದವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಡಾ.ಕೆ.ಎನ್.ವಿಜಯ ಪ್ರಕಾಶ್ ಸೂಚನೆ ನೀಡಿದರು.

ಎಲ್ಲಾ ತಾಲೂಕುಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಳು, ಸಿಡಿಪಿಓಗಳು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಂಟಿ ಸಭೆ ನಡೆಸಿ, ತಾಲೂಕಿನಲ್ಲಿರುವ ವಿಕಲಚೇತನರ ಹೆಸರು- ದೂರವಾಣಿ ಸಂಖ್ಯೆಗಳನ್ನು ಪಟ್ಟಿಮಾಡಿ ಅವರನ್ನು ಸಂಪರ್ಕಿಸಿ ಮತದಾನದ ದಿನ ದಂದು ಅವರನ್ನು ಕರೆದೊಯ್ಯುವ ವಾಹನ ಸೌಲಭ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.

ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದ್ದಂತೆ ಕಾಣುತ್ತಿದೆ. ಇದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು. ಲೋಕ ಸಭಾ ಚುನಾವಣೆಯಲ್ಲಿ ಮತದಾನದ ದಿನದಂದು ವಿಕಲ ಚೇತನರ ಸೌಲಭ್ಯ ವಿತ ರಣೆಯಲ್ಲಿ ಹಾಗೂ ಯಾವುದೇ ಕರ್ತವ್ಯ ಲೋಪ ಸಹಿಸಲಾಗದು ಎಂದು ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು.

ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ ದಾರಿಗಳ ಬಗ್ಗೆ ಗಮನ ಹರಿಸಬೇಕು. ಮತ ಗಟ್ಟೆಗಳಲ್ಲಿ ವಿದ್ಯುಚ್ಛಕ್ತಿ ವ್ಯವಸ್ಥೆ ಸಮರ್ಪಕ ವಾಗಿದೆಯೇ ಎಂಬುದನ್ನು ಆಯಾಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿ ಶೀಲಿಸಿ ಖಾತರಿ ಪಡಿಸಬೇಕು. ಪ್ರತಿಯೊ ಬ್ಬರು ಮತಗಟ್ಟೆಗಳನ್ನು ಕನಿಷ್ಠ ಮೂಲ ಸೌಕರ್ಯ ಒದಗಿಸುವ ಬಗ್ಗೆ ಗಮನಹರಿಸ ಬೇಕು. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಬಗ್ಗೆಯೂ ನಿಗಾವಹಿಸಬೇಕು ಎಂದು ಹೇಳಿದರು.

ಎಲ್ಲಾ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರು ವಿವರನ್ನು ಪ್ರತಿ ಪಿಆರ್‍ಓ ಗಳಿಗೆ ನೀಡಬೇಕು ಮತ್ತು ಮತದಾನ ಮಾಡುವ ಪ್ರತಿ ವಿಕಲಚೇತನ ಮತದಾ ರರ ವಿವರಗಳನ್ನು ನಮೂದಿಸಿ ಅಂಕಿ ಅಂಶ ದಾಖಲಿಸಬೇಕು ಎಂದರು.

ಅಂಧ ಮತದಾರರಿಗೆ ಮತದಾನದ ಬ್ರೆಲ್ ಬ್ಯಾಲೆಟ್ ಪೇಪರ್, ಭೂತಗಾಜಿನ ಸೌಲಭ್ಯ ಒದಗಿಸುವ ಬಗ್ಗೆ ಹಾಗೂ ವಿಕಲ ಚೇತನ ತರಬೇತಿ ಸಮನ್ವಯದ ಜವಾ ಬ್ದಾರಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಗಳು ಪ್ರತಿ ತಾಲೂಕು ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮಾಹಿತಿ ಮಾರ್ಗದರ್ಶನ, ನೆರವು ಸಹಕಾರ ಒದಗಿಸಿ ಎಂದರು.

ಸಭೆಯಲ್ಲಿ ಡಿಡಿಪಿಐ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪಾಪಬೋವಿ, ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಎಲ್ಲಾ ನಗರ ಸ್ಥಳೀಯ ಮುಖ್ಯಾಧಿಕಾರಿಗಳು, ಸಿಡಿಪಿಓ ಗಳು ಹಾಜರಿದ್ದರು.

ತಾಲೂಕುವಾರು ಭಾಗಶಃ ಹಾಗೂ ಪೂರ್ಣ ದೃಷ್ಟಿ ದೋಷ ಹೊಂದಿರುವವರ ಪಟ್ಟಿ ಮಾಡಿ ತಕ್ಷಣವೇ ವರದಿ ನೀಡು ವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ 1,35,000 ಹಿರಿಯ ನಾಗರಿಕರಿದ್ದು ಅದರಲ್ಲಿ 90 ವರ್ಷ ಮೀರಿದ 4,095 ಮಂದಿಯಿದ್ದಾರೆ. ಅಂತವರಲ್ಲಿ ನಡೆ ದಾಡಲು ಆಗದೆ ಇರುವ ಪರಿಸ್ಥಿತಿ ಇರುವವನ್ನು ಗುರುತಿಸಿ ಪಟ್ಟಿ ನೀಡಬೇಕು.
-ಡಾ.ಕೆ.ಎನ್.ವಿಜಯಪ್ರಕಾಶ್, ಸಿಇಓ

Translate »