ವೇಶ್ಯಾವಾಟಿಕೆ ಆರೋಪ: ಇಬ್ಬರ ಬಂಧನ
ಕೊಡಗು

ವೇಶ್ಯಾವಾಟಿಕೆ ಆರೋಪ: ಇಬ್ಬರ ಬಂಧನ

April 8, 2019

ಸೋಮವಾರಪೇಟೆ: ಪಟ್ಟಣ ಸಮೀಪದ ಮನೆಯೊಂದರಲ್ಲಿ ವೇಶ್ಯಾ ವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸೋಮವಾರಪೇಟೆ ಪಟ್ಟಣ ಸಮೀಪದ ನೂತನ ಮನೆಯೊಂದರಲ್ಲಿ ಬೆಂಗಳೂರಿ ನಿಂದ ಆಗಮಿಸಿದ ಕೆಲವರು ವೇಶ್ಯಾವಾ ಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದ್ದು, ರಾತ್ರಿ 10.30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಬೆಂಗ ಳೂರು ಮೂಲದ ಈರ್ವರು ಮಹಿಳೆ ಯರು ಕಂಡು ಬಂದಿದ್ದು, ಅವರನ್ನು ಮಡಿ ಕೇರಿಯ ಸಾಂತ್ವನ ಕೇಂದ್ರಕ್ಕೆ ಕಳುಹಿಸ ಲಾಗಿದೆ. ಆರೋಪಿಗಳಾದ ಬೆಂಗ ಳೂರಿನ ಮುನಿರಾಜು ಮತ್ತು ಬಿಜೇಶ್ ಅವರುಗಳನ್ನು ವಶಕ್ಕೆ ಪಡೆದು, ಮೊಕ ದ್ದಮೆ ದಾಖಲಿಸಲಾಗಿದೆ. ನ್ಯಾಯಾ ಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಮನೆಯ ಮಾಲೀಕರು ಹೊರಭಾಗದಲ್ಲಿ ನೆಲೆಸಿದ್ದು, ಅವರಿಗೆ ತಪ್ಪು ಮಾಹಿತಿ ನೀಡಿ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

Translate »