ಸಿಬಿಐ ಮುಂದೆ ಹಾಜರಾಗಲು ಕೊಲ್ಕತ್ತಾ  ಪೊಲೀಸ್ ಕಮಿಷನರ್‍ಗೆ ‘ಸುಪ್ರೀಂ’ ನಿರ್ದೇಶನ
ಮೈಸೂರು

ಸಿಬಿಐ ಮುಂದೆ ಹಾಜರಾಗಲು ಕೊಲ್ಕತ್ತಾ ಪೊಲೀಸ್ ಕಮಿಷನರ್‍ಗೆ ‘ಸುಪ್ರೀಂ’ ನಿರ್ದೇಶನ

February 6, 2019

ಕೊಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ಹಾಜರಾಗುವಂತೆ ಕೊಲ್ಕತ್ತಾ ಪೆÇಲೀಸ್ ಕಮಿಷನರ್ ರಾಜೀವ್ ಕುಮಾರ್ ಅವ ರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ಸಿಬಿಐಗೆ ತನಿಖಾ ವೇಳೆ ಸಹ ಕಾರ ನೀಡುವಂತೆಯೂ ಸೂಚಿಸಿದೆ.

ಈ ಮಧ್ಯೆ ಮಧ್ಯಂತರ ಪರಿಹಾರ ಕೋರಿ ರಾಜೀವ್ ಕುಮಾರ್ ಕೊಲ್ಕತ್ತಾ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿ ವಿಚಾ ರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಗಿದೆ. ಶಾರದಾ ಹಾಗೂ ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇವುಗಳ ವಿದ್ಯುನ್ಮಾನ ಸಾಕ್ಷ್ಯಗಳನ್ನು ನಾಶಪಡಿಸಲು ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಭಾನುವಾರ ಪೆÇಲೀಸ್ ಕಮಿಷ ನರ್ ರಾಜೀವ್ ಕುಮಾರ್ ಅವರ ನಿವಾ ಸಕ್ಕೆ ಆಗಮಿಸಿದ ಬಳಿಕ ಕೊಲ್ಕತ್ತಾ ಪೆÇಲೀಸರು ಐದು ಸಿಬಿಐ ಅಧಿಕಾರಿ ಗಳನ್ನು ಬಂಧಿಸಿದ್ದರು. ನಂತರ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ಆರಂಭಿಸಿದ್ದರು. ಈ ಮಧ್ಯೆ ನ್ಯಾಯಾಲಯ ಹಾಗೂ ಎಲ್ಲಾ ಸಂಸ್ಥೆಗಳ ಬಗ್ಗೆ ಅಪಾರ ಗೌರವವಿದೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಬದ್ಧರಾಗಿರುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನ್ಯಾಯಾಂಗ ನಿಂದನೆ ಅರ್ಜಿ ಆಧಾರದಲ್ಲಿ ಪಶ್ಚಿಮ ಬಂಗಾಳ ಸರ್ಕಾರ, ಡಿಜಿಪಿ ಹಾಗೂ ಕೊಲ್ಕತ್ತಾ ಪೆÇಲೀಸ್ ಆಯುಕ್ತರಿಗೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಶಿಲ್ಲಾಂಗ್ ನಲ್ಲಿ ಸಿಬಿಐ ಮುಂದೆ ರಾಜೀವ್ ಕುಮಾರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಧರಣಿ ಅಂತ್ಯಗೊಳಿಸಿದ ಮಮತಾ ಬ್ಯಾನರ್ಜಿ: ರಾಜ್ಯ ಪೆÇಲೀಸ್ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಕ್ರಮವನ್ನು ಖಂಡಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಇಂದು ಸಂಜೆ ಅಂತ್ಯಗೊಳಿಸಿದರು. ಅಲ್ಲದೇ, ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸುಪ್ರೀಂಕೋರ್ಟ್ ನೀಡಿದ ಆದೇಶ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಧರಣಿ ಅಂತ್ಯಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಮೈತ್ರಿಯಲ್ಲಿ ಒಂದಾದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಂದು ಬ್ಯಾನರ್ಜಿ ಅವರೊಂದಿಗೆ ಧರಣಿ ವೇದಿಕೆ ಹಂಚಿಕೊಂಡು, ಹೋರಾಟ ಕೈಬಿಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 46 ಗಂಟೆಗಳ ಧರಣಿಯನ್ನು ಮಮತಾ ಬ್ಯಾನರ್ಜಿ ಹಂತೆಗೆದುಕೊಂಡರು. ಚಂದ್ರಬಾಬು ನಾಯ್ಡು, ಬಂಗಾಳ ಸಿಎಂ ಮಮತಾ ವಿರೋಧ ಪಕ್ಷಗಳ ಪ್ರಮುಖವಾದ ಮುಖ ಎಂದು ಬಣ್ಣಿಸಿ, ತಮ್ಮ ಟಿಎಂಸಿ ಪಕ್ಷವೂ 42 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಹೇಳಿದರು.

Translate »