ರೈತರ ಸತಾಯಿಸುವ ಅಧಿಕಾರಿಗಳ ಅಮಾನತು
ಮೈಸೂರು

ರೈತರ ಸತಾಯಿಸುವ ಅಧಿಕಾರಿಗಳ ಅಮಾನತು

December 9, 2018

ಮೈಸೂರು: ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ರೈತ ರನ್ನು ಅಲೆದಾಡಿಸುವ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಎಚ್ಚರಿಸಿದರು.

ಇಲವಾಲ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶನಿವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಉಂಡುವಾಡಿ ಯೋಜನೆ ಪೂರ್ಣಗೊಂಡ ನಂತರ ನಾಲ್ಕೈದು ದಶಕಗಳ ಕಾಲ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ. ಯೋಜ ನೆಗೆ ಕನಿಷ್ಠ 3 ವರ್ಷಗಳ ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೆ ಜನರಿಗೆ ಸಮರ್ಪಕವಾಗಿ ನೀರು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಖಾತೆ, ಪೋಡಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸರಿಯಾಗಿ ಕರ್ತವ್ಯ ನಿರ್ವಹಿಸದೆ ರೈತರನ್ನು ಅಲೆದಾಡಿಸುವ ಅಧಿಕಾರಿಗಳನ್ನು ಅಮಾನತು ಮಾಡಿ, ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜನ ಸಂಪರ್ಕ ಸಭೆಯೊಂದಿಗೆ ಕಂದಾಯ ಮತ್ತು ಪಿಂಚಣಿ ಅದಾಲತ್ ನಡೆಸಿದ ಜಿಟಿಡಿ, ರೈತರ ಸಮಸ್ಯೆಗಳನ್ನು ಆಲಿಸಿ, ಖಾತೆ ವಿಳಂಬ ವಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು. ಕೆರೆ ಸಂರಕ್ಷಣೆ, ಸರ್ವೇ ಕಾರ್ಯ, ಒತ್ತುವರಿ ತೆರವುಗೊಳಿಸಬೇಕೆಂಬ ರೈತರ ಮನವಿಗೆ ಸ್ಪಂದಿಸಿ, ತ್ವರಿತ ಕ್ರಮ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ಪ್ರವಾಸ ಆರಂಭಿಸು ವಷ್ಟರಲ್ಲಿ ವೃದ್ಧಾಪ್ಯ, ವಿಕಲಾಂಗಚೇತನ, ವಿಧವಾ ವೇತನ ಸೇರಿ ದಂತೆ ಪಿಂಚಣಿ ಸೌಲಭ್ಯಗಳ ಬಗ್ಗೆ ದೂರು ಕೇಳಿಬರದಂತೆ ಸಮಸ್ಯೆಗಳನ್ನು ನಿವಾರಿಸಬೇಕೆಂದು ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್, ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಜ್ಯೋತಿ, ತಹಸೀ ಲ್ದಾರ್ ರಮೇಶ್‍ಬಾಬು, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ತಾಪಂ ಉಪಾ ಧ್ಯಕ್ಷ ಮಂಜು, ಇಓ ಲಿಂಗರಾಜಪ್ಪ, ಇಲ ವಾಲ ಗ್ರಾಪಂ ಉಪಾಧ್ಯಕ್ಷ ಗಂಗಾಧರ ಗೌಡ ಸೇರಿದಂತೆ ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿವಿಧ ಕಾಮಗಾರಿಗಳಿಗೆ ಚಾಲನೆ: ಸಭೆಯ ಬಳಿಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಟಿಡಿ ಚಾಲನೆ ನೀಡಿದರು. ಜಯಪುರ ಹೋಬಳಿ ಕೆಂಚಲ ಗೂಡು ಗ್ರಾಮ ವ್ಯಾಪ್ತಿಯ ಸುಮಾರು 180 ಎಕರೆ ಭೂಮಿಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 235 ಕೋಟಿ ವೆಚ್ಚದಲ್ಲಿ ವಸತಿ ಬಡಾವಣೆ ಅಭಿವೃದ್ಧಿಪಡಿಸಲಾಗಿದ್ದು, ಈಗಾಗಲೇ ವಿವಿಧ ವರ್ಗದ 2347 ನಿವೇಶನ ಗಳು ಹಾಗೂ 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಡಾವಣೆಗೆ ಹೊಂದಿ ಕೊಂಡಂತಿರುವ ಕೆಂಚಲಗೂಡು ಗ್ರಾಮ ದಲ್ಲಿ ಸುಮಾರು 1.84 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಂಡಿರುವ ರಸ್ತೆ ಡಾಂಬರೀಕರಣ, ಮಳೆ ನೀರು ಚರಂಡಿ, ಒಳ ಚರಂಡಿ, ಕುಡಿಯುವ ನೀರಿನ ಸಂಪರ್ಕ ಹಾಗೂ ಶಾಲಾ ಕೊಠಡಿ ನಿರ್ಮಾಣ ಸೇರಿ ದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿಟಿಡಿ ಚಾಲನೆ ನೀಡಿದರು.

ಬಳಿಕ ಧನಗಳ್ಳಿ ಗ್ರಾಮದಲ್ಲಿ ಒಂದು ಟ್ಯಾಂಕ್, 2500 ಮೀ ಒಳಚರಂಡಿ ನಿರ್ಮಾಣ ಸೇರಿ ದಂತೆ ಕೋಟಿ ರೂ. ಅಂದಾಜಿನ ಕಾಮ ಗಾರಿ, ಮೂಗನಹುಂಡಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ಅಂದಾಜು ಮೊತ್ತದ 7 ಅಡ್ಡ ಮೋರಿಗಳ ಸಹಿತ ಸುಮಾರು 290 ಮೀ. ಕಾಂಕ್ರೀಟ್ ಚರಂಡಿ ನಿರ್ಮಾಣ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಮಹಾ ಲಕ್ಷ್ಮೀ ಬಡಾವಣೆ, ಕೇರ್ಗಳ್ಳಿ ಗ್ರಾಮದ ಸರ್ವೇ ನಂ53ರಲ್ಲಿ ರಚಿಸಿರುವ ರೆವಿನ್ಯೂ ಬಡಾವಣೆಗೆ ಒಳಚರಂಡಿ ಮತ್ತು ವಾಟರ್ ಟ್ಯಾಂಕ್ ಸಂಪರ್ಕವನ್ನು ಕಲ್ಪಿಸುವ ಕಾಮ ಗಾರಿ ಸೇರಿದಂತೆ ಸುಮಾರು 25 ಲಕ್ಷ ರೂ. ಅಂದಾಜು ಅಂದಾಜು ಮೊತ್ತದ ಕಾಮ ಗಾರಿಗಳಿಗೆ ಅಡಿಗಲ್ಲಿಟ್ಟರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್.ಮಾದೇಗೌಡ, ಎಪಿಎಂಸಿ ಸದಸ್ಯ ಕೋಟೆಹುಂಡಿ ಮಹದೇವು, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹೆಚ್.ಸಿ. ರಾಜು, ಮುಖಂಡ ಬೆಳವಾಡಿ ಶಿವಮೂರ್ತಿ, ತಾಪಂ ಸದಸ್ಯ ಸಿದ್ದರಾಮೇಗೌಡ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇನ್ನಿತರ ಮುಖಂಡರು ಹಾಜರಿದ್ದರು.

Translate »