ಮೈಸೂರಿನಲ್ಲಿ `ಚೋಟಾ ಭೀಮ್’ ಜನನ!
ಮೈಸೂರು

ಮೈಸೂರಿನಲ್ಲಿ `ಚೋಟಾ ಭೀಮ್’ ಜನನ!

December 9, 2018

ಮೈಸೂರು: ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ 5 ಕೆಜಿ ತೂಕದ ಗಂಡು ಮಗುವಿನ ಜನನವಾಗಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.

ಮೈಸೂರಿನ ತಿಲಕನಗರದ ನಿವಾಸಿ, ಹೂವಿನ ವ್ಯಾಪಾರಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ, ಭೀಮ ಬಲ ಪುತ್ರನ ಜನನಕ್ಕೆ ಸಂಭ್ರಮಿಸುತ್ತಿದ್ದಾರೆ. ಆಪರೇಷನ್ ಮೂಲಕ ಮಗುವನ್ನು ಹೊರಗೆ ತೆಗೆದಾಗ 5 ಕೆಜಿ, 100 ಗ್ರಾಂ ತೂಕ ವಿತ್ತು. ಭಾರತೀಯ ನವಜಾತ ಶಿಶುಗಳ ತೂಕ ಸರಾಸರಿ 2.5ರಿಂದ 4 ಕೆಜಿವರೆ ಗಷ್ಟೇ ಇರುತ್ತದೆ. ಆದರೆ 5.1 ಕೆಜಿ ತೂಕದ ಮಗುವಿನ ಜನನವಾಗಿರುವುದು ವೈದ್ಯರು ಹಾಗೂ ಪೋಷಕರಲ್ಲಿ ಅಚ್ಚರಿ ಮೂಡಿಸಿದೆ. ರಾಜೇಶ್ವರಿ ಅವರನ್ನು ಮೂರು ದಿನದ ಹಿಂದೆಯಷ್ಟೇ ಜಯನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. 9 ತಿಂಗಳು ಪೂರ್ಣ ಗೊಂಡಿದ್ದರೂ ಹೆರಿಗೆಯಾಗದೇ ಇರುವುದನ್ನು ಗಮನಿಸಿದ ವೈದ್ಯರು ಸ್ಕ್ಯಾನಿಂಗ್ ಮಾಡಿ ಪರೀಕ್ಷಿಸಿದ್ದರು. ಆಪರೇಷನ್ ಮಾಡಲೇಬೇಕಾದ ಅನಿವಾರ್ಯವನ್ನು ರಾಜೇ ಶ್ವರಿ ಅವರ ಪೋಷಕರಿಗೆ ತಿಳಿಸಿದ್ದರು. ಶುಕ್ರವಾರ ಸಂಜೆ ಆಪರೇಷನ್ ಮಾಡಲಾಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು `ಮೈಸೂರು ಮಿತ್ರ’ ನೊಂದಿಗೆ ಜಯನಗರದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಪ್ರಸೂತಿ ತಜ್ಞೆ ಡಾ.ವೀಣಾ ಮಾತನಾಡಿ, ಸಾಮಾನ್ಯ ವಾಗಿ 3ರಿಂದ 4 ಕೆ.ಜಿ ತೂಕದ ಮಗುವಿನ ಜನನವಾಗಿರುವುದನ್ನು ನಾವು ನೋಡಿದ್ದೇವೆ. ರಾಜೇಶ್ವರಿ ಅವರನ್ನು ಕಳೆದ ಮೂರು ತಿಂಗಳಿಂದ ಪರಿಶೀಲಿಸುತ್ತಿದ್ದೆ. ಮೂರು ದಿನದ ಹಿಂದೆ ನಮ್ಮ ಸಮು ದಾಯ ಕೇಂದ್ರಕ್ಕೆ ದಾಖಲಾದರು. ಡಯಾಬಿಟಿಸ್ ಇದ್ದವರಿಗೆ ಹೆರಿಗೆ ಆಗುವಾಗ ಮಗುವಿನ ತೂಕ ಹೆಚ್ಚಾಗುವುದು ಸಾಮಾನ್ಯ. ಆದರೆ ರಾಜೇಶ್ವರಿ ಅವರಿಗೆ ಡಯಾಬಿಟಿಸ್ ಇರಲಿಲ್ಲ. ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆಯುವ ವೇಳೆ ಕೆಲವರಿಗೆ ಗರ್ಭಕೋಶ ಹರಿದು ಹೋಗುವುದು ಸೇರಿದಂತೆ ಕೆಲ ಸಮಸ್ಯೆಗಳು ಎದುರಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಮಗುವನ್ನು ಹೊರ ತೆಗೆಯಲು ಸ್ವಲ್ಪ ಕಷ್ಟವಾಯಿತು. ತೂಕ ಮಾಡಿದಾಗ 5.1 ಕೆಜಿ ಇದ್ದದ್ದನ್ನು ಕಂಡು ನಮಗೇ ಆಶ್ಚರ್ಯವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ತಾಯಿ ಮತ್ತು ಮಗುವನ್ನು ಹೆಚ್ಚಿನ ತಪಾಸಣೆಗಾಗಿ ಚೆಲುವಾಂಬ ಆಸ್ಪತ್ರೆಗೆ ಆಂಬ್ಯು ಲೆನ್ಸ್ ಮೂಲಕ ಕಳಿಸಿಕೊಡಲಾಗಿತ್ತು.

ಚೆಲುವಾಂಬ ಆಸ್ಪತ್ರೆಯಲ್ಲಿ ತಪಾಸಣೆ ಮುಗಿದ ನಂತರ ಇದೀಗ ಮತ್ತೆ ಜಯನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ-ಮಗು ಬಂದಿದ್ದಾರೆ. ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಡಾ.ವೀಣಾ ತಿಳಿಸಿದರು.

Translate »