`ಸ್ವಚ್ಛತಾ ಆಂದೋಲನ, ಸದೃಢ ಭಾರತ’ ಕಾರ್ಯಕ್ರಮ
ಮೈಸೂರು

`ಸ್ವಚ್ಛತಾ ಆಂದೋಲನ, ಸದೃಢ ಭಾರತ’ ಕಾರ್ಯಕ್ರಮ

September 17, 2018

ಮೈಸೂರು:  ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ `ರಕ್ಷಣೆಗಾಗಿ ಸೈನಿಕರು, ಭವಿಷ್ಯಕ್ಕಾಗಿ ಶಿಕ್ಷಕರು, ದೇಶಕ್ಕಾಗಿ ಮೋದಿ’ ವಿಷಯವನ್ನು ಇಟ್ಟುಕೊಂಡು ಸೆ.17ರಂದು ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಹಮ್ಮಿಕೊಂಡಿ ರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಸ್ವಚ್ಛ ಮೈಸೂರು, ಸದೃಢ ಭಾರತ ಘೋಷವಾಕ್ಯದಡಿ ಶಿಕ್ಷಕರಿಗೆ ಸನ್ಮಾನ ಹಾಗೂ ನರೇಂದ್ರ ಮೋದಿ ಹುಟ್ಟಿದ ದಿನದಂದು ಜನಿಸಿದ ಮಕ್ಕಳ ಪೋಷಕರಿಗೆ ಸನ್ಮಾನ ಇನ್ನಿತರ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸೆ.17ರ ಬೆಳಿಗ್ಗೆ 6.30ರಿಂದ 8.30 ಗಂಟೆವರೆಗೆ ಕೃಷ್ಣರಾಜ ಕ್ಷೇತ್ರದ 20 ವಾರ್ಡ್‍ಗಳಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು, ಇದನ್ನು ಪ್ರತೀ ಭಾನುವಾರ ಬೆಳಿಗ್ಗೆ ನಿರಂತರವಾಗಿ ಕೈಗೊಳ್ಳುವ ಮೂಲಕ ಮೈಸೂರು ನಗರವನ್ನು ಸ್ವಚ್ಛತೆಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ತರಲು ಒತ್ತು ನೀಡಲಾಗುವುದು ಎಂದು ಹೇಳಿದರು.

ಸದೃಢ ಭಾರತಕ್ಕಾಗಿ ಕ್ಷೇತ್ರದ 87 ಪ್ರೌಢಶಾಲಾ ಮುಖ್ಯ ಶಿಕ್ಷಕ, ಶಿಕ್ಷಕಿಯರು ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ನೀಡುವ ಸಂಕಲ್ಪ ತೊಡಲಿದ್ದಾರೆ. 2017-18ನೇ ಸಾಲಿನಲ್ಲಿ ಶೇ.100 ಫಲಿತಾಂಶ ನೀಡಿರುವ 5 ಶಾಲೆಯ ಐವರು ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾ ಗುವುದು. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರವೇಶ ನೀಡಿ ಉತ್ತಮ ಫಲಿತಾಂಶ ನೀಡಿರುವ 2 ಶಾಲೆಯ ಮುಖ್ಯಸ್ಥರನ್ನು ಸಹ ಸನ್ಮಾನಿಸಲಾಗುವುದು ಎಂದರು. ಸೆ.16ರ ಮಧ್ಯರಾತ್ರಿ 12 ಗಂಟೆಯಿಂದ 17ರ ಮಧ್ಯರಾತ್ರಿ 12 ಗಂಟೆಯ ಅವಧಿಯಲ್ಲಿ ಜನಿಸುವ ಎಲ್ಲಾ ಮಕ್ಕಳ ಪೋಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಮಕ್ಕಳಿಗೆ ಬೇಬಿ ಕಿಟ್, ವಸ್ತ್ರಗಳನ್ನು ನೀಡಿ ಅಭಿ ನಂದಿಸಲಾಗುವುದು ಎಂದು ತಿಳಿಸಿದರು ಸುದ್ದಿಗೋಷ್ಠಿಯಲ್ಲಿ ಜಿಎಸ್‍ಎಸ್‍ಎಸ್ ಫೌಂಡೇಷನ್‍ನ ಶ್ರೀಹರಿ, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಕಾರ್ಪೊ ರೇಟರ್ ಬಿ.ವಿ.ಮಂಜುನಾಥ್ ಉಪಸ್ಥಿತರಿದ್ದರು.

Translate »