Tag: Belur

ಕಾಂಡಕೊರಕ ಹುಳು ಬಾಧೆ: ಕೃಷಿ ಅಧಿಕಾರಿ, ವಿಜ್ಞಾನಿಗಳಿಂದ ಪರಿಶೀಲನೆ
ಹಾಸನ

ಕಾಂಡಕೊರಕ ಹುಳು ಬಾಧೆ: ಕೃಷಿ ಅಧಿಕಾರಿ, ವಿಜ್ಞಾನಿಗಳಿಂದ ಪರಿಶೀಲನೆ

July 5, 2018

ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಸುತ್ತ-ಮುತ್ತ ರೈತರು ಬೆಳೆದ ಮೆಕ್ಕೆಜೋಳಕ್ಕೆ ತಗಲಿರುವ ಕಾಂಡ ಕೊರಕ ಹುಳು ಬಾಧೆ ಹಿನ್ನೆಲೆಯಲ್ಲಿ ಹಾಸನ ಜಂಟಿ ಕೃಷಿ ನಿರ್ದೇಶಕರು ಹಾಗೂ ಕೃಷಿ ವಿವಿ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೆಬ್ಬಾಳು ಗ್ರಾಮದ ಕೃಷಿಕರಾದ ಗೌರಮ್ಮ ಹಾಗೂ ಚಿದಾನಂದ್ ಮತ್ತು ದೊಡ್ಡಬ್ಯಾಡಿಗೆರೆ ಗ್ರಾಮದ ಪರ್ವತಯ್ಯ ಹೊಲದ ಮೆಕ್ಕೆ ಜೋಳದಲ್ಲಿ ಕಾಂಡಕೊರಕ ಹುಳುಗಳಿಂದ ಹಾಳಾದ ಪೈರನ್ನು ವೀಕ್ಷಣೆ ಮಾಡಿದರು. ಹಾಗೆಯೇ ಕಾಂಡಕೊರಕ ಹುಳುಗಳ ಹಾವಳಿಯಿಂದ ಬೆಳೆಯ ಮೇಲೆ ಉಂಟಾಗುವ ಪರಿಣಾಮ ಮತ್ತು…

ಹಳೇಬೀಡಿನಲ್ಲಿ ಕೃಷಿ ವಸ್ತುಪ್ರದರ್ಶನ, ಸಂವಾದ ಕಾರ್ಯಕ್ರಮ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ
ಹಾಸನ

ಹಳೇಬೀಡಿನಲ್ಲಿ ಕೃಷಿ ವಸ್ತುಪ್ರದರ್ಶನ, ಸಂವಾದ ಕಾರ್ಯಕ್ರಮ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

June 29, 2018

ಬೇಲೂರು:  ‘ರೈತರು ರಾಸಾ ಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡಬೇಕು’ ಎಂದು ಶಾಸಕ ಕೆ.ಎಸ್. ಲಿಂಗೇಶ್ ಸಲಹೆ ನೀಡಿದರು.ತಾಲೂಕಿನ ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಕೃಷಿ ವಸ್ತುಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಈ ಹಿಂದೆ ಜಮೀನಿನಲ್ಲಿ, ಮನೆಯ ಹಿತ್ತಲಿನಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಿಕೊಂಡು ಹೊಲ ಗದ್ದೆಗಳಿಗೆ ಬಳಕೆ ಮಾಡುತ್ತಿದ್ದರು. ಇದರಿಂದ ಗುಣಮಟ್ಟದ ಹಾಗೂ ಅಧಿಕ…

ಚನ್ನಕೇಶವನಗರ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ
ಹಾಸನ

ಚನ್ನಕೇಶವನಗರ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ

June 28, 2018

ಬೇಲೂರು: ಪಟ್ಟಣದ ಚನ್ನಕೇಶವನಗರ ಬಡಾವಣೆಯ ನಿವಾಸಿ ಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ಯಿಂದ ಹಕ್ಕುಪತ್ರ ವಿತರಿಸುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದ್ದಾರೆ. ಇಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚನ್ನಕೇಶವ ನಗರ ಬಡಾವಣೆಯಲ್ಲಿ ಪುರಸಭೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಎರಡೂ ಜನತೆಗೆ ಕಡೆಯಿಂದ ವಸತಿ ನೀಡಲಾಗಿದೆ. ಆದರೆ ನಿವಾಸಿಗಳಿಗೆ ಹಕ್ಕುಪತ್ರ ಇದುವ ರೆಗೂ ನೀಡಿಲ್ಲ. ನಿಯಮದ ಪ್ರಕಾರ ಹಣ ಪಾವತಿಸಿಕೊಂಡು ಮನೆ ಗಳನ್ನು ನೀಡ ಲಾಗಿದ್ದರೂ ಹಕ್ಕುಪತ್ರ ಕೊಡದೆ ಇರು ವುದು ಸರಿಯಲ್ಲ. ಈ…

ಬೇಲೂರು ಪುರಸಭೆ ವಿಶೇಷ ಸಭೆ; ಅಧ್ಯಕ್ಷರು, ಸದಸ್ಯರ ನಡುವೆ ಮಾತಿನ ಚಕಮಕಿ
ಹಾಸನ

ಬೇಲೂರು ಪುರಸಭೆ ವಿಶೇಷ ಸಭೆ; ಅಧ್ಯಕ್ಷರು, ಸದಸ್ಯರ ನಡುವೆ ಮಾತಿನ ಚಕಮಕಿ

June 23, 2018

ಬೇಲೂರು:  ಪುರಸಭೆಗೆ 100 ಹಾಗೂ ಶ್ರೀಚನ್ನ ಕೇಶವಸ್ವಾಮಿ ದೇಗುಲ 900 ವರ್ಷ ಪೂರೈಸಿರುವ ಹಿನ್ನೆಲೆ ಪುರಸಭೆ, ದೇವಾಲಯ ಆಡಳಿತ ಜಂಟಿಯಾಗಿ ಕಾರ್ಯಕ್ರಮ ರೂಪಿಸುವ ಕುರಿತು ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟ ಪರಿಣಾಮ ಅಂತಿಮವಾಗಿ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಪುರಸಭೆಗೆ ನೂರು ವರ್ಷ ತುಂಬಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಕಾರ್ಯಕ್ರಮ ರೂಪಿಸಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸೋಣ ಎಂದು ಸದಸ್ಯ ಬಿ.ಗಿರೀಶ್ ವಿಷಯ…

ಜಿಲ್ಲಾದ್ಯಂತ ‘ಯೋಗ’ ಧ್ಯಾನ ಸಂಗಮ
ಹಾಸನ

ಜಿಲ್ಲಾದ್ಯಂತ ‘ಯೋಗ’ ಧ್ಯಾನ ಸಂಗಮ

June 22, 2018

 ಸಂಭ್ರಮದ 4ನೇ ಅಂತಾರಾಷ್ಟ್ರೀಯ ಯೋಗ ದಿನ  ಸಾಮೂಹಿಕ ಧ್ಯಾನ, ವಿವಿಧ ಯೋಗಾಸನಗಳ ಪ್ರದರ್ಶನ ಯೋಗಾಭ್ಯಾಸಕ್ಕೆ ವಯಸ್ಸಿನ ಪರಿಮಿತಿ ಇಲ್ಲ: ಶಾಸಕ ಪ್ರೀತಂ ಜೆ.ಗೌಡ ಹಾಸನ: ಜಿಲ್ಲಾದ್ಯಂತ ಗುರುವಾರ 4ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯ ಮಂಜಿನ ನಡುವೆ ಸೂರ್ಯನ ಕಿರಣಗಳು ಮೂಡುತ್ತಿದ್ದಂತೆ ಯೋಗ ಪ್ರದರ್ಶನ ಮತ್ತು ಯೋಗ ಕುರಿತದ್ದೇ ಚರ್ಚೆ. ಜಿಲ್ಲಾ ಕ್ರೀಡಾಂಗಣ, ಶಾಲಾ ಮೈದಾನದಲ್ಲಿ ಶ್ವೇತವಸ್ತ್ರ ಧರಿಸಿದ ಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ…

ಬೇಲೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ
ಹಾಸನ

ಬೇಲೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ

June 20, 2018

ಬೇಲೂರು: ತಾಲೂಕಿನ ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆ ಆಗರ ವಾಗಿದ್ದು, ಈ ಬಗ್ಗೆ ಗಮನ ಹರಿಸದೆ ಆರೋಗ್ಯಾಧಿಕಾರಿ ನಿರ್ಲಕ್ಷ್ಯ ತಾಳಿದ್ದಾರೆ ಎಂದು ತಾಪಂ ಸದಸ್ಯ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿಂದು ತಾಪಂ ಅಧ್ಯಕ್ಷ ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಆಂಬುಲೆನ್ಸ್ ವಾಹನ ಚಾಲಕ ಬೇಕಾಬಿಟ್ಟಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಚಾಲಕರು ರಾಜಕಾರಣ ಮಾಡುತ್ತಿದ್ದಾರೆ. ಆಸ್ಪತ್ರೆ ನೌಕರರನ್ನೇ ಹೆದರಿಸುವ ಮಟ್ಟಕ್ಕೆ ಚಾಲಕರು ಬೆಳೆದಿದ್ದಾರೆ. ರಾಜಕಾರಣಿಗಳಿ ಗಿಂತ ಇವರದೇ ರಾಜಕೀಯ…

30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ
ಹಾಸನ

30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ

June 19, 2018

ಬೇಲೂರು: ವಿಶ್ವದಲ್ಲೇ ಶಿಲ್ಪ ಕಲೆಗೆ ಹೆಸರಾದ ಬೇಲೂರು, ಹಳೇಬೀಡಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ 30 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾಹಿತಿ ನೀಡಿದರು. ಪಟ್ಟಣಕ್ಕೆ ಆಗಮಿಸಿ ಶ್ರೀಚನ್ನಕೇಶವಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎರಡು ಪಟ್ಟಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿಗೆ ಆಗಮಿಸುವವರಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಸ್ಥಳೀಯವಾಗಿಯೂ ಅನೇಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಅಗತ್ಯವಿದೆ…

ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ
ಹಾಸನ

ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ

June 18, 2018

ಬೇಲೂರು: ಅನುಘಟ್ಟ ತಾಪಂಗೆ ನಡೆದ ಉಪಚುನಾವಣೆ ಫಲಿತಾಂಶ ಹೊರ ಬಿದ್ದು, ಬಿಜೆಪಿ ಅಭ್ಯರ್ಥಿ ಶಶಿಕುಮಾರ್ ಜಯಗಳಿಸಿದ್ದಾರೆ. ಬಿಜೆಪಿ ಸದಸ್ಯ ನವಿಲಹಳ್ಳಿ ಕಿಟ್ಟಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿ ಶಶಿಕುಮಾರ್ 2,311 ಮತಗಳನ್ನು ಪಡೆದು 147 ಮತಗಳ ಅಂತರದಿಂದ ಜಯಶಾಲಿಯಾದರು. ಇವರ ಪ್ರತಿಸ್ಪರ್ಧಿ ಜೆಡಿಎಸ್ ಎಂ.ಚೇತನಕುಮಾರ್ 2,164 ಮತಗಳನ್ನು ಪಡೆದು ಪರಾಭವಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಅರುಣ 257 ಮತಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ವಿಜಯೋತ್ಸವ: ಇಂದು ಜಯಗಳಿಸಿದ ಬಿಜೆಪಿ…

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಹಾಸನ

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

June 16, 2018

ಬೇಲೂರು: ಬಾಗಿನ ಅರ್ಪಿಸಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದಲ್ಲಿ ನಡೆದಿದೆ. ರಂಗಶೆಟ್ಟಿ(46) ಮೃತರು. ಗ್ರಾಮದ ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಹೋಗಿದ್ದ ರಂಗಶೆಟ್ಟಿ ನೀರುಪಾಲಾಗಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಿಪಿಐ ಯೋಗೇಶ್ ಆಗಮಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಕ್ಕಾಗಿ ಶೋಧ ಕಾರ್ಯಾದಲ್ಲಿ ತೊಡಗಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೂರಿನಲ್ಲಿ 1.15 ಲಕ್ಷ ರೂ. ಅಕ್ರಮ ಮದ್ಯ ವಶ
ಹಾಸನ

ಬೇಲೂರಿನಲ್ಲಿ 1.15 ಲಕ್ಷ ರೂ. ಅಕ್ರಮ ಮದ್ಯ ವಶ

June 13, 2018

ಬೇಲೂರು: ಅಕ್ರಮವಾಗಿ ಶೇಖರಿಸಿಟ್ಟಿದ್ದ 1.15 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ತಹಶೀಲ್ದಾರ್ ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಕುಶಾವರ ಗ್ರಾಪಂ ವ್ಯಾಪ್ತಿಗೆ ಸೇರುವ ಕೌರಿ ಗ್ರಾಮದ ರಾಜಶೇಖರ ಎಂಬುವರ ಪಾಳುಬಿದ್ದ ಮನೆಯಲ್ಲಿ ಮದ್ಯ ಶೇಖರಣೆ ಮಾಡಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ತಹಶೀಲ್ದಾರ್ ಉಮೇಶ್ ಅವರು ಸಿಬ್ಬಂದಿಯೊಂದಿಗೆ ಸಂಜೆ 4.45ರಲ್ಲಿ ದಾಳಿ ನಡೆಸಿದಾಗ ಮದ್ಯ ಶೇಖರಣೆ ಮಾಡಿರುವುದು ಖಚಿತಗೊಂಡಿದೆ. ಒರಿಜನಲ್ ಛಾಯ್ಸ್ 42 ಬಾಕ್ಸ್ ಮದ್ಯ ಯಾರಿಗೆ ಸೇರಿದ್ದೆಂದು ತಿಳಿದುಬಂದಿಲ್ಲ. ಮನೆ ಮಾಲೀಕ ರಾಜಶೇಖರನನ್ನು ವಿಚಾರಿಸಿದಾಗ ಮದ್ಯ ಶೇಖರಣೆ ಮಾಡಿರುವುದು…

1 5 6 7 8 9
Translate »