Tag: Belur

ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ
ಹಾಸನ

ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ

August 12, 2018

ಬೇಲೂರು: ಕಲೆ ಅರಳಲು, ಪ್ರತಿಭೆ ಅನಾವರಣಗೊಳಿಸಲು ಯಾವ ಸ್ಥಳವಾದರೇನು? ಯಾವ ವಸ್ತುವಾದರೇನು? ಇಲ್ಲಿ ಅಗತ್ಯವಿರುವುದು ಆಸಕ್ತಿ ಮತ್ತು ಶಿಸ್ತು ಮಾತ್ರ. ಇದಕ್ಕೆ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಾಕ್ಷಿಯಾಗಿದ್ದು, ಈ ಕೇಂದ್ರವಿಂದು ಚಿತ್ರಕಲಾ ಶಿಕ್ಷಕರ ಕುಂಚದಿಂದ ಕಲಾರಾಧನೆ ಗೊಂಡು ಕಂಗೊಳಿಸುತ್ತಿದೆ. ಇದನ್ನು ನೋಡಿದವರಿಗೆ ಇದೇನು ಶಿಕ್ಷಣ ಇಲಾ ಖೆಗೆ ಸೇರಿದ ಕಚೇರಿ ಕಟ್ಟಡವೊ ಅಥವಾ ಕಲಾ ರಂಗಮಂದಿರವೊ ಎಂಬಂತೆ ಭಾಸವಾಗುತ್ತಿದ್ದು, ಉದ್ಘಾಟನೆ ಮೂಲಕ ಸೇವೆಗೆ ಮುಕ್ತವಾಗಿದೆ. ಅನೇಕರಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳು ಎಂದಾಗ…

ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ, ಭಿನ್ನಮತ
ಹಾಸನ

ಪೂರ್ವಭಾವಿ ಸಭೆಯಲ್ಲಿ ಅಸಮಾಧಾನ, ಭಿನ್ನಮತ

August 11, 2018

ಬೇಲೂರು:  ವಿವಿಧ ಮಹನೀ ಯರ ಜಯಂತಿ ಹಿನ್ನೆಲೆ ತಹಶೀಲ್ದಾರ್ ಕೆ.ರಾಜು ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅಧಿಕಾರಿಗಳ ಗೈರು ಸಭಿಕರನ್ನು ಅಸಮಾ ಧಾನಕ್ಕೊಳ ಗಾಗುವಂತೆ ಮಾಡಿದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸುವ ಕುರಿತು ವಿಶ್ವಕರ್ಮ ಸಮುದಾಯದವ ರಲ್ಲೇ ಭಿನ್ನಮತ ವ್ಯಕ್ತವಾಯಿತು. ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಕೆ.ರಾಜು, ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿ ಗಳು ಹಾಗೂ ಸಂಘ ಸಂಸ್ಥೆ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸಿದ್ದೇವೆ. ಆದರೆ…

ಶಾಲಾ ವಾಹನ ಡಿಕ್ಕಿ: 3 ವರ್ಷದ ಕಂದಮ್ಮ ಸಾವು
ಹಾಸನ

ಶಾಲಾ ವಾಹನ ಡಿಕ್ಕಿ: 3 ವರ್ಷದ ಕಂದಮ್ಮ ಸಾವು

August 11, 2018

ಬೇಲೂರು: ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಯಗಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಮೇಶ್, ನಂದಿನಿ ದಂಪತಿ ದ್ವಿತೀಯ ಪುತ್ರಿ ತಾರಣ್ಯ (3) ಮೃತಪಟ್ಟ ಕಂದಮ್ಮ. ನಂದಿನಿ ತಮ್ಮ ಮೊದಲ ಮಗುವನ್ನು ಶಾಲಾ ವ್ಯಾನ್‍ಗೆ ಹತ್ತಿಸುವ ವೇಳೆ ಮನೆ ಮುಂದೆ ಆಟ ವಾಡುತ್ತಿದ್ದ ತಾರುಣ್ಯ ವ್ಯಾನ್ ಬಳಿ ತೆರಳಿದ್ದಾಳೆ. ಇದನ್ನು ಗಮನಿಸದೆ ಮೊಬೈಲ್ ಕರೆಯಲ್ಲಿ ನಿರತನಾಗಿದ್ದ ವ್ಯಾನ್ ಚಾಲಕನ ಅಜಾಗರೂಕತೆಯ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟಿದೆ….

ಬೇಲೂರು ಕ್ಷೇತ್ರದ ನೀರಿನ ಸಮಸ್ಯೆ ಅಂತ್ಯ
ಹಾಸನ

ಬೇಲೂರು ಕ್ಷೇತ್ರದ ನೀರಿನ ಸಮಸ್ಯೆ ಅಂತ್ಯ

August 8, 2018

ಬೇಲೂರು: ಎತ್ತಿನಹೊಳೆ, ಯಗಚಿ ಏತ ನೀರಾವರಿ, ರಣಘಟ್ಟ ಒಡ್ಡು ಯೋಜನೆಗಳ ಮೂಲಕ ತಾಲೂಕಿನಲ್ಲಿರುವ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಯಗಚಿ ಜಲಾಶಯ ವೀಕ್ಷಿಸಿದ ನಂತರ ಯಗಚಿ ವಸತಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಜಲಾಶಯದಲ್ಲಿ 2.6 ಟಿಎಂಸಿ ನೀರು ಸಂಗ್ರಹವಿದೆ. ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ಪಟ್ಟಣಗಳಿಗೆ ಕುಡಿಯುವ ನೀರನ್ನು ಮೀಸಲಿಟ್ಟು, ಉಳಿದ ನೀರನ್ನು ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕಾಲುವೆ ಮೂಲಕ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಸದ್ಯ ನಾಲೆ…

ಬೇಲೂರು: ಗೂಡಂಗಡಿಗಳ ತೆರವು
ಹಾಸನ

ಬೇಲೂರು: ಗೂಡಂಗಡಿಗಳ ತೆರವು

August 8, 2018

ಬೇಲೂರು: ಹಳೇಬೀಡಿನ ಹೊಯ್ಸಳ ದೇವಾಲಯದ ಬಳಿ ಮುಖ್ಯರಸ್ತೆಗೆ ಹೊಂದಿ ಕೊಂಡಂತಿದ್ದ ಗೂಡಂಗಡಿಗಳನ್ನು ಗ್ರಾಪಂನಿಂದ ತೆರವುಗೊಳಿಸಲಾಯಿತು. ಇಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಹರೀಶ್, ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲಿಸಿದರು. ನಂತರ ವಾಹನ ಮೂಲಕ ಹಲವಾರು ಗೂಡಂಗಡಿಗಳನ್ನು ತೆರವುಗೊಳಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಪಿಡಿಓ ಹರೀಶ್, ದೇವಾಲಯದ ಬದಿಯಲ್ಲಿ ಹಲವರು ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಸ್ಥಳಕ್ಕಾಗಿ ವ್ಯಾಪಾರ ನಡೆಸದೆ ಅಂಗಡಿಗಳನ್ನು ಇಟ್ಟಿರುತ್ತಾರೆ. ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ನೋಡಲು ಅಸಹ್ಯವೆನಿಸುತ್ತಿದೆ. ಹೊರ…

ಕ್ರೀಡೆಯಿಂದ ಮಾನಸಿಕ, ದೈಹಿಕ ಒತ್ತಡ ನಿವಾರಣೆ
ಹಾಸನ

ಕ್ರೀಡೆಯಿಂದ ಮಾನಸಿಕ, ದೈಹಿಕ ಒತ್ತಡ ನಿವಾರಣೆ

August 3, 2018

ಬೇಲೂರು: ಮನುಷ್ಯನ ದೈಹಿಕ ಹಾಗೂ ಮಾನಸಿಕ ಒತ್ತಡಗಳ ನಿವಾರಣೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುವುದರಿಂದ, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗುವ ಮೂಲಕ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷೆ ಭಾರತಿ ಅರುಣ್‍ಕುಮಾರ್ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಿಂದ ನಡೆದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಚಿಕ್ಕಂದಿನಿಂದಲೇ ಕ್ರೀಡೆ ಬಗ್ಗೆ ಆಸಕ್ತಿ ಬರು ವಂತೆ…

ಹೆದ್ದಾರಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಕೋಣದ ಕಳೇಬರ ಪತ್ತೆ; ದುರ್ನಾತದಿಂದ ವಾಹನ ಸವಾರರಿಗೆ ನರಕಯಾತನೆ
ಹಾಸನ

ಹೆದ್ದಾರಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಕೋಣದ ಕಳೇಬರ ಪತ್ತೆ; ದುರ್ನಾತದಿಂದ ವಾಹನ ಸವಾರರಿಗೆ ನರಕಯಾತನೆ

July 31, 2018

ಬೇಲೂರು:  ತಾಲೂಕಿನ ಹಳೇಬೀಡು ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶಿರ ಕಡಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೋಣದ ಕಳೇಬರ ದುರ್ವಾ ಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಯಾತನೆ ಅನುಭವಿ ಸುವಂತಾಗಿದೆ. ಕಳೇಬರ ಊದಿ ಕೊಂಡಿದ್ದು, ಯಾವುದೇ ಸಮಯದಲ್ಲ ದರೂ ಒಡೆ ಯುವ ಸಾಧ್ಯತೆಯಿದೆ. ಈಗಾ ಗಲೇ ಸಾಕಷ್ಟು ದೂರದ ವರೆಗೂ ಕೆಟ್ಟ ವಾಸನೆ ಬೀರುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಊದಿಕೊಂಡಿರುವ ಕಳೇಬರ ಒಡೆದರೆ ದುರ್ನಾತ ಮತ್ತಷ್ಟು ಹೆಚ್ಚಾಗಲಿದ್ದು, ರಸ್ತೆಯಲ್ಲಿ ವಾಹನ…

ಹಳೇಬೀಡು ಉಪ ತಹಶೀಲ್ದಾರ್ ಕಟ್ಟಡ ದುರಸ್ತಿಗೆ ಆಗ್ರಹ
ಹಾಸನ

ಹಳೇಬೀಡು ಉಪ ತಹಶೀಲ್ದಾರ್ ಕಟ್ಟಡ ದುರಸ್ತಿಗೆ ಆಗ್ರಹ

July 30, 2018

ಬೇಲೂರು: ತಾಲೂಕಿನ ಹಳೇಬೀಡಿನ ಉಪತಹಶೀಲ್ದಾರ್ ಕಟ್ಟಡ ಶಿಥಿಲಗೊಂಡು ಕಚೇರಿ ಕೆಲಸ ಕಾರ್ಯಗಳಿಗೆ ಬರುವ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಅಡ್ಡಿಯಾಗಿದ್ದು, ಕಟ್ಟಡ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬ್ರಿಟೀಷರ ಕಾಲದಲ್ಲಿ ನಿರ್ಮಿತ ಗೊಂಡಿದ್ದ ಕಟ್ಟಡ ಪೂರ್ಣ ಪ್ರಮಾಣ ದಲ್ಲಿ ಶಿಥಿಲಗೊಂಡಿದೆ. ಛಾವಣಿಯ ಹೆಂಚುಗಳು ಉದುರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಸ್ವಲ್ಪಮಟ್ಟಿಗೆ ಮಳೆ ಬಂದರೂ ಸಾಕು ನೀರು ಕಚೇರಿಯೊಳಗೆ ಇಳಿಯುತ್ತದೆ. ಇದರಿಂದ ಕಚೇರಿಯಲ್ಲಿರುವ ಯಂತ್ರೋಪಕರಣಗಳು, ಪೀಠೋಪಕರಣಗಳು ಹಾಗೂ ದಾಖಲೆಗಳಿಗೆ ಹಾನಿಯಾಗುತ್ತಿದೆ. ಮಳೆಯ ನೀರಿನಿಂದ ಇವುಗಳನ್ನು ರಕ್ಷಿಸಿಡುವುದೇ ಕಷ್ಟದ ಕೆಲಸವಾಗಿ ಪರಿಣಮಿಸಿದೆ….

ಮಳೆ: ಮನೆ ಗೋಡೆ ಕುಸಿತ
ಹಾಸನ

ಮಳೆ: ಮನೆ ಗೋಡೆ ಕುಸಿತ

July 30, 2018

ಬೇಲೂರು:  ಮಳೆಯ ಪರಿಣಾಮ ಪಟ್ಟಣದ ಕೆರೆ ಬೀದಿಯಲ್ಲಿ ವಾಸದ ಮನೆ ಗೋಡೆ ಕುಸಿದು ಬಿದ್ದಿದೆ. ಇಂದು ಬೆಳಿಗ್ಗೆ ಪ್ರಾರಂಭವಾದ ಜಡಿ ಮಳೆಯಿಂದ 9ನೇ ವಾರ್ಡಿನ ಕೆರೆಯ ಬೀದಿ ಮುಜೀಪ್ ಅವರ ವಾಸದ ಮನೆಯ ಗೋಡೆಯು ಕುಸಿದು ಬಿದ್ದಿದ್ದು, ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್ ಮನೆ ಮಾಲೀಕರಿಗೆ ಸಾಂತ್ವನ ಹೇಳಿ 5,000 ರೂ.ಗಳ ಧನ ಸಹಾಯ ಮಾಡುವುದರೊಂದಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ…

ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತ
ಹಾಸನ

ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತ

July 26, 2018

ಬೇಲೂರು: ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಅಗ್ಗಡಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸೋಮೇಗೌಡ(62) ಮೃತರು. ಇಂದು ಸಂಜೆ ಮೃತರು ತಮ್ಮ ತೋಟ ದಲ್ಲಿ ಮರಗಳನ್ನು ತೆರವುಗೊಳಿಸುತ್ತಿದ್ದ ಸಮಯದಲ್ಲಿ ಕಬ್ಬಿಣದ ಏಣಿಯು ವಿದ್ಯುತ್ ತಂತಿಗಳಿಗೆ ತಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾ ಗಮಿಸಿದ ಪರಿಶೀಲಿಸಿದ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

1 3 4 5 6 7 9
Translate »