Tag: Belur

ಗುಂಪು ಘರ್ಷಣೆ: ಬೈಕ್ ಜಖಂ
ಹಾಸನ

ಗುಂಪು ಘರ್ಷಣೆ: ಬೈಕ್ ಜಖಂ

September 20, 2018

ಬೇಲೂರು: ಎರಡು ಗುಂಪುಗಳ ನಡುವೆ ಪರಸ್ಪರ ಜಗಳ ನಡೆದು, ಬೈಕ್ ಜಖಂ ಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ನಿಂತಿದ್ದ ಒಂದು ಗುಂಪಿನ ಮೇಲೆ ಬೈಕ್‍ನಲ್ಲಿ ಬಂದ ಮತ್ತೊಂದು ಗುಂಪು ದಾಳಿ ನಡೆಸಿದೆ. ಹೊಡೆದಾಟದ ವೇಳೆ ಬೈಕ್ ಜಖಂಗೊಂಡಿದೆ. ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಗಲಾಟೆ ನಡೆಸಿದ ಕಿಡಿಗೇಡಿಗಳ ಪತ್ತೆಗೆ ಪೆÇಲೀಸರು ಸಿಸಿ ಟಿವಿ ಫೂಟೇಜ್ ವಶಕ್ಕೆ ಪಡೆದಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ

September 16, 2018

ಬೇಲೂರು:  ಇಂದು ತಾಲೂಕಿನ ಚೀಕನಹಳ್ಳಿಯಲ್ಲಿ ಶಾಸಕ ಕೆ.ಎಸ್. ಲಿಂಗೇಶ್ ನಡೆಸಿದ ಗ್ರಾಮ ಸಭೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಸ್ಮಶಾನದ ಸ್ಥಳ ಒತ್ತುವರಿಯಾಗಿ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಕುಡಿ ಯುವ ನೀರಿಗೂ ಸಾಕಷ್ಟು ತೊಂದರೆ ಯಾಗಿದೆ ಎಂದು ಶಿರಗೂರು ಗ್ರಾಮಸ್ಥರು ತಮ್ಮೂರಿನ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು. ಹುನುಗನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿವಾದವು ನ್ಯಾಯಾಲಯದಲ್ಲಿ ಇರುವು ದರಿಂದ ಅಲ್ಲಿನ ಅಧ್ಯಕ್ಷ ಹುದ್ದೆ ಖಾಲಿ ಯಿದೆ. ಇದರಿಂದ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ…

`ಮಕ್ಕಳ ಮನೆ’ ಸ್ಥಳಾಂತರ, ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಹಾಸನ

`ಮಕ್ಕಳ ಮನೆ’ ಸ್ಥಳಾಂತರ, ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

September 1, 2018

ಬೇಲೂರು: ನಾಗೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರದಿರುವ `ಮಕ್ಕಳ ಮನೆ’ ಸ್ಥಳಾಂತರಿಸಿ, ದೈಹಿಕ ಶಿಕ್ಷಕರನ್ನು ವರ್ಗಾ ಯಿಸಿದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ತಾಲೂಕಿನ ನಾಗೇನಹಳ್ಳಿ ಸರ್ಕಾರಿ ಶಾಲೆ ಯಲ್ಲಿ ಪ್ರಾರಂಭ ಮಾಡಿರುವ `ಮಕ್ಕಳ ಮನೆ’ಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವುದು ಹಾಗೂ ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಎದುರು ಜಮಾಯಿಸಿದ ನಾಗೇನಹಳ್ಳಿ ಗ್ರಾಮಸ್ಥರಿಂದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಎನ್.ಆರ್.ಹರೀಶ್, ತಾಲೂಕಿನ…

ಸಾಲಬಾಧೆ: ರೈತ ಆತ್ಮಹತ್ಯೆ
ಹಾಸನ

ಸಾಲಬಾಧೆ: ರೈತ ಆತ್ಮಹತ್ಯೆ

August 30, 2018

ಬೇಲೂರು:  ಸಾಲಬಾಧೆ ತಾಳದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪ್ರಸಾದಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಅಣ್ಣೇಗೌಡ (65) ಆತ್ಮಹತ್ಯೆ ಮಾಡಿ ಕೊಂಡವರು. ದೀರ್ಘಕಾಲದ ಅನಾರೋಗ್ಯ ಪೀಡಿತೆ ಪತ್ನಿಯನ್ನು ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮನೆಗೆ ವಾಪಸ್ಸಾಗಿ ನೇಣುಬಿಗಿದುಕೊಂಡಿದ್ದಾರೆ. ಮೃತರು ತಮ್ಮ ಒಂದೂವರೆ ಎಕರೆ ಜಮೀನು ಜೋಳ ಹಾಗೂ ಶುಂಠಿ ಬಿತ್ತನೆ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಆತಂಕದಲ್ಲಿದ್ದರು. ಬ್ಯಾಂಕಿ ನಲ್ಲಿ 2 ಲಕ್ಷ ರೂ., 4 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತರ ಪುತ್ರ…

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸಲಹೆ
ಹಾಸನ

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸಲಹೆ

August 29, 2018

ಬೇಲೂರು: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಪದವಿಪೂರ್ಣ ಶಿಕ್ಷಣ ಇಲಾಖೆ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನಿಂದ ಮಂಗಳವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭಾರತ ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ ತೋರುವಲ್ಲಿ ವಿಫಲವಾಗಿದೆ. ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಪ್ರಾಥಮಿಕ ಹಂತದಿಂದಲೇ…

ರಾಯರ ಆರಾಧನಾ ಮಹೋತ್ಸವದ ಸಂಭ್ರಮ
ಹಾಸನ

ರಾಯರ ಆರಾಧನಾ ಮಹೋತ್ಸವದ ಸಂಭ್ರಮ

August 29, 2018

ಬೇಲೂರು:  ಪಟ್ಟಣದ ಕೋಟೆ ಶ್ರೀ ಉತ್ತರಾಧಿಮಠದಲ್ಲಿ ಗುರುಸಾರ್ವಭೌಮ ರಾಘವೇಂದ್ರಸ್ವಾಮಿ ಅವರ 347ನೇ ಆರಾಧನಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಪ್ರತಿ ವರ್ಷದಂತೆ ಶ್ರೀಮಠದಲ್ಲಿ ಅನುಕ್ರಮವಾಗಿ ಪೂರ್ವಾರಾಧನೆ, ಮಧ್ಯಾರಾಧನೆ ನಂತರ ಉತ್ತರಾರಾಧನೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸೋಮವಾರದಿಂದ ಪೂಜಾ ವಿಧಿವಿಧಾನಗಳು ಆರಂಭಗೊಂಡಿದ್ದು, ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ, ಫಲಾಮೃತ ಅಭಿಷೇಕ, ಪುಷ್ಪಾಲಂಕಾರ, ಮಧ್ಯಾಹ್ನ 12 ರಿಂದ ಪಂಡಿತರಿಂದ ಪ್ರವಚನ ಕಾರ್ಯಕ್ರಮ, ನೈವೇದ್ಯ, ಹಸ್ತೋದಕ, ಸಂಜೆ ತಾರತಮ್ಯೋಕ್ತ, ಭಜನೆ, ಭಕ್ತಿಗೀತೆ, ಸ್ವಸ್ತಿವಾಚನ, ರಥೋತ್ಸವ, ಡೋಲೋತ್ಸವ ಮತ್ತು ಮಹಾಮಂಗಳಾರತಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು….

ಕುಡಿದ ಮತ್ತಿನಲ್ಲಿ ಮೇರಿ ಮೂರ್ತಿ ಭಗ್ನ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಹಾಸನ

ಕುಡಿದ ಮತ್ತಿನಲ್ಲಿ ಮೇರಿ ಮೂರ್ತಿ ಭಗ್ನ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

August 26, 2018

ಬೇಲೂರು: ಕುಡಿದ ಮತ್ತಿನಲ್ಲಿ ತಾಲೂಕಿನ ಮತ್ತಿಹಳ್ಳಿ ಚರ್ಚ್ ಆವರಣ ದಲ್ಲಿದ್ದ ಮೇರಿ ಮೂರ್ತಿಯನ್ನು ಭಗ್ನಗೊಳಿ ಸಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಲೂರು ತಾಲೂಕಿನ ಸುಳಗೋಡು ಗ್ರಾಮದ ವಿಷ್ಣು, ಬೇಲೂರು ತಾಲೂಕಿನ ಕರ್ಕಿಹಳ್ಳಿ ಕೌಶಿಕ್, ಮತ್ತಿಹಳ್ಳಿ ಪ್ರಸನ್ನ, ಪಾಂಡವಪುರ ತಾಲೂಕಿನ ಶಂಭುಕನ ಹಳ್ಳಿ ಕುಮಾರಸ್ವಾಮಿ ಬಂಧಿತರು. ಇವರು ಆ.14ರ ಮಧ್ಯರಾತ್ರಿ ತಾಲೂಕಿನ ಅರೇಹಳ್ಳಿ ಠಾಣೆ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಸಂತ ಮಿಕಾಯಿಲ್ ಚರ್ಚ್‍ನಲ್ಲಿದ್ದ ಮೇರಿ ಮೂರ್ತಿಯನ್ನು ಕುಡಿದ ಮತ್ತಿನಲ್ಲಿ ಭಗ್ನ ಗೊಳಿಸಿ…

ನೀರಿಗಾಗಿ ಎಸ್.ಸೂರಾಪುರ ಗ್ರಾಮಸ್ಥರ ಆಗ್ರಹ
ಹಾಸನ

ನೀರಿಗಾಗಿ ಎಸ್.ಸೂರಾಪುರ ಗ್ರಾಮಸ್ಥರ ಆಗ್ರಹ

August 23, 2018

ಬೇಲೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸಮೀಪದ ಚಿಕ್ಕಮೇದೂರು ಗ್ರಾಪಂ ವ್ಯಾಪ್ತಿಯ ಎಸ್.ಸೂರಾಪುರ ಗ್ರಾಮದ ನಿವಾಸಿಗಳು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಅಣ್ಣಪ್ಪ, ಕಳೆದ 15 ವರ್ಷ ಗಳಿಂದ ನಾವು ಗ್ರಾಮದಲ್ಲಿ ವಾಸವಿದ್ದು, ಯಗಚಿ ಯೋಜನೆ ಮುಳುಗಡೆ ಪ್ರದೇಶ ವಾದ ಗ್ರಾಮದಲ್ಲಿ ಅಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ 30 ಕುಟುಂಬಗಳಿವೆ. ಗ್ರಾಮ ಬಳಿಯೇ ಯಗಚಿ ಜಲಾಶಯವಿ ದ್ದರೂ ನೀರು ಪೂರೈಕೆ ಮಾಡುವಲ್ಲಿ ಚಿಕ್ಕಮೇದೂರು ಗ್ರಾಪಂ ಆಡಳಿತ ಹಾಗೂ ಅಧಿಕಾರಿಗಳು ಹಿಂದೇಟು ಹಾಕುತ್ತಿ…

ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ
ಹಾಸನ

ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ

August 23, 2018

ಬೇಲೂರು:  ಕೋಲಾರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇಲ್ಲಿನ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಹಾಗೂ ಹಾಸನ ಜಿಲ್ಲಾ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ (53), ಅವರ ತಾಯಿ ವೆಂಕಟಮ್ಮ (85) ಸಾವನ್ನಪ್ಪಿದ್ದು, ಪತ್ನಿ, ಪುತ್ರ ಹಾಗೂ ಸಂಬಂಧಿಯೊಬ್ಬರು ಗಾಯಗೊಂಡಿದ್ದಾರೆ. ಶ್ರೀನಿವಾಸ್ ತಮ್ಮ ಕುಟುಂಬದೊಂದಿಗೆ ಕೋಲಾರದಲ್ಲಿ ಏರ್ಪಡಿಸಿದ್ದ ತಮ್ಮ ಅಕ್ಕನ ಮಗಳ ಮದುವೆ ಮುಗಿಸಿಕೊಂಡು ವಾಪಸ್ಸಾ ಗುತ್ತಿದ್ದಾಗ ಅವರ ಕಾರಿಗೆ ಕೋಲಾರದ ಹೈವೇಯಲ್ಲಿ ಹಿಂದಿನಿಂದ ಬಂದ…

ಕಾಲು ಜಾರಿ ಕೆರೆಗೆ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು
ಹಾಸನ

ಕಾಲು ಜಾರಿ ಕೆರೆಗೆ ಬಿದ್ದು ಪುರಸಭಾ ಮಾಜಿ ಸದಸ್ಯ ಸಾವು

August 21, 2018

ಬೇಲೂರು: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ತಾಲೂಕಿನ ಪುರಸಭಾ ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎ.ಸಾಲ್ಡಾನ್ (76) ಮೃತಪಟ್ಟಿದ್ದಾರೆ. ಭಾನುವಾರ ಜೀಪಿನಲ್ಲಿ ಲಕ್ಕುಂದದ ತಮ್ಮ ಕಾಫಿ ತೋಟಕ್ಕೆ ಹೋದವರು ಮನೆಗೆ ಸಂಜೆಯಾ ದರೂ ವಾಪಸ್ಸಾಗಿರಲಿಲ್ಲ. ಮನೆಯವರು ತೋಟದಲ್ಲಿ ಹುಡುಕಾಡಿ ಅರೇಹಳ್ಳಿ ಪೊಲೀ ಸರಿಗೆ ತಿಳಿಸಿದ್ದಾರೆ. ಪೊಲೀಸರು ಬೇಲೂರಿನಿಂದ ಮೀನುಗಾರರನ್ನು ಕರೆಸಿ ತೋಟದ ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹ ಹೊರ ತೆಗೆದರು. ಬಿ.ಎ.ಸಾಲ್ಡಾನ್ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಬೇಲೂರು…

1 2 3 4 5 6 9
Translate »