`ಮಕ್ಕಳ ಮನೆ’ ಸ್ಥಳಾಂತರ, ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಹಾಸನ

`ಮಕ್ಕಳ ಮನೆ’ ಸ್ಥಳಾಂತರ, ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

September 1, 2018

ಬೇಲೂರು: ನಾಗೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರದಿರುವ `ಮಕ್ಕಳ ಮನೆ’ ಸ್ಥಳಾಂತರಿಸಿ, ದೈಹಿಕ ಶಿಕ್ಷಕರನ್ನು ವರ್ಗಾ ಯಿಸಿದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

ತಾಲೂಕಿನ ನಾಗೇನಹಳ್ಳಿ ಸರ್ಕಾರಿ ಶಾಲೆ ಯಲ್ಲಿ ಪ್ರಾರಂಭ ಮಾಡಿರುವ `ಮಕ್ಕಳ ಮನೆ’ಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವುದು ಹಾಗೂ ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಎದುರು ಜಮಾಯಿಸಿದ ನಾಗೇನಹಳ್ಳಿ ಗ್ರಾಮಸ್ಥರಿಂದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಎನ್.ಆರ್.ಹರೀಶ್, ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಆದೇಶ ದಂತೆ ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳ ಕಲಿಕೆಗೆ `ಮಕ್ಕಳ ಮನೆ’ ಎಂಬ ತರಗತಿ ತೆರೆಯ ಲಾಗಿದ್ದು, ಈ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಲ್ಲದೆ ಈ ಶಾಲೆಯ ದೈಹಿಕ ಶಿಕ್ಷಕ ಜಿ.ಎಂ.ಭದ್ರೇಗೌಡರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲು ಮುಂದಾಗಿರು ವುದು ಸರಿಯಲ್ಲ. ಇಲ್ಲಿನ ಬಡಕುಟುಂಬದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡ ಬೇಕಾದರೆ ವಿಷಯಾವಾರು ತಿಳಿದ ಶಿಕ್ಷಕರು ಬೇಕಾಗುತ್ತದೆ. ಈಗಾಗಲೇ ಈ ಶಾಲೆಯಲ್ಲಿ ದೈಹಿಕ ಶಿಕ್ಷಕ ಭದ್ರೇಗೌಡರು ಹಲವು ವರ್ಷ ದಿಂದ ಉತ್ತಮ ಸೇವೆ ಸಲ್ಲಿಸುತ್ತಾ, ಶಾಲೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂಥ ಉತ್ತಮ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೇರೆ ಡೆಗೆ ವರ್ಗಾಯಿಸುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, `ಮಕ್ಕಳ ಮನೆ’ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ದೈಹಿಕ ಶಿಕ್ಷಕರನ್ನು ವರ್ಗಾಯಿಸಿದ್ದೇ ಆದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಶಾಲೆ ಎದುರು ಸೋಮವಾರದಿಂದಲೇ ಉಪ ವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತಮ್ಮಣ್ಣಗೌಡ ಮಾತನಾಡಿ, ನಾಗೇನಹಳ್ಳಿ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾ ವಣೆ ಗೊಳಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಮುಂದಾಗಿದ್ದಾರೆ. ಇದು ಖಂಡ ನೀಯ. ಸರ್ಕಾರ ಆಯಾ ಶಾಲೆಗಳಿಗೆ ಅನು ಗುಣವಾಗಿ ಉತ್ತಮ ಶಿಕ್ಷಕರನ್ನು ಆಯಾ ಸ್ಥಳಗಳಲ್ಲಿ ಬಿಡಬೇಕು. ಈಗ ಇರುವ ದೈಹಿಕ ಶಿಕ್ಷಕರು ಇಲ್ಲಿನ ಶಾಲೆಯ ಅಭಿವೃದ್ಧಿಪಡಿಸಿ ಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪಾಠಪ್ರವ ಚನ ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಇಲ್ಲಿನ ಮಕ್ಕಳು ಇವರಿಂದ ಕ್ರೀಡೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರತಿಭೆ ತೋರಿದ್ದಾರೆ. ಇದಕ್ಕೆ ಕಾರಣಕರ್ತ ರಾದ ದೈಹಿಕ ಶಿಕ್ಷಕರ ವರ್ಗಾವಣೆ ಮಾಡು ವುದು ಸರಿಯಲ್ಲ. ಇವರ ವರ್ಗಾವಣೆ ಆದೇಶ ಹಿಂಪಡೆದು ಇದೇ ಶಾಲೆಯಲ್ಲಿ ಅವರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡ ಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂತೋಷ್, ಶಶಿಕಲಾ, ಅಂಜು, ಪಾರ್ವತಿ, ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್ ಇತರರಿದ್ದರು.

Translate »