ಬೇಲೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸಮೀಪದ ಚಿಕ್ಕಮೇದೂರು ಗ್ರಾಪಂ ವ್ಯಾಪ್ತಿಯ ಎಸ್.ಸೂರಾಪುರ ಗ್ರಾಮದ ನಿವಾಸಿಗಳು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಅಣ್ಣಪ್ಪ, ಕಳೆದ 15 ವರ್ಷ ಗಳಿಂದ ನಾವು ಗ್ರಾಮದಲ್ಲಿ ವಾಸವಿದ್ದು, ಯಗಚಿ ಯೋಜನೆ ಮುಳುಗಡೆ ಪ್ರದೇಶ ವಾದ ಗ್ರಾಮದಲ್ಲಿ ಅಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ 30 ಕುಟುಂಬಗಳಿವೆ. ಗ್ರಾಮ ಬಳಿಯೇ ಯಗಚಿ ಜಲಾಶಯವಿ ದ್ದರೂ ನೀರು ಪೂರೈಕೆ ಮಾಡುವಲ್ಲಿ ಚಿಕ್ಕಮೇದೂರು ಗ್ರಾಪಂ ಆಡಳಿತ ಹಾಗೂ ಅಧಿಕಾರಿಗಳು ಹಿಂದೇಟು ಹಾಕುತ್ತಿ ದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಸಿವಾಸಿ ಗಾಯಿತ್ರಿ ಮಾತ ನಾಡಿ, ಗ್ರಾಮಕ್ಕೆ ನೀರು ಪೂರೈಕೆಯ ನಮ್ಮ ಕೂಗಿಗೆ ಮನ್ನಣೆ ದೊರೆಯುತ್ತಿಲ್ಲ. ಗ್ರಾಮದವರೇ ಆದ ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಅವರು ಸ್ವಂತ ಕೊಳವೆ ಬಾವಿಯಿಂದ ನೀರು ಕೊಡುತ್ತಿದ್ದಾರೆ. ಅವರು ನೀರು ಕೊಡದ್ದಿದ್ದರೆ ನಮ್ಮ ಪಾಡು ಹೇಳತೀರದು. ನಮ್ಮ ನೋವು ಚಿಕ್ಕಮೇದೂರು ಗ್ರಾಪಂನವರಿಗೆ ಅರ್ಥ ವಾಗುತ್ತಿಲ್ಲ. ಈ ಭಾಗದ ತಾಪಂ ಸದಸ್ಯೆ ಕಮಲಮ್ಮ ಅವರಿಗೆ ಸಮಸ್ಯೆ ಹೇಳಿ ಕೊಂಡರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಂಬಂಧ ಪಟ್ಟವರು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಹೇಂದ್ರ, ಶಾಂತಮ್ಮ, ಲಕ್ಷ್ಮಮ್ಮ, ಕಮಲಮ್ಮ, ಬಳೆ ಚಂದ್ರಶೇಖರ್, ರಮೇಶ್ ಇನ್ನಿತರರಿದ್ದರು.