Tag: Belur

`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’
ಹಾಸನ

`ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’

July 25, 2018

ಬೇಲೂರು: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ’ ನಾನ್ನುಡಿ ಯಂತೆ ತಾಲೂಕಿನ ಸಮೀಪ 2 ಜಲಾಶಯಗಳಿದ್ದರೂ ಮಲೆನಾಡು ಭಾಗವಾದ ಅರೇಹಳ್ಳಿ, ಬಿಕ್ಕೋಡು ಹೋಬಳಿಯ ಹತ್ತಾರು ಗ್ರಾಮಗಳಿಗೆ ನೀರು ಪೊರೈಕೆಗೆ ಶಾಶ್ವತ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿ ಗಳು, ಅಧಿಕಾರಿಗಳು ವಿಫಲರಾಗಿದ್ದಾರೆ. ಬಿಕ್ಕೋಡು ಸಮೀಪವೇ ಇರುವ ವಾಟೆಹೊಳೆ ಅಣೆಕಟ್ಟೆಯನ್ನು 1986ರಲ್ಲಿ ಡಿ.ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿತ್ತು. 32 ವರ್ಷಗಳನ್ನು ಕಂಡಿರುವ ಅಣೆಕಟ್ಟೆಯು ಈವರೆಗೆ 9 ಬಾರಿ ಭರ್ತಿಯಾಗಿದ್ದು, 32 ಕಿ.ಮೀ ಉದ್ದದ ಬಲದಂಡ ನಾಲೆ, 10 ಕಿ.ಮೀ. ಉದ್ದದ…

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ
ಹಾಸನ

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ

July 24, 2018

ಬೇಲೂರು: ಪಟ್ಟಣದ ವಿವಿಧ ಬಡಾವಣೆಯ ಕೊಳಾಯಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ಆತಂಕಗೊಂಡ ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಕೋಟೆ, ಕೆರೆ ಬೀದಿ, ಚನ್ನನಾಯಕ ಗಲ್ಲಿ, ಕೊಟ್ನಿಕೆರೆ ಬೀದಿಯ ಸಾರ್ವಜನಿಕ ಹಾಗೂ ಮನೆಗಳಲ್ಲಿ ಅಳವಡಿಸಿರುವ ಕೊಳಾಯಿ ಯಲ್ಲಿ ಕೆಂಪು ಮಿಶ್ರಿತ ಗಲೀಜು ನೀರು ಬರುತ್ತಿದೆ. ವಾರದಿಂದ ಎಲ್ಲಾ ನಿವಾಸಿಗಳು ಈ ನೀರನ್ನೇ ಕುಡಿಯುವಂತಾಗಿದ್ದು, ಮಾರಕ ರೋಗಗಳು ಬರಬಹುದೆಂಬ ಚಿಂತೆಯಲ್ಲಿದ್ದಾರೆ. ನಲ್ಲಿಗೆ ಬಟ್ಟೆ ಕಟ್ಟಿ ನೀರನ್ನು ಸೋಸಿ ಹಿಡಿದರೂ…

ವಿದ್ಯುತ್ ತಂತಿಗಳ ಮೇಲಿನ ಮರದ ಕೊಂಬೆಗಳ ತೆರವಿಗೆ ಆಗ್ರಹ
ಹಾಸನ

ವಿದ್ಯುತ್ ತಂತಿಗಳ ಮೇಲಿನ ಮರದ ಕೊಂಬೆಗಳ ತೆರವಿಗೆ ಆಗ್ರಹ

July 22, 2018

ಬೇಲೂರು: ಹೆದ್ದಾರಿಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಸರಬರಾಜು ತಂತಿಗಳ ಮೇಲೆ ರಸ್ತೆಬದಿಯ ಭಾರೀ ಗಾತ್ರದ ಮರಗಳ ಕೊಂಬೆಗಳು ಬಾಗಿದ್ದು, ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪಟ್ಟಣದ ಮಿನಿವಿಧಾನಸೌಧ ಮುಂಭಾಗದ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ವಿದ್ಯುತ್ ತಂತಿ ಮಾರ್ಗ ಹಾದುಹೋಗಿದ್ದು, ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಹಾಗೂ ಸಮೀಪ ಬಾಗಿದ್ದು, ಅಪಾಯಕ್ಕೆ ಕಾದು ನಿಂತತಿದೆ. ಹಾಸನದಿಂದ ಚಿಕ್ಕಮಗಳೂರಿಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜೊತೆಗೆ ಮಿನಿ ವಿಧಾನಸೌಧದ ಕೆಲಸಕ್ಕಾಗಿ ಆಗಮಿಸುವ ರೈತರು, ಇನ್ನಿತರರು ತಮ್ಮ…

ಅನುದಾನ ತಾರತಮ್ಯ: ಆರೋಪ-ಪ್ರತ್ಯಾರೋಪ
ಹಾಸನ

ಅನುದಾನ ತಾರತಮ್ಯ: ಆರೋಪ-ಪ್ರತ್ಯಾರೋಪ

July 19, 2018

ಬೇಲೂರು: ಪುರಸಭೆ ಅನುದಾನವನ್ನು ವಾರ್ಡ್ಗಳಿಗೆ ಮೀಸಲಿಡುವಾಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ ಕ್ಷೀಣಿಸುತ್ತಿದೆ. ಪುರಸಭೆಯಲ್ಲಿ ಹಣವಿದ್ದರೆ ಮಾತ್ರ ಕೆಲಸ ಎಂಬಂತಾಗಿದೆ ಎಂಬ ಸದಸ್ಯರೊಬ್ಬರ ಆರೋಪ ಇಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವೆ ಆಕ್ರೋಶಭರಿತ ಮಾತುಗಳಿಗೆ ಕಾರಣವಾಯಿತು. ಶಾಸಕ ಕೆ.ಎಸ್.ಲಿಂಗೇಶ್ ಉಪಸ್ಥಿತಿ ಹಾಗೂ ಪುರಸಭಾ ಅಧ್ಯಕ್ಷೆ ಭಾರತಿ ಅರುಣಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜುಬೇರ್ ಅಹ್ಮದ್, ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತೀವ್ರ ವಿಳಂಬವಾಗುತ್ತಿದೆ. ಹಣವಿದ್ದರೆ ಮಾತ್ರ ಕೆಲಸ ಮಾಡುವ…

ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು
ಹಾಸನ

ಹೃದಯಾಘಾತದಿಂದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಸಾವು

July 19, 2018

ಬೇಲೂರು:  ಧರ್ಮಸ್ಥಳ-ಕೋಲಾರ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಧರ್ಮಸ್ಥಳದಿಂದ ಕೋಲಾರಕ್ಕೆ ಬೇಲೂರು ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಹೃದಯಾ ಘಾತದಿಂದ ಸಾವನ್ನಪ್ಪಿದ್ದಾರೆ. ಕೂಲಾರ ಮೂಲದ ಆದಿನಾರಾಯಣ (46) ಮೃತರು. ಬೇಲೂರು ಬಸ್ ನಿಲ್ದಾಣದಲ್ಲಿ ಕಾಫಿಗೆಂದು ತೆರಳಿದ್ದಾಗ ಆದಿನಾರಾಯಣ ಕುಸಿದು ಬಿದ್ದಿದ್ದಾರೆ. ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆ ಉಸಿರೆಳೆದಿ ದ್ದಾರೆ. ವಿಷಯ ತಿಳಿದು ಚಿಕ್ಕಮಗ ಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು. ಮೃತ ಆದಿನಾರಾಯಣ ಮೃತದೇಹವನ್ನ ಕೋಲಾರಕ್ಕೆ ಕಳಿಸುವ ವ್ಯವಸ್ಥೆಯನ್ನು…

ಬೇಲೂರಿನಲ್ಲಿ ಜವಳಿ ಉದ್ಯಮ ಸ್ಥಾಪಿಸಲು ಅಗತ್ಯ ನೆರವು: ಶಾಸಕ ಕೆ.ಎಸ್.ಲಿಂಗೇಶ್
ಹಾಸನ

ಬೇಲೂರಿನಲ್ಲಿ ಜವಳಿ ಉದ್ಯಮ ಸ್ಥಾಪಿಸಲು ಅಗತ್ಯ ನೆರವು: ಶಾಸಕ ಕೆ.ಎಸ್.ಲಿಂಗೇಶ್

July 17, 2018

ಬೇಲೂರು: ತಾಲೂಕಿಗೆ ವಿವಿಧ ಕೈಗಾರಿಕಾ ಘಟಕಗಳ ಆರಂಭಿ ಸುವ ಹಿನ್ನೆಲೆಯಲ್ಲಿ ಕೆಲ ಘಟಕಗಳ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಜವಳಿ ಉದ್ಯಮ ಸ್ಥಾಪಿಸಲು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು. ಪಟ್ಟಣ ಸಹಕಾರ ಸಂಘ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ಸಿದ್ಧ ಉಡುಪು ಕೌಶಲ್ಯಾಭಿ ವೃದ್ಧಿಯಲ್ಲಿ ತರಬೇತಿ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ತಾಲೂಕಿನಲ್ಲಿ ಕೈಗಾರಿಕೆಗಳು ಇಲ್ಲದಿರುವುದು ನೋವಿನ ಸಂಗತಿ. ಇದ…

ಅಕ್ರಮ ಮೀನುಗಾರಿಕೆ ತಡೆಗೆ ಆಗ್ರಹ
ಹಾಸನ

ಅಕ್ರಮ ಮೀನುಗಾರಿಕೆ ತಡೆಗೆ ಆಗ್ರಹ

July 16, 2018

ಬೇಲೂರು: ಇಲ್ಲಿನ ಮೀನು ಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಗಚಿ ಜಲಾಶಯದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಅಕ್ರಮ ಮೀನುಗಾರಿಕೆ ಬೆಳಕಿಗೆ ಬಂದಿದ್ದು, ಯಗಚಿ ಮೀನುಗಾರರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಆರೋಪಿಯೋರ್ವನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿ ವೇಳೆ ಯಗಚಿ ಜಲಾಶಯದ ಬೆಣ್ಣೂರು ಸಮೀಪದ ಹಿನ್ನೀರಿನಲ್ಲಿ ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಹಾಕಿರುವ ಸುದ್ದಿ ತಿಳಿದು ಶನಿವಾರ ಬೆಳಿಗ್ಗೆ ಸಂಘ ಅಧ್ಯಕ್ಷ ಹನುಮಂತು ತಮ್ಮ ಸದಸ್ಯರೊಂದಿಗೆ ಸ್ಥಳಕ್ಕೆ ತೆರಳಿದಾಗ ಜಲಾಶಯದಲ್ಲಿ ಮೀನು ಹಿಡಿಯಲು ಬಲೆ ಹಾಕಿರುವುದು…

ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್
ಹಾಸನ

ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್

July 13, 2018

ಬೇಲೂರು: ಕಾಂಗ್ರೆಸ್ ಸರ್ಕಾರದ ಮಹತ್ತರ ಯೋಜನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳದೆ ಪಟ್ಟಣದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಇಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತುರಾತುರಿಯಲ್ಲಿ ನಿರ್ಮಿಸಲಾಗಿತ್ತಾದರೂ ಇದುವರೆಗೂ ಕ್ಯಾಂಟೀನ್ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ವಾಗಿ ಕಡಿಮೆ ದರದಲ್ಲಿ ಊಟ ಉಪಹಾರ ದೊರೆಯುತ್ತದೆ ಎಂಬ ಬಹು ನೀರಿಕ್ಷೆ ಯಲ್ಲಿದ್ದ ಬಡವರು, ಕೂಲಿ ಕಾರ್ಮಿಕರು,…

ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ
ಹಾಸನ

ನೀರಿಗಾಗಿ ಕೈಕಟ್ಟಿ ನಿಲ್ಲುವ ದುಸ್ಥಿತಿ ನಿರ್ಮಾಣ: ಕೇಂದ್ರದ ವಿರುದ್ಧ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಸಮಾಧಾನ

July 9, 2018

ಬೇಲೂರು: ರಾಜ್ಯದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ, ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ನಾಲ್ಕು ಜಲಾಶಯ ಇದ್ದರೂ ನೀರಿಗಾಗಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕೈಕಟ್ಟಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ಹಗರೆ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾಮ ಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.ರೈತರ 34 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಬಾರಿ ಮನ್ನಾ…

ವಿಧವಾ ವೇತನಕ್ಕೆ ಒತ್ತಾಯಿಸಿ ವಯೋವೃದ್ಧೆ ಪ್ರತಿಭಟನೆ
ಹಾಸನ

ವಿಧವಾ ವೇತನಕ್ಕೆ ಒತ್ತಾಯಿಸಿ ವಯೋವೃದ್ಧೆ ಪ್ರತಿಭಟನೆ

July 6, 2018

ಬೇಲೂರು:  ವಿಧವಾ ವೇತನ ವನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಅರೇಹಳ್ಳಿಯ ನಿಂಗಮ್ಮ ಎಂಬ ವಯೋವೃದ್ಧೆ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ಯುವಕ ಸಂಘದ ಕಾರ್ಯ ದರ್ಶಿ ನಿಂಗಯ್ಯ, ಎಐಟಿಯುಸಿ ಜಿಲ್ಲಾಧ್ಯಕ್ಷ ಮಹೇಶ್ ಸೇರಿದಂತೆ ಇತರರೊಂದಿಗೆ ಕುಳಿತು ವಿಧವಾ ವೇತನ ಮಂಜೂರು ಮಾಡುವಂತೆ ಘೋಷಣೆ ಕೂಗಿದರು. ವಯೋವೃದ್ಧೆ ನಿಂಗಮ್ಮ ಮಾತನಾಡಿ, ಒಂದು ವರ್ಷದಿಂದ ನನಗೆ ವಿಧವಾ ವೇತನ ಬಂದಿಲ್ಲ. ತಾಲೂಕು ಕಚೇರಿ ಅಧಿಕಾರಿ ಗಳಿಗೆ ಈ ಬಗ್ಗೆ ಮನವಿ…

1 4 5 6 7 8 9
Translate »