ಬೇಲೂರು: ತಾಲೂಕಿಗೆ ವಿವಿಧ ಕೈಗಾರಿಕಾ ಘಟಕಗಳ ಆರಂಭಿ ಸುವ ಹಿನ್ನೆಲೆಯಲ್ಲಿ ಕೆಲ ಘಟಕಗಳ ವ್ಯವಸ್ಥಾಪಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಜವಳಿ ಉದ್ಯಮ ಸ್ಥಾಪಿಸಲು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು.
ಪಟ್ಟಣ ಸಹಕಾರ ಸಂಘ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ಸಿದ್ಧ ಉಡುಪು ಕೌಶಲ್ಯಾಭಿ ವೃದ್ಧಿಯಲ್ಲಿ ತರಬೇತಿ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ತಾಲೂಕಿನಲ್ಲಿ ಕೈಗಾರಿಕೆಗಳು ಇಲ್ಲದಿರುವುದು ನೋವಿನ ಸಂಗತಿ. ಇದ ರಿಂದ ವ್ಯಾಪಾರ ವಹಿವಾಟಿಗೂ ಅಡ್ಡಿ ಯಾಗುತ್ತಿದೆ. ಈ ಹಿನೆÀ್ನಲೆಯಲ್ಲಿ ಸ್ವತಂತ್ರ ವಾದ ಕೈಗಾರಿಕೆಯೊಂದನ್ನು ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಾಲೂಕಿನ ಮಲ್ಲನಹಳ್ಳಿ ಸಮೀಪ ಸಕ್ಕರೆ ಕಾರ್ಖಾನೆ ಇದ್ದ 7.5 ಎಕರೆ ಭೂಮಿ ಯನ್ನು ಕೈಮಗ್ಗ ಹಾಗೂ ಜವಳಿ ಖಾತೆಗೆ ಕೊಡಿಸಿದರೆ ಆ ಸ್ಥಳದಲ್ಲಿ ಜವಳಿ ಕೈಗಾರಿಕೆ ಆರಂಭಿಸಲು ಅನುಕೂಲವಾಗುತ್ತದೆ. ಇದ ರಿಂದ ಮಹಿಳೆಯರಿಗೆ ಉದ್ಯೋಗ ಲಭಿಸಿ ಸುತ್ತದೆ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್.ಕಂಬಾರ್ ಮನವಿ ಮಾಡಿದ್ದು, ಈ ಸಂಬಂಧ ಭೂಮಿ ನೀಡು ವುದು ಸೇರಿದಂತೆ ಅಗತ್ಯ ಸೌಲಭ್ಯ ಒದಗಿ ಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ಯುವಕ ಯುವತಿ ಯರು ಬೆಂಗಳೂರಿನ ವಿವಿಧ ಫ್ಯಾಕ್ಟರಿ ಇನ್ನಿತರ ಕಂಪೆನಿಗಳಲ್ಲಿ ಅಲ್ಪ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಸುಮಾರು 10 ಸಾವಿರ ಜನರು ಬೇಕರಿ ಇನ್ನಿತರ ಉದ್ಯಮ ದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಸನದಲ್ಲಿನ ಗಾರ್ಮೆಂಟ್ಸ್‍ಗೆ ನಿತ್ಯ ತಾಲೂಕಿನಿಂದ ನೂರಾರು ಮಹಿಳೆಯರು ತೆರಳುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕಾದರೆ ತಾಲೂಕಿನಲ್ಲಿಯೇ ಅಗತ್ಯ ಕೈಗಾರಿಕೆ ಸ್ಥಾಪಿಸುವುದು ಒಳ್ಳೆಯದೆಂಬ ಆಲೋಚನೆ ಇದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಯಂ ಉದ್ಯೋಗದತ್ತ ಆಸಕ್ತಿ ತೋರುವ ಮೂಲಕ ಕುಟುಂಬದ ಆರ್ಥಿಕ ಪ್ರಗತಿಗೆ ಕಾರಣರಾಗಬೇಕೆಂದು ಸಲಹೆ ನೀಡಿದರು.
ಬೇಲೂರು ಟೌನ್ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್.ಧರ್ಮೇಗೌಡ ಮಾತನಾಡಿ, ನಮ್ಮ ಸಹಕಾರ ಸಂಘದ ಅಭಿವೃದ್ಧಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಸಾಕಷ್ಟು ನೆರವು ನೀಡಿದ್ದಾರೆ. ಜವಳಿ ಸಚಿವರಾದ ಸಂದರ್ಭದಲ್ಲಿ ಸಿದ್ಧ ಉಡುಪು ಕೌಶಲ್ಯಾಭಿ ವೃದ್ಧಿ ತರಬೇತಿ ಸಂಸ್ಥೆಯನ್ನು ನೀಡಿದರು. ಪರಿಣಾಮ ಇಂದು ನಮ್ಮ ಸಂಸ್ಥೆಯಿಂದ ಸುಮಾರು 750ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದು ಗಾರ್ಮೆಂಟ್ಸ್ ಕೈಗಾರಿಕೆ ಯಲ್ಲಿ ಸ್ವಯಂ ಉದ್ಯೋಗದಲ್ಲಿ ತೊಡಗಿ ದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ನೂತನ ಶಾಸಕ ಕೆ.ಎಸ್.ಲಿಂಗೇಶ್‍ರನ್ನು ಗೌರವಿಸಲಾಯಿತು. ಜಿಪಂ ಸದಸ್ಯ ಕಡಿ ದಾಳ್ ಮಂಜಪ್ಪ, ತಾಪಂ ಅಧ್ಯಕ್ಷ ಪಿ.ಎಸ್.ಹರೀಶ್, ಪುರಸಭಾ ಸದಸ್ಯರಾದ ಜಿ.ಶಾಂತಕುಮಾರ್, ಸತೀಶ್, ತಾಲೂಕು ಕಸಾಪ ಅಧ್ಯಕ್ಷ ಹೆಚ್.ಎಂ.ದಯಾನಂದ್ ಮಾತನಾಡಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ನಾಗೇಶ್ ಮುಂತಾ ದವರು ಹಾಜರಿದ್ದರು.