Tag: Belur

ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಪ್ರತಿಭಟನೆ
ಹಾಸನ

ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಪ್ರತಿಭಟನೆ

June 12, 2018

ಬೇಲೂರು: ತಾಲೂಕಿನ ತಗರೆ ಕೋಗಿಲೆಮನೆ ಗ್ರಾಪಂ ಕಚೇರಿ ಶಿಥಿಲಾವಸ್ಥೆ ಖಂಡಿಸಿ ಗ್ರಾಮಸ್ಥರು ಕಚೇರಿ ಎದುರು ಪ್ರತಿಭಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ಕುಮಾರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, 20 ವರ್ಷದಿಂದ ಕೋಗಿಲೆ ಮನೆ ಗ್ರಾಪಂ ಕಚೇರಿ ದುಸ್ಥಿತಿಯಲ್ಲಿದೆ. ನೂತನ ಕಟ್ಟಡ ನಿರ್ಮಾಣ ಮಾಡಿ ಸಾರ್ವ ಜನಿಕರಿಗೆ ಕೆಲಸಕ್ಕೆ ಅನುವು ಮಾಡಬೇಕು. ಈ ಬಗ್ಗೆ ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತ…

ಎಲ್ಲರೊಂದಿಗೆ ಚರ್ಚಿಸಿ ಬೇಲೂರು ಮುಖ್ಯರಸ್ತೆ ಅಗಲೀಕರಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಎಲ್ಲರೊಂದಿಗೆ ಚರ್ಚಿಸಿ ಬೇಲೂರು ಮುಖ್ಯರಸ್ತೆ ಅಗಲೀಕರಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ

June 11, 2018

ಬೇಲೂರು: ವಿಶ್ವಪ್ರಸಿದ್ಧ ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಅಭಿವೃದ್ಧಿಗೆ ಮುಖ್ಯರಸ್ತೆ ಅಗಲೀಕರಣ ಅಗತ್ಯವಾಗಿದ್ದು, ವರ್ತಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವಿಸ್ತರಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ಪಟ್ಟಣದ ಶ್ರೀಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಮಂತ್ರಿಯಾಗಿದ್ದಾಗ ಬೇಲೂರು, ಶ್ರವಣಬೆಳಗೊಳ, ಹಳೇಬೀಡನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಪ್ರಯತ್ನಿಸಿದ್ದೆ. ವಿಶ್ವಪರಂಪರೆ ಪಟ್ಟಿಗೆ ಸೇರಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು….

ದಿನಸಿ ಅಂಗಡಿ ಮೇಲೆ ದಾಳಿ: ಪ್ಲಾಸ್ಟಿಕ್ ವಸ್ತು ವಶ
ಹಾಸನ

ದಿನಸಿ ಅಂಗಡಿ ಮೇಲೆ ದಾಳಿ: ಪ್ಲಾಸ್ಟಿಕ್ ವಸ್ತು ವಶ

June 1, 2018

ಬೇಲೂರು: ಪಟ್ಟಣದ ದಿನಸಿ ಅಂಗಡಿಯ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿದ್ದ ಪಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡು ದಂಡ ವಿಧಿಸಿದ್ದಾರೆ. ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿದ್ದ ಊಟಕ್ಕೆ ಬಳಕೆ ಮಾಡುವ ಪ್ಲಾಸ್ಟಿಕ್ ರೋಲ್, ಪ್ಲಾಸ್ಟಿಕ್ ಲೋಟ, ಥರ್ಮಾಕೋಲ್ ತಟ್ಟೆಗಳನ್ನು ವಶಪಡಿಸಿಕೊಂಡು 5,000 ದಂಡ ವಿಧಿಸಿದರು. ಪಟ್ಟಣದ ಗುಂಡಪ್ಪಶೆಟ್ಟಿ ಅವರ ಅಂಗಡಿಗೆ ದಾಳಿ ನಡೆಸಿದ ಅಧಿಕಾರಿ ಗಳು 5 ಪ್ಲಾಸ್ಟಿಕ್ ರೋಲ್, 10 ಲೋಟದ ಪ್ಯಾಕೇಟ್, 3 ಚೀಲ ಥರ್ಮಾಕೋಲ್ ತಟ್ಟೆ ವಶಕ್ಕೆ…

‘ಸಾಲ ಮನ್ನಾ’ ಮಾತು ಉಳಿಸಿಕೊಳ್ಳಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯ
ಹಾಸನ

‘ಸಾಲ ಮನ್ನಾ’ ಮಾತು ಉಳಿಸಿಕೊಳ್ಳಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯ

May 31, 2018

ಬೇಲೂರು:  ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಮಾಡಿ ಪ್ರಣಾಳಿಕೆಯಲ್ಲಿ ನೀಡಿದ ಮಾತನ್ನು ಉಳಿಸಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ತಾಲೂಕಿನ ಹಳೇಬೀಡು ಶ್ರೀಹೊಯ್ಸ ಳೇಶ್ವರ ದೇಗುಲಕ್ಕೆ ಭೇಟಿ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರವು ಅಪವಿತ್ರ ಮೈತ್ರಿ ಯಾಗಿದೆ. ಇದು ಇನ್ನಾರು ತಿಂಗಳಲ್ಲಿ ಕುಸಿಯ ಲಿದ್ದು, ನಂತರ ಚುನಾವಣೆ ನಡೆಯಲಿದೆ. ಇಲ್ಲವೆ ತಮ್ಮ ಪಕ್ಷವು ಅಧಿಕಾರಕ್ಕೆ ಬರು ತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು….

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ
ಹಾಸನ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

May 31, 2018

ಬೇಲೂರು:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ಪ್ರತಿಭಟನೆ ನಡೆಸಿತು. ನಗರದ ಎನ್.ಆರ್.ವೃತ್ತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. 2017 ನ.1ರಿಂದ ಬ್ಯಾಂಕ್ ಸಿಬ್ಬಂದಿಗಳ ವೇತನ ಪರಿಷ್ಕರಣೆ ಬಾಕಿ ಇದ್ದು, ಕೇಂದ್ರ ಸರ್ಕಾರವು ಈ ಅವಧಿ ಒಳಗೆ ಮುಂಚಿತವಾಗಿಯೇ ಪರಿಷ್ಕರಣೆ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಲು ಭಾರತೀಯ ಬ್ಯಾಂಕ್ ಸಂಘಕ್ಕೆ ಹಿಂದೆಯೇ ತಾಕೀತು ಮಾಡಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಒಕ್ಕೂಟವೂ 2017ರ ಮೇ ತಿಂಗಳಲ್ಲಿಯೇ…

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ಹಾಸನ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

May 30, 2018

ಬೇಲೂರು:  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತ ರನ್ನುದ್ದೇಶಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಐ.ಎನ್.ಅರುಣ್‍ಕುಮಾರ್ ಮಾತನಾಡಿ, ರಾಜ್ಯ ವಿಧಾನಸಭೆ ಚುನಾ ವಣೆ ಮುಗಿಯುವವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಸದ ಕೇಂದ್ರ ಸರ್ಕಾರ ಚುನಾವಣೆ ಮುಗಿದ ನಂತರ…

ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಹಾಸನ

ಬೇಲೂರಿನಲ್ಲೂ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಬೇಲೂರು: ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಲು ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಪಟ್ಟಣ ದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆ ಪಟ್ಟಣದ ಶ್ರೀ ಚನ್ನ ಕೇಶವ ದೇವಾಲಯದ ಮುಂಭಾಗದಿಂದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ, ಪಟ್ಟಣದ ಅಂಗಡಿ-ಮುಂಗಟ್ಟುಗಳ ಬಳಿ ತೆರಳಿ ಅಂಗಡಿ ಬಾಗಿಲು ಮುಚ್ಚುವಂತೆ ಮನವಿ ಮಾಡಿ ಬಂದ್ ಆಚರಣೆಗೆ ಮುಂದಾದರು. ಈ ಸಂದರ್ಭ ಕೆಲ ಅಂಗಡಿ ಮಾಲೀಕರು ಅಂಗಡಿ ಬಾಗಿಲುಗಳನ್ನು ಹಾಕಲು ಮುಂದಾ…

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ
ಹಾಸನ

ವೃಕ್ಷಮಾತೆ ತಿಮ್ಮಕ್ಕ ನಿಧನ ವದಂತಿ ಕುರಿತು ಕಮಿಷನರ್‍ಗೆ ದೂರು ನೀಡಲು ಮುಂದಾದ ದತ್ತು ಪುತ್ರ

May 27, 2018

ಬೇಲೂರು: ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲುಮರದ ತಿಮ್ಮಕ್ಕನವರು ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟಿಸಿರುವವರ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಕಮಿಷನರ್ ಕಚೇರಿಗೆ ಸಾಲು ಮರದ ತಿಮ್ಮಕ್ಕನವರೊಂದಿಗೆ ತೆರಳಿ ದೂರು ಸಲ್ಲಿ ಸುವುದಾಗಿ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ತಿಳಿಸಿದ್ದಾರೆ. ‘ಮೈಸೂರು ಮಿತ್ರ’ ನೊಂದಿಗೆ ಮಾತ ನಾಡಿದ ಬಳ್ಳೂರು ಉಮೇಶ್, ಕಳೆದ ಮೂರ್ನಾಲ್ಕು ವರ್ಷದಿಂದಲೂ ಕೆಲವು ಕಿಡಿಗೇಡಿಗಳು ಸಾಲುಮರದ ತಿಮ್ಮಕ್ಕ ಹಾಗೂ ತಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ…

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ
ಹಾಸನ

ಮುಖಂಡರ ಒಳಒಪ್ಪಂದವೇ ಬಿಜೆಪಿ ಸೋಲಿಗೆ ಕಾರಣ: ಆಕ್ರೋಶ

May 27, 2018

ಬೇಲೂರು:  ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಮುಖಂಡರೇ ನೇರ ಹೊಣೆಗಾರರಾಗಿದ್ದು, ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಟ್ಟಣದಲ್ಲಿ ನಡೆಯಿತು. ಪಟ್ಟಣ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಬಿಜೆಪಿ ಸೋಲಿನ ಆತ್ಮಾವಲೋಕನ ಸಭೆ ಏರ್ಪಡಿಸಲಾಗಿತ್ತು. ಬೇಲೂರು ಬಿಜೆಪಿ ಚುನಾವಣಾ ಉಸ್ತುವಾರಿ ನವಿಲೆ ಅಣ್ಣಪ್ಪ ಮಾತನಾಡುವ ವೇಳೆಯಲ್ಲಿ ಸಿಡಿಮಿಡಿ ಗೊಂಡ ಕಾರ್ಯಕರ್ತರು, ಇಲ್ಲಿನ ಮುಖಂ ಡರು ಬೇರೆ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ…

ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ಮತಯಾಚನೆ
ಹಾಸನ

ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ಮತಯಾಚನೆ

April 30, 2018

ಬೇಲೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ರುದ್ರೇಶ ಗೌಡ ಅವರಿಂದು ಮತಯಾಚನೆಗೆ ತೆರಳಿದ ಸಂದರ್ಭ ಪುರಸಭಾ ನಾಮಿನಿ ಸದಸ್ಯರೊಬ್ಬರು ತರಾಟೆ ತೆಗೆದು ಕೊಂಡ ಘಟನೆ ಜರುಗಿತು. ಪಟ್ಟಣದ ಹೆಚ್.ಕೆ.ಕುಮಾರಸ್ವಾಮಿ ಬಡಾವಣೆಯಲ್ಲಿ ಕೀರ್ತನ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಪುರಸಭಾ ನಾಮಿನಿ ಸದಸ್ಯ ವೆಂಕಟೇಶ್ ಅವರನ್ನು ಪ್ರಚಾರಕ್ಕೆ ಬರುವಂತೆ ಕಾಂಗ್ರೆಸ್ ಮುಖಂಡರು ಕೋರಿದರು. ಈ ಸಂದರ್ಭ ಬೇಸರಗೊಂಡ ಸದಸ್ಯ ವೆಂಕಟೇಶ್, ಕಳೆದ ಚುನಾವಣೆ ವೇಳೆ ಈ ವಾರ್ಡಿಗೆ ಪ್ರಚಾರಕ್ಕೆ ಆಗಮಿಸಿದ ವೈ.ಎನ್….

1 6 7 8 9
Translate »