Tag: Bharat bandh

ಮೈಸೂರಲ್ಲಿ ಬಂದ್ ಯಶಸ್ವಿ
ಮೈಸೂರು

ಮೈಸೂರಲ್ಲಿ ಬಂದ್ ಯಶಸ್ವಿ

September 11, 2018

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಕರೆ ನೀಡಿದ್ದ ‘ಭಾರತ್ ಬಂದ್’ಗೆ ಮೈಸೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ನಗರದಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ ಮಾಡಿ ಅಂಗಡಿ ಮುಂಗಟ್ಟು, ಕೆಲ ಕಚೇರಿಗಳನ್ನು ಬಲವಂತವಾಗಿ ಮುಚ್ಚಿ ಸಿದ್ದರಿಂದ ಮೈಸೂರಿನ ಹೃದಯಭಾಗದಲ್ಲಿನ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಇಂದು ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಆಗಿತ್ತು. ಕಾಂಗ್ರೆಸ್‍ಗೆ ಜೆಡಿಎಸ್, ಬಿಎಸ್‍ಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಬಂದ್…

ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ
ಮೈಸೂರು

ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ

September 11, 2018

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ್ಯದ ಜನತೆ ಪೂರ್ಣವಾಗಿ ಬೆಂಬಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹೊರತುಪಡಿಸಿದರೆ, ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಜೆಯವರೆಗೂ, ಬಂದ್ ಯಶಸ್ವಿಯಾಯಿತು. ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಇದು ಉಡುಪಿ ಜಿಲ್ಲೆಯಲ್ಲಿ ತಾರಕಕ್ಕೇರಿ ಪರಿಸ್ಥಿತಿ ತಿಳಿಗೊಳಿಸಲು ಸ್ಥಳೀಯ ಅಧಿಕಾರಿಗಳು ನಾಳೆಯವರೆಗೂ ನಿಷೇಧಾಜ್ಞೆ ಹೇರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್…

ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ
ಮೈಸೂರು

ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ

September 11, 2018

ಮೈಸೂರು: ತೈಲ ಬೆಲೆ ಏರಿಕೆ ಖಂಡಿಸಿ, ಭಾರತ್ ಬಂದ್ ದಿನದಂದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ಆದರೆ ಬಂದ್ ನಡುವೆಯೇ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್‍ನಲ್ಲಿ 33 ಪೈಸೆ ಹೆಚ್ಚಳವಾಗಿದೆ. ಭಾನುವಾರ ಮೈಸೂರಿ ನಲ್ಲಿ ಲೀಟರ್ ಪೆಟ್ರೋಲ್‍ಗೆ 82.75 ರೂ. ಇತ್ತು. ಇಂದು 83.11 ರೂ.ಗೆ ಏರಿಕೆಯಾಗಿದೆ. ಹಾಗೆಯೇ ನಿನ್ನೆ 74.62 ರೂ. ಇದ್ದ ಡೀಸೆಲ್ ಬೆಲೆ, ಇಂದು 74.95 ರೂ.ಗೆ ಹೆಚ್ಚಳವಾಗಿದೆ….

ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು
ಮೈಸೂರು

ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು

September 11, 2018

ಮೈಸೂರು: ‘ಭಾರತ್ ಬಂದ್’ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನಗರ ಹಾಗೂ ಗ್ರಾಮಾಂತರ ವಿಭಾಗದ ಸಾರಿಗೆ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡಿದರು. ಇದರಿಂದ ಸಾರಿಗೆ ಸಂಸ್ಥೆಗೆ ಸುಮಾರು ಕೋಟಿ ರೂ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ. ತೈಲ ಹಾಗೂ ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಮೈಸೂರಿನಲ್ಲಿ ಬಂದ್ ಯಶಸ್ವಿಯಾಗಲಿದೆ…

ಭಾರತ್ ಬಂದ್‍ಗೆ ಬಡವರ ಜೀವನ ಬಲಿ
ಮೈಸೂರು

ಭಾರತ್ ಬಂದ್‍ಗೆ ಬಡವರ ಜೀವನ ಬಲಿ

September 11, 2018

ಮೈಸೂರು:  ಈ ಬಂದು-ಗಿಂದು ಯಾಕಾದ್ರೂ ಮಾಡ್ತಾರೆ ಸ್ವಾಮಿ?. ಬೆಳಿಗ್ಗೆಯಿಂದ ತಿಂಡಿ, ಊಟ ಮಾಡಿಲ್ಲ. ಒಂದ್ ರೂಪಾಯ್ ವ್ಯಾಪಾರ ಆಗಿಲ್ಲ. ಸಾಕಪ್ಪ ಈ ಜೀವ್ನ… ಇದು ಭಾರತ್ ಬಂದ್ ಬಿಸಿಯಿಂದ ನಲುಗಿದ್ದ ಮೈಸೂರಿನ ಬೀದಿ ಬದಿ ವ್ಯಾಪಾರಿಯೊಬ್ಬರ ವಿಷಾದದ ಮಾತು. ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ ಕೀಯ ಪಕ್ಷಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದವು. ದೇಶಾದ್ಯಂತ ಬಂದ್ ಯಶಸ್ವಿಯಾಗಿ ದ್ದಾಯ್ತು. ಇದರಿಂದಾಗುವ ಪರಿಣಾಮ ವನ್ನು ಕಾದು ನೋಡಬೇಕು. ಆದರೆ…

ಮೈಸೂರಿನ ವಿವಿಧೆಡೆಯಿಂದ ಹರಿದು ಬಂದ ಕಾಂಗ್ರೆಸ್ ಕಾರ್ಯಕರ್ತರ ದಂಡು
ಮೈಸೂರು

ಮೈಸೂರಿನ ವಿವಿಧೆಡೆಯಿಂದ ಹರಿದು ಬಂದ ಕಾಂಗ್ರೆಸ್ ಕಾರ್ಯಕರ್ತರ ದಂಡು

September 11, 2018

ಮೈಸೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಬಡಾವಣೆಗಳಿಂದ ಕಾಂಗ್ರೆಸ್ ಕಾರ್ಯ ಕರ್ತರು ಮೆರವಣಿಗೆಯಲ್ಲಿ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಆವರಣಕ್ಕೆ ಬಂದು, ಅಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರೆ ನೀಡಿದ್ದ ಭಾರತ್ ಬಂದ್, ಮೈಸೂರಲ್ಲಿ ಯಶಸ್ವಿಗೊಳಿಸಲೇಬೇಕೆಂದು ಪಣ ತೊಟ್ಟಿದ್ದ ಮೈಸೂರು ನಗರ ಕಾಂಗ್ರೆಸ್ ಸಮಿತಿ, ಬೆಳಿಗ್ಗೆ ಮೈಸೂರು ನಗರದಾ ದ್ಯಂತ ಪಕ್ಷದ ವಿವಿಧ ನಾಯಕರನ್ನು ನಿಯೋಜಿಸಿತ್ತು. ಶಾಸಕರು, ಮಾಜಿ ಶಾಸ ಕರು,…

ಮೈಸೂರು ಹೃದಯ ಭಾಗದಲ್ಲಿ ಹೋಟೆಲ್ ಸಹ ಬಂದ್: ಬಹುತೇಕ ಬಡಾವಣೆಗಳಲ್ಲಿ ತೆರೆದಿದ್ದ ಹೋಟೆಲ್‍ಗಳು
ಮೈಸೂರು

ಮೈಸೂರು ಹೃದಯ ಭಾಗದಲ್ಲಿ ಹೋಟೆಲ್ ಸಹ ಬಂದ್: ಬಹುತೇಕ ಬಡಾವಣೆಗಳಲ್ಲಿ ತೆರೆದಿದ್ದ ಹೋಟೆಲ್‍ಗಳು

September 11, 2018

ಮೈಸೂರು: ಭಾರತ್ ಬಂದ್‍ಗೆ ಕೇವಲ ನೈತಿಕ ಬೆಂಬಲ ಮಾತ್ರ ನೀಡುವುದಾಗಿ ಹೊಟೇಲ್ ಮಾಲೀಕರ ಸಂಘ ಹೇಳಿಕೆ ನೀಡಿತ್ತಾದರೂ ಇಂದು ಮೈಸೂರಿನ ಹೃದಯ ಭಾಗದಲ್ಲಿ ಬಹುತೇಕ ಹೊಟೇಲ್‍ಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದರೆ, ತೆರೆಯಲಾಗಿದ್ದ ಹೊಟೇಲ್‍ಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು. ಬಂದ್ ಹಿನ್ನೆಲೆಯಲ್ಲಿ ಭಾನುವಾರ ತುರ್ತು ಸಭೆ ನಡೆಸಿದ್ದ ಹೊಟೇಲ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾರತ್ ಬಂದ್‍ಗೆ ಕೇವಲ ನೈತಿಕ ಬೆಂಬಲ ನೀಡಿ, ಹೊಟೇಲ್‍ಗಳನ್ನು ತೆರೆಯಲು ನಿರ್ಧರಿಸಿದ್ದರು. ಈ ಸಂಬಂಧ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆ ನೀಡಿ, ಹೊಟೇಲ್‍ಗಳು…

ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್
ಮೈಸೂರು

ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್

September 11, 2018

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸರ್ಕಾರಿ ಪ್ರಾಯೋಜಿತ ಬಂದ್ ಆಚರಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಋಣ ತೀರಿಸಲು ಮುಂದಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರೆ ನೀಡಿದ ಭಾರತ ಬಂದ್ ರಾಜ್ಯದಲ್ಲಿ ಸರ್ಕಾ ರದ…

ಅಚ್ಛೇ ದಿನ್ ಎಲ್ಲಿ?
ಮೈಸೂರು

ಅಚ್ಛೇ ದಿನ್ ಎಲ್ಲಿ?

September 11, 2018

ಮೈಸೂರು:  ಅಧಿಕಾರಕ್ಕೆ ಬರುವ ಮುನ್ನ ದೇಶಕ್ಕೆ ಅಚ್ಛೇ ದಿನ್ (ಒಳ್ಳೆಯ ದಿನ) ಬರುತ್ತದೆ ಎಂದು ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ ಅಧಿಕಾರ ಹಿಡಿದು ನಾಲ್ಕೂವರೆ ವರ್ಷಗಳಾದರೂ ಅಚ್ಛೇ ದಿನ್ ಬರಲೇ ಇಲ್ಲ. ಎಲ್ಲಿ ಅಚ್ಛೇ ದಿನ್ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಇಂದಿಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ದೇಶಾದ್ಯಂತ ಕರೆ ನೀಡಿರುವ ಬಂದ್‍ಗೆ ಪ್ರಗತಿಪರರರು ಬೆಂಬಲ ವ್ಯಕ್ತಪಡಿಸಿದ್ದು, ಅಗ್ರಹಾರ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ…

ಹೈವೇ ವೃತ್ತದಲ್ಲಿ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಟೈರ್ ಸುಟ್ಟು ಕಾಂಗ್ರೆಸ್ ರಸ್ತೆತಡೆ
ಮೈಸೂರು

ಹೈವೇ ವೃತ್ತದಲ್ಲಿ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಟೈರ್ ಸುಟ್ಟು ಕಾಂಗ್ರೆಸ್ ರಸ್ತೆತಡೆ

September 11, 2018

ಮೈಸೂರು: ಮೈಸೂರು ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಮೈಸೂರಿನ ಹೈವೇ ವೃತ್ತದಲ್ಲಿ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ, ಟೈರ್ ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು. ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಹಿದ್ ಖಾದರ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು. ಕೊನೆಗೆ ಟೈರ್ ಸುಟ್ಟು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾರ್ಪೊರೇಟರ್ ಗಳಾದ ಪುಷ್ಪಲತಾ ಜಗನ್ನಾಥ್, ಪ್ರದೀಪ್ ಚಂದ್ರ, ಸೈಯ್ಯದ್ ಹಸ್ರತ್, ಅಕ್ಮಲ್…

1 2 3
Translate »