ಚಾಮರಾಜನಗರ: ಕಾರ್ಮಿಕರ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ನೆರವಾಗುವ ಸ್ಮಾರ್ಟ್ ಕಾರ್ಡ್‍ನ್ನು ಪಡೆಯಲು ಜಿಲ್ಲೆಯಲ್ಲಿ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಸುವಂತೆ ಶಾಸಕ ಎನ್. ಮಹೇಶ್ ಸಲಹೆ ನೀಡಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಕಾರ್ಮಿಕ ಇಲಾಖೆ ಆಶ್ರಯ ದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುವ ಸ್ಮಾರ್ಟ್ ಕಾರ್ಡ್ ವಿತರಣಾ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಇಲಾಖೆ…
ಪಿಎಸಿಸಿ ಸಂಘದ ನೌಕರರ ಪ್ರತಿಭಟನೆ
January 29, 2019ಚಾಮರಾಜನಗರ: ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವರ್ಗದ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿ ರುವ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಬ್ಯಾಂಕ್‍ಗಳ ಕ್ಷೇಮಾಭಿವೃದ್ಧಿ ಮಹಾಮಂಡಳಿಯ ಆಶ್ರಯದಲ್ಲಿ ಇಲ್ಲಿನ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನೌಕರರು ಜಮಾಯಿಸಿದರು. ನಂತರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆ ಆರಂಭಿಸಿದರು. ಭುವನೇಶ್ವರಿ…
ಹನೂರು ಪಪಂ ಬಜೆಟ್ ಪೂರ್ವಭಾವಿ ಸಭೆ
January 29, 2019ಹನೂರು: ಪಟ್ಟಣ ಪಂಚಾಯಿತಿ ಯಲ್ಲಿ 2019-2020ನೇ ಸಾಲಿನ ಆಯ ವ್ಯಯ ಮಂಡನೆಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆ ಯಲು ಪೂರ್ವಭಾವಿ ಸಭೆಯನ್ನು ಪ.ಪಂ ಅಧ್ಯಕ್ಷೆ ಮಮತಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಮಡಿವಾಳ ಸಮುದಾಯದ ಕುಮಾರ್ ಮಾತನಾಡಿ, ನಮ್ಮ ಜನಾಂಗಕ್ಕೆ ಸೇರಿರುವ ಸ್ಮಶಾನಕ್ಕೆ ಸುತ್ತು ಗೋಡೆ ಹಾಗೂ ಬೋರ್‍ವೇಲ್ ಕೊರೆಸಿ ಕೊಡುವಂತೆ ಮನವಿ ಮಾಡಿದರು, ಪಟ್ಟಣದ 8 ನೇ ವಾರ್ಡಿನ ನಿವಾಸಿ ರಾಜಪ್ಪ ಸಾರ್ವಜನಿಕರ ಪರವಾಗಿ ಮಾತ ನಾಡಿ, ಪಟ್ಟಣದಲ್ಲಿ ವಾಸಿಸುವ ಸಾರ್ವಜ ನಿಕರಿಗೆ…
ಚಿಕ್ಕಲ್ಲೂರು ಜಾತ್ರೆ: ಮುಡಿಸೇವೆ ಸಡಗರ
January 24, 2019ಸಿದ್ದಪ್ಪಾಜಿ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ, ಜಿಲ್ಲಾಡಳಿತದಿಂದ ಬಿಗಿ ಭದ್ರತೆ, ಎಲ್ಲೆಡೆ ಪ್ರತಿಧ್ವನಿಸುತ್ತಿರುವ ಸಿದ್ದಪ್ಪಾಜಿ, ಮಂಟೇಸ್ವಾಮಿ ನಾಮ ಸ್ಮರಣೆ ಹನೂರು: ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆ ಯುತ್ತಿರುವ ಚಿಕ್ಕಲ್ಲೂರು ಜಾತ್ರೆಯ 3ನೇ ದಿನವಾದ ಬುಧವಾರ ಮುಡಿಸೇವೆ ಲಕ್ಷಾಂ ತರ ಭಕ್ತರ ಸಮ್ಮುಖದಲ್ಲಿ ನಡೆಯಿತು. ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸಹ ಸ್ರಾರು ಭಕ್ತರು ಮುಡಿ ಸೇವೆ ಸಲ್ಲಿಸಿ, ದೇವಾ ಲಯದ ಸುತ್ತ ಉರುಳು ಸೇವೆ, ಬಸವ ದಾಟುವ ಸೇವೆ ಸಲ್ಲಿಸಿ ಭಕ್ತಿಭಾವ ಮೆರೆದರು. ಇದೇ ಸಂದರ್ಭದಲ್ಲಿ ನೂತನವಾಗಿ ನೂರಾರು…
ಸುಳವಾಡಿ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಕೆ
January 24, 2019ಚಾಮರಾಜನಗರ: ಸುಳವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಕೊಡ ಗಿನ ವಕೀಲರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಮೊದಲನೇ ಆರೋಪಿ ಇಮ್ಮಡಿ ಮಹ ದೇವಸ್ವಾಮಿ ಪರ ಮೂವರು ವಕೀಲರು ವಕಾಲತ್ತಿನ ಅರ್ಜಿಯಲ್ಲಿ ಸಹಿ ಹಾಕಿದ್ದು, ಇವರ ಪೈಕಿ ಪೆÇನ್ನಂಪೇಟೆ ವಕೀಲರಾದ ಹೆಚ್.ಯು.ಸುಧೀಶ್, ಎ.ಎಂ.ಲೋಹಿತ್ ಅವರು ನ್ಯಾಯಾಲಯಕ್ಕೆ ಆಗಮಿಸಿ ಮೊದ ಲನೇ ಆರೋಪಿ ಪರ ಮುಂಗಡ ಅರ್ಜಿಯೊಂದಿಗೆ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಜಿ.ಬಸವರಾಜು…
ಗಂಡು ಚಿರತೆ ಕಳೇಬರ ಪತ್ತೆ
January 24, 2019ಚಾಮರಾಜನಗರ: ತಾಲೂಕಿನ ವೀರನ ಪುರ ಗ್ರಾಮದ ಕರಿಕಲ್ಲು ಕ್ವಾರೆಯ ಬಳಿ ಬುಧವಾರ ಗಂಡು ಚಿರತೆಯ ಕಳೇಬರ ಪತ್ತೆಯಾಗಿದೆ. ಸುಮಾರು ಎರಡು ಮೂರು ದಿನಗಳ ಹಿಂದೆಯೇ ಈ ಚಿರತೆ ಸಾವನ್ನ ಪ್ಪಿದೆ ಎನ್ನಲಾಗಿದೆ. ಕ್ವಾರೆಯ ಸುತ್ತ ಕೆಟ್ಟ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿ ಸ್ಥಳೀಯರು ನೋಡಿದಾಗ ಚಿರತೆ ಶವ ಪತ್ತೆಯಾಗಿದೆ. ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಚಿರತೆಯ ಮೈ ಮೇಲೆ ಹಾಗೂ ಬಾಯಿಯಲ್ಲಿ…
ಚಾಮರಾಜನಗರ ಜಿಲ್ಲೆಗೂ ಶ್ರೀ ಶಿವಕುಮಾರಸ್ವಾಮೀಜಿಗೂ ಅವಿನಾಭಾವ ಸಂಬಂಧ ಜಿಲ್ಲೆಯಲ್ಲೂ ಅಪಾರ ಶಿಷ್ಯ ಕೋಟಿ
January 22, 2019ಚಾಮರಾಜನಗರ: ಸೋಮವಾರ ಬೆಳಿಗ್ಗೆ ಶಿವೈಕ್ಯರಾದ ಸಿದ್ದಗಂಗಾ ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರಿಗೂ ಗಡಿ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇತ್ತು. ಹೀಗಾಗಿ ಶ್ರೀಗಳು ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಸಿದ್ಧಗಂಗಾ ಮಠದ ಯಾವುದೇ ಶಾಖೆಯಾಗಲೀ, ಶಿಕ್ಷಣ ಸಂಸ್ಥೆಯಾಗಲೀ ಜಿಲ್ಲೆಯಲ್ಲಿ ಇಲ್ಲ. ಆದರೂ ಸಹ ಸಿದ್ಧಗಂಗಾ ಮಠದಲ್ಲಿ ಜಿಲ್ಲೆಯ ನೂರಾರು ಮಂದಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇದರಲ್ಲಿ ಹಲವರು ಉನ್ನತ ಹುದ್ದೆಗಳನ್ನು ಅಲಂ ಕರಿಸಿರುವುದು ಗಮನಾರ್ಹ. ಹೀಗಾಗಿ ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಅವರು ಜಿಲ್ಲೆಯಲ್ಲಿ ಅಪಾರ ಶಿಷ್ಯಕೋಟಿಯನ್ನು ಹೊಂದಿದ್ದರು….
ಸಿದ್ಧಗಂಗಾ ಶ್ರೀಗಳಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ
January 22, 2019ಚಾಮರಾಜನಗರ: ಸೋಮವಾರ ನಿಧನರಾದ ನಡೆದಾಡುವ ದೇವರೆಂದೇ ನಾಮಾಂಕಿತರಾಗಿದ್ದ ತುಮಕೂರಿನ ಸಿದ್ಧ ಗಂಗಾ ಕ್ಷೇತ್ರದ ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಜಿಲ್ಲೆಯಾದ್ಯಂತ ಭಾವಪೂರ್ಣ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಜಿಲ್ಲೆಯ ತಾಲೂಕು ಕೇಂದ್ರಗಳಾದ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇ ಗಾಲ, ಹನೂರು ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ, ಗ್ರಾಮ ಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಚಾಮರಾಜನಗರ ವರದಿ: ನಗರದ ಜೋಡಿರಸ್ತೆಯಲ್ಲಿ ಇರುವ ಶ್ರೀ ಸಿದ್ದ ಮಲ್ಲೇಶ್ವರ ವಿರಕ್ತ ಮಠದ…
ಚಿಕ್ಕಲ್ಲೂರಲ್ಲಿ ಚಂದ್ರಮಂಡಲೋತ್ಸವ ಸಂಭ್ರಮ
January 22, 2019ಹನೂರು: ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನವಾದ ಸೋಮವಾರ ರಾತ್ರಿ ಚಂದ್ರಮಂಡಲೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಜರುಗಿತು. ಜ್ಞಾನೇಂದ್ರ ಚೆನ್ನಂಜರಾಜೇ ಅರಸ್ ಅವರು ದೇವಾಲಯದಲ್ಲಿ ಕಂಡಾಯಗಳಿಗೆ ಪೂಜೆ ಸಲ್ಲಿಸಿದರು. ವಿವಿಧ ಕಡೆಗಳಿಂದ ಬಂದಿದ್ದ ಕಂಡಾಯಗಳು ಹಾಗೂ ಸಾವಿರಾರು ನೀಲಗಾರರ ಸಮೇತ ಚಂದ್ರ ಮಂಡಲದ ಕಟ್ಟೆಯನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಚಂದ್ರ ಮಂಡಲಕ್ಕೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡಲಾ ಯಿತು. ನೆರೆದಿದ್ದ ನೀಲಗಾರರು ಪವಾಡ ಪುರುಷ ಸಿದ್ದಪ್ಪಾಜಿಯ ಗುಣಗಾನ ಮಾಡಿದರು….
ಜ.29ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
January 17, 2019ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.29ರ ವರೆಗೆ ವಿಸ್ತರಿಸಲಾಗಿದೆ. ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ನ್ಯಾಯಾಧೀಶ ಜಿ.ಬಸವರಾಜು ಅವರ ಮುಂದೆ ಹಾಜರುಪಡಿಸಲಾಯಿತು. ಬಂಧಿತ ನಾಲ್ವರು ಆರೋಪಿಗಳನ್ನು ಮೈಸೂರಿನ ಕಾರಾಗೃಹದಲ್ಲಿ ಇರಿಸಲಾಗಿದ್ದು, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ…