ಚಿಕ್ಕಲ್ಲೂರು ಜಾತ್ರೆ: ಮುಡಿಸೇವೆ ಸಡಗರ
ಚಾಮರಾಜನಗರ

ಚಿಕ್ಕಲ್ಲೂರು ಜಾತ್ರೆ: ಮುಡಿಸೇವೆ ಸಡಗರ

January 24, 2019

ಸಿದ್ದಪ್ಪಾಜಿ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ, ಜಿಲ್ಲಾಡಳಿತದಿಂದ ಬಿಗಿ ಭದ್ರತೆ, ಎಲ್ಲೆಡೆ ಪ್ರತಿಧ್ವನಿಸುತ್ತಿರುವ ಸಿದ್ದಪ್ಪಾಜಿ, ಮಂಟೇಸ್ವಾಮಿ ನಾಮ ಸ್ಮರಣೆ

ಹನೂರು: ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆ ಯುತ್ತಿರುವ ಚಿಕ್ಕಲ್ಲೂರು ಜಾತ್ರೆಯ 3ನೇ ದಿನವಾದ ಬುಧವಾರ ಮುಡಿಸೇವೆ ಲಕ್ಷಾಂ ತರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಸಹ ಸ್ರಾರು ಭಕ್ತರು ಮುಡಿ ಸೇವೆ ಸಲ್ಲಿಸಿ, ದೇವಾ ಲಯದ ಸುತ್ತ ಉರುಳು ಸೇವೆ, ಬಸವ ದಾಟುವ ಸೇವೆ ಸಲ್ಲಿಸಿ ಭಕ್ತಿಭಾವ ಮೆರೆದರು.

ಇದೇ ಸಂದರ್ಭದಲ್ಲಿ ನೂತನವಾಗಿ ನೂರಾರು ಸಿದ್ದಪ್ಪಾಜಿ ನೀಲಗಾರರು ದೇವಾ ಲಯದಲ್ಲಿ ದೀಕ್ಷೆ ಪಡೆದರು. ಲಕ್ಷಾಂತರ ಭಕ್ತರು ಬೆಳಿಗ್ಗೆಯಿಂದಲೂ ದೇವಾಲಯದ ಬಳಿ ಕಿಕ್ಕಿರಿದು ನೆರೆದು ವಿಶೇಷ ಪೂಜೆ ಸಲ್ಲಿ ಸಿದರು. ಐದು ದಿನಗಳ ಕಾಲ ನಡೆಯುವ ಪವಾಡ ಪುರುಷ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಮಹೋತ್ಸವದ ಮೂರನೇ ಭಕ್ತರು ಹಾಗೂ ನೀಲಗಾರರು ಕಷ್ಟ ಕಾರ್ಪಣ್ಯ ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತ ತಲೆಕೂದಲನ್ನು ತೆಗೆಸುವ ಮೂಲಕ ಮುಡಿಸೇವೆ ಕಾರ್ಯವನ್ನು ಸಲ್ಲಿಸಿ ಸಿದ್ದ ಪ್ಪಾಜಿಗೆ ದೂಪ ಹಾಕಿ ಸರತಿ ಸಾಲಿನಲ್ಲಿ ನಿಂತು ಆರಾಧ್ಯ ದೈವನ ದÀರ್ಶನ ಪಡೆ ದರು. ಜಾತ್ರೆಯಲ್ಲಿ ಭಕ್ತರು ದೂಪ, ಸಾಮ್ರಾಣಿ, ಕರ್ಪೂರ, ಹಣ್ಣುಕಾಯಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.

ನೀಲಗಾರರ ದೀಕ್ಷೆ: ಇನ್ನು ಚಿಕ್ಕಲ್ಲೂರು ಜಾತ್ರೆ ಸಂದರ್ಭದಲ್ಲಿ ನೀಲಗಾರರ ದೀಕ್ಷೆ ತೊಡುವ ಮಂದಿಯೂ ಬಹಳ. ಪರಂ ಪರೆಯನ್ನು ಉಳಿಸುವ ಉದ್ದೇಶದಿಂದ ನೀಲಗಾರರಾಗುವವರಿಗೆ ದೀಕ್ಷೆ ನೀಡಿ ಕೊರ ಳಲ್ಲಿ ಕಟ್ಟಿಕೊಳ್ಳಲು ಮಣಿ ಮತ್ತು ರುದ್ರಾಕ್ಷಿ, ಜೋಳಿಗೆ ಮತ್ತು ಬೆತ್ತವನ್ನು ನೀಡಲಾಗು ತ್ತದೆ. ಹೀಗೆ ದೀಕ್ಷೆ ಪಡೆದವರು ತಮ್ಮ ಜೀವಿ ತದರೆಗೂ ಮಂಟೇಸ್ವಾಮಿ ಸಿದ್ದಪ್ಪಾಜಿ ರಾಚಪ್ಪಾಜಿ ಭಕ್ತರಾಗಿ ಇರುತ್ತಾರೆ.
ಕಂಡಾಯಗಳ ಉತ್ಸವ: ಚಿಕ್ಕಲ್ಲೂರು ಜಾತ್ರೆ ಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಭಾಗವಹಿಸಿದ್ದು, ಜಾತ್ರೆಯ ಅಂಗಳದಲ್ಲಿ ಬುಧವಾರ ಕಂಡಾಯ ಉತ್ಸವ ವಿಜೃಂಭಣೆಯಿಂದ ನಡೆಯಿತು. ಹರಕೆ ಹೊತ್ತ ಭಕ್ತರು ಬಿಡಾರದಲ್ಲಿ ಸಿಹಿ ಊಟ, ತಯಾ ರಿಸಿ ಸಿದ್ದಪ್ಪಾಜಿ, ಮಂಟೇಸ್ವಾಮಿ ಕಂಡಾಯ ಗಳನ್ನು ಹೊತ್ತು ತರುವ ನೀಲಗಾರರನ್ನು ಬಿಡಾರಕ್ಕೆ ಕರೆಯಿಸಿ ಕಂಡಾಯಗಳ ಮುಂದೆ ತಯಾರಿಸಿದ ಸಿಹಿ ಊಟವನ್ನು ಎಡೆಯಿಟ್ಟು ಪೂಜಿಸಿದರು. ಈ ಪದ್ಧ ತಿಯು ಹಿಂದಿನಿಂದಲೂ ಸಹ ನಡೆದು ಕೊಂಡು ಬಂದಿದೆ.

ಜಾತ್ರೆ ತುಂಬೆಲ್ಲಾ ಭಕ್ತರ ಬಿಡಾರಗಳು: ಚಿಕ್ಕಲ್ಲೂರು ಜಾತ್ರೆ 5 ದಿನಗಳು ವಿಜೃಂ ಭಣೆಯಿಂದ ನಡೆಯುವುದರಿಂದ ಜಾತ್ರೆಗೂ ಮುನ್ನ ಹರಕೆ ಹೊತ್ತ ಭಕ್ತರು ಹಾಗೂ ಸಂಬಂಧಿಕರು ಒಂದು ವಾರಕ್ಕೂ ಮುನ್ನವೇ ದೇವಸ್ಥಾನ ಸುತ್ತಮುತ್ತಲಿನಲ್ಲಿ ಜಮೀನು ಗಳಲ್ಲಿ ಸ್ಥಳ ನಿಗದಿ ಮಾಡಿ ಬಿಡಾರಗಳನ್ನು ನಿರ್ಮಾಣ ಮಾಡಿಕೊಂಡು ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಮುತ್ತರಾಯನಿಗೆ ಪೂಜೆ: ಚಿಕ್ಕಲ್ಲೂರು ಜಾತ್ರೆಗೆ ಆಗಮಿಸುವ ಭಕ್ತರು ಶ್ರೀಸಿದ್ದ ಪ್ಪಾಜಿ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಹಿಂಭಾಗವಿರುವ ಮುತ್ತರಾ ಯನಿಗೂ ಪೂಜೆ ಸಲ್ಲಿಸಿ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಬಿಗಿ ಭದ್ರತೆ: ಗುರುವಾರ ಚಿಕ್ಕಲ್ಲೂರಿನಲ್ಲಿ ನಡೆಯುವ ಪಂಕ್ತಿ ಸೇವೆಯಲ್ಲಿ ಪ್ರಾಣಿ ಬಲಿ ತಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಡಳಿ ತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಜಾತ್ರೆಗೆ ಬರುವ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ಪರಿಶೀಲಿಸುತ್ತಿ ದ್ದಾರೆ. ವಾಹನದಲ್ಲಿ ಕಂಡು ಬಂದ ಕುರಿ ಮತ್ತು ಕೋಳಿಗಳನ್ನು ಪೆÇಲೀಸರು ವಶ ಪಡಿಸಿಕೊಂಡರು. ಬಾಣೂರು ಗೇಟ್, ಮತ್ತು ಸುಂಡ್ರಳ್ಳಿ ಗೇಟ್ ಇನ್ನಿತರೆ ಚೆಕ್ ಪೋಸ್ಟ್‍ಗಳಲ್ಲಿ ಪೊಲೀಸರು ತೀವ್ರ ತಪಾ ಸಣೆ ನಡೆಸಿ ವಾಹನಗಳನ್ನು ಬಿಡುತ್ತಿರು ವುದು ದೃಶ್ಯ ಕಂಡು ಬಂದಿತು.

ಸುಳವಾಡಿ ಎಫೆಕ್ಟ್: ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹೈ ಅಲರ್ಟ್
ಕೊಳ್ಳೇಗಾಲ: ಹನೂರು ವ್ಯಾಪ್ತಿಯ ಸುಳವಾಡಿ ಕಿಚ್ ಗುತ್ ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವನೆಯಿಂದ ಉಂಟಾದ ದುರಂತದಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಚಿಕ್ಕಲ್ಲೂರು ಜಾತ್ರೆಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿ ಸದಂತೆ ಬಿಗಿ ಭದ್ರತೆ ನೀಡಿದೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದರೆ ಹೊಸಮಠ ಹಾಗೂ ಹಳೇ ಮಠಗಳ ಅಧ್ಯಕ್ಷ, ವ್ಯವಸ್ಥಾಪಕರನ್ನೇ ಹೊಣೆಗಾರರನ್ನಾಗಿಸ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಜಾತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಮುಡಿ ಸೇವೆಯಲ್ಲಿ ಬಳಸಿದ ಬ್ಲೇಡ್ ಸ್ವಚ್ಛಗೊಳಿಸಿ ಒಂದೆಡೆ ಸಂಗ್ರಹಿ ಸುವಂತೆ ಸೂಚಿಸಿದೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ದೇವಸ್ಥಾನದ ಆವರಣ ಸೇರಿದಂತೆ ವಿವಿಧೆಡೆ ಭಿತ್ತಿ ಪತ್ರಗಳು ಹಾಗೂ ಬ್ಯಾನರ್ ಅಳವಡಿಸಲಾಗಿದೆ.
ಭಕ್ತರು ಹಳಸಿದ ಆಹಾರ ಪದಾರ್ಥ ಸೇವಿಸಬಾರದು. ಸ್ವಚ್ಛತೆ ಕಾಪಾಡಿ ಎಂಬಿತ್ಯಾದಿ ಜಾಗೃತಿ ಸಂದೇಶವನ್ನು ಬರೆ ಯಿಸಲಾಗಿದೆ. ಆರೋಗ್ಯ ಸಲಹೆಯನ್ನು ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಇದರ ಜೊತೆಗೆ ಜಾತ್ರೆ ಪರಿಸರಲ್ಲಿ ಪ್ರಾಣಿ ಬಲಿ ನಿಷೇಧದ ಫಲಕಗಳು ವ್ಯಾಪಕವಾಗಿ ಅಳವಡಿಸಿರುವುದು ಕಂಡು ಬಂತು.

Translate »