ಸುಳವಾಡಿ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಕೆ
ಚಾಮರಾಜನಗರ

ಸುಳವಾಡಿ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಕೆ

January 24, 2019

ಚಾಮರಾಜನಗರ: ಸುಳವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಕೊಡ ಗಿನ ವಕೀಲರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಮೊದಲನೇ ಆರೋಪಿ ಇಮ್ಮಡಿ ಮಹ ದೇವಸ್ವಾಮಿ ಪರ ಮೂವರು ವಕೀಲರು ವಕಾಲತ್ತಿನ ಅರ್ಜಿಯಲ್ಲಿ ಸಹಿ ಹಾಕಿದ್ದು, ಇವರ ಪೈಕಿ ಪೆÇನ್ನಂಪೇಟೆ ವಕೀಲರಾದ ಹೆಚ್.ಯು.ಸುಧೀಶ್, ಎ.ಎಂ.ಲೋಹಿತ್ ಅವರು ನ್ಯಾಯಾಲಯಕ್ಕೆ ಆಗಮಿಸಿ ಮೊದ ಲನೇ ಆರೋಪಿ ಪರ ಮುಂಗಡ ಅರ್ಜಿಯೊಂದಿಗೆ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಜಿ.ಬಸವರಾಜು ಅವರಿಗೆ ಸಲ್ಲಿಸಿದ್ದರು. ಇಂದೇ ವಿಚಾರಣೆಯನ್ನು ನಡೆಸು ವಂತೆ ಮನವಿ ಮಾಡಿಕೊಂಡರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀ ಶರು ಜಾಮೀನು ಅರ್ಜಿಯನ್ನು ಮಧ್ಯಾಹ್ನ 3ಗಂಟೆಗೆ ನಡೆಸುವುದಾಗಿ ತಿಳಿಸಿದರು.

ಅದರಂತೆ ಮಧ್ಯಾಹ್ನ 3 ಗಂಟೆಗೆ ನ್ಯಾಯಾ ಲಯದಲ್ಲಿ ಕಲಾಪದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ಕೈಗೆತ್ತಿ ಕೊಂಡರು. ಆದರೆ, ಜಾಮೀನು ಅರ್ಜಿ ಸಲ್ಲಿಸಿದ್ದ ವಕೀಲರು ನ್ಯಾಯಾಲಯಕ್ಕೆ ಹಾಜ ರಾಗಲಿಲ್ಲ. ಇದರಿಂದ ನ್ಯಾಯಾಧೀಶರು ಈ ಬಗೆಗಿನ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.

ಪ್ರಕರಣ ಸಂಬಂಧ ಪೊಲೀಸರು ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ಬಂಧಿಸಿದ್ದಾರೆ. ಇವರಲ್ಲಿ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಕೋರಿಕೆ ಅರ್ಜಿ ಸಲ್ಲಿಕೆಯಾಗಿದೆ. ಉಳಿದ ಮೂವರು ಆರೋಪಿಗಳಿಗೆ ಇದುವರೆಗೂ ಜಾಮೀನು ಅರ್ಜಿ ಸಲ್ಲಿಕೆ ಆಗಿಲ್ಲ. ಬಂಧಿತರ ನ್ಯಾಯಾಂಗ ಬಂಧನ ಜ.29ಕ್ಕೆ ಮುಕ್ತಾಯವಾಗಲಿದೆ. ಅದೇ ಅವರನ್ನು ಪೊಲೀಸರು ನ್ಯಾಯಾ ಲಯಕ್ಕೆ ಹಾಜರುಪಡಿಸಬೇಕಾಗಿದೆ. ಜಾಮೀನು ಅರ್ಜಿ ವಿಚಾರಣೆಯೂ ಅಂದೇ ವಿಚಾರಣೆಗೆ ಬರಲಿದೆ.

ಸುಳವಾಡಿಯಲ್ಲಿ ವಿಷ ಪ್ರಸಾದ ಸೇವಿಸಿ 17 ಅಮಾಯಕ ಭಕ್ತರು ಸಾವನ್ನಪ್ಪಿದ್ದ ರಿಂದ ಮಾನವೀಯತೆ ದೃಷ್ಟಿಯಿಂದ ಆರೋಪಿಗಳ ಪರ ಯಾವೊಬ್ಬ ವಕೀಲರು ವಕಾಲತ್ತು ವಹಿಸಬಾರದು ಎಂದು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿತ್ತು. ಇದನ್ನು ಬೆಂಬಲಿಸಿ ಮೈಸೂ ರಿನ ವಕೀಲರ ಸಂಘವೂ ಸಹ ಆರೋಪಿಗಳ ಪರ ವಕಾಲತ್ತು ವಹಿಸದಂತೆ ತೀರ್ಮಾನ ಕೈಗೊಂಡಿತ್ತು. ಆದರೆ ಇದೀಗ ಪೊನ್ನಂಪೇಟೆ ವಕೀಲರು ಜಮೀನಿಗೆ ಅರ್ಜಿ ಸಲ್ಲಿಸಿರು ವುದು ಚರ್ಚೆಗೆ ಗ್ರಾಸವಾಗಿದೆ.

ಸುಳವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ಕೋರಿ ಪೊನ್ನಂಪೇಟೆಯ ಮೂವರು ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆಗಮಿಸಿದ್ದ ಇಬ್ಬರು ವಕೀಲರೊಂದಿಗೆ ನಾನು ಮತ್ತು ನಮ್ಮ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಚರ್ಚೆ ನಡೆಸಿದವು. 17 ಜನರು ಮೃತ ಪಟ್ಟಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಜಾಮೀನು ಅರ್ಜಿ ಸಲ್ಲಿಸಿರುವ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. 

-ಉಮ್ಮತ್ತೂರು ಇಂದುಶೇಖರ್, ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ, ಚಾಮರಾಜನಗರ.

Translate »