ಸಿದ್ಧಗಂಗಾ ಶ್ರೀಗಳಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ
ಚಾಮರಾಜನಗರ

ಸಿದ್ಧಗಂಗಾ ಶ್ರೀಗಳಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ

January 22, 2019

ಚಾಮರಾಜನಗರ: ಸೋಮವಾರ ನಿಧನರಾದ ನಡೆದಾಡುವ ದೇವರೆಂದೇ ನಾಮಾಂಕಿತರಾಗಿದ್ದ ತುಮಕೂರಿನ ಸಿದ್ಧ ಗಂಗಾ ಕ್ಷೇತ್ರದ ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಜಿಲ್ಲೆಯಾದ್ಯಂತ ಭಾವಪೂರ್ಣ ಶ್ರದ್ಧಾಂ ಜಲಿ ಸಲ್ಲಿಸಲಾಯಿತು.

ಜಿಲ್ಲೆಯ ತಾಲೂಕು ಕೇಂದ್ರಗಳಾದ ಚಾಮ ರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇ ಗಾಲ, ಹನೂರು ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ, ಗ್ರಾಮ ಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಚಾಮರಾಜನಗರ ವರದಿ: ನಗರದ ಜೋಡಿರಸ್ತೆಯಲ್ಲಿ ಇರುವ ಶ್ರೀ ಸಿದ್ದ ಮಲ್ಲೇಶ್ವರ ವಿರಕ್ತ ಮಠದ ಮುಂಭಾಗ ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದಸ್ವಾಮೀಜಿ ಮತ್ತು ಶ್ರೀ ಮಠದ ಶ್ರೀ ಚನ್ನಬಸವಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆ ಯಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾ ಯಿತು. ನಂತರ 2 ನಿಮಿಷ ಮೌನಾ ಚರಣೆ ಮಾಡುವ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಈ ವೇಳೆ ಮಾತನಾಡಿದ ಶ್ರೀ ದಯಾನಂದಸ್ವಮೀಜಿ, ಶಿಖರಗಳಲ್ಲಿ ಮೌಂಟ್ ಎವರೆಸ್ಟ್ ಎತ್ತರವಿರುವಂತೆ ಸಂತರಲ್ಲಿ ಸಿದ್ಧಗಂಗಾ ಶ್ರೀಗಳು ಎವರೆಸ್ಟ್ ಇದ್ದಂತೆ ಇದ್ದರು. ಅವರ ಅಗಲಿಕೆಯಿಂದ ಇಡೀ ವಿಶ್ವಕ್ಕೆ ನಷ್ಟ ಉಂಟಾಗಿದೆ ಎಂದರು.
ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧಗಂಗಾ ಶ್ರೀಗಳು ಎಲ್ಲರಿಗೂ ಆದರ್ಶರಾಗಿದ್ದರು. ಇಡೀ ವಿಶ್ವಕ್ಕೆ ಮಾದರಿ ಆಗಿದ್ದ ಶ್ರೀಗಳ ನಿಧನದಿಂದ ತುಂಬಾ ನಷ್ಟ ಉಂಟಾಗಿದೆ ಎಂದರು.

ಜಿಪಂ ಸದಸ್ಯ ಕೆ.ಪಿ. ಸದಾಶಿವ ಮೂರ್ತಿ, ನಗರಸಭೆ ಪೌರಾಯುಕ್ತ ಎಂ. ರಾಜಣ್ಣ, ಎಪಿಎಂಸಿ ಸದಸ್ಯ ವಿಶ್ವನಾಥ್, ಮುಖಂಡರಾದ ದೊಡ್ಡರಾಯ ಪೇಟೆ ಗಿರೀಶ್, ಕಾವುದವಾಡಿ ಗುರು, ಆಲೂರು ಮಲ್ಲು, ಕೋಟಂಬಳ್ಳಿ ವೀರಭದ್ರಸ್ವಾಮಿ, ಪರಮೇಶ್ವರಪ್ಪ, ನಾಗೇಂದ್ರ, ಹಿರೇಬೇಗೂರು ಗುರುಸ್ವಾಮಿ, ಸ್ಟೈಲ್‍ಮಂಜು, ಆರ್. ಪುಟ್ಟಮಲ್ಲಪ್ಪ, ಬ್ಯಾಡಮೂಡ್ಲು ಬಸವಣ್ಣ, ರಂಗಯ್ಯ, ಪ್ರಕಾಶ್, ಶಿವಣ್ಣ, ನಾಗೇಶ್, ರಮೇಶ್‍ಬಾಬು, ರಾಜ ಶೇಖರ್, ಗುರುಸ್ವಾಮಿ ಇತರರು ಹಾಜರಿದ್ದರು.

Translate »