Tag: Chamarajanagar

ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು
ಚಾಮರಾಜನಗರ

ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು

November 4, 2018

ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ನವಜಾತ ಶಿಶುಗಳು ಮೃತ ಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.ನಗರದ ಭಗೀರಥ ನಗರದ ನಿವಾಸಿ ಹೇಮಂತ್ ಅವರ ಪತ್ನಿ ರಂಜಿತಾ(19) ಹಾಗೂ ಆಕೆಯ ಎರಡು ನವ ಜಾತ ಶಿಶುಗಳು ಮೃತಪಟ್ಟಿದ್ದಾರೆ. ತುಂಬು ಗರ್ಭಿಣಿ ಯಾಗಿದ್ದ ರಂಜಿತಾ ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ತಪಾಸಣೆಗೆ ಒಳಗಾಗಿ ಮನೆಗೆ ತೆರಳಿದ್ದರು. ಆದರೆ ಶನಿವಾರ ಬೆಳಗಿನ ಜಾವ ತೀವ್ರ ಕೆಮ್ಮು ಕಾಣಿಸಿಕೊಂಡ ಕಾರಣ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ತಪಾಸಣೆ ನಡೆ…

ಹಾಡಹಗಲೇ ಮಹಿಳೆಯ ಚಿನ್ನದ ಸರ ಕಳವು
ಚಾಮರಾಜನಗರ

ಹಾಡಹಗಲೇ ಮಹಿಳೆಯ ಚಿನ್ನದ ಸರ ಕಳವು

November 4, 2018

ಚಾಮರಾಜನಗರ: ವಿಳಾಸ ಕೇಳುವ ನೆಪದಲ್ಲಿ ಹಾಡಹ ಗಲೇ ಮಹಿಳೆಯ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶನಿ ವಾರ ಮಧ್ಯಾಹ್ನ ನಡೆದಿದೆ.ಗ್ರಾಮದ ಸ್ವೆಲ್ಲಮ್ಮ (65) ಚಿನ್ನದ ಸರ ಕಳೆದುಕೊಂಡ ಮಹಿಳೆ. ವಿವರ: ಜಮೀನಿಗೆ ತೆರಳಿದ್ದ ಸ್ವೆಲ್ಲಮ್ಮ ಅವರು ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ಗ್ರಾಮದ ಚರ್ಚ್ ಬಳಿ ನಡೆದು ಕೊಂಡು ಬರುತ್ತಿದ್ದ ಇವರನ್ನು ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿ ಗಳು ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು…

ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡ ವಶ
ಚಾಮರಾಜನಗರ

ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡ ವಶ

November 3, 2018

ಚಾಮರಾಜನಗರ:  ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲೆಯ ವಿವಿಧೆಡೆ ಲಕ್ಷಾಂ ತರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಾ.ನಗರ: ಜಮೀನಿನಲ್ಲಿ ರಾಗಿ ಬೆಳೆ ಜೊತೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನು ರಾಮ ಸಮುದ್ರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಪುಣಜನೂರು ಸಮೀಪದ ಶ್ರೀನಿವಾಸಪುರ ಕಾಲೋನಿಯ ಜಡೇಗೌಡ ಬಂಧಿತ ಆರೋಪಿ. ಜಡೇಗೌಡ ತನ್ನ ಜಮೀನಿನಲ್ಲಿ ರಾಗಿ ಬೆಳೆ ಜೊತೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನ ಲಾಗಿದೆ. ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ…

ಸ್ಥಗಿತವಾಗಿದ್ದ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ
ಚಾಮರಾಜನಗರ

ಸ್ಥಗಿತವಾಗಿದ್ದ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ

October 31, 2018

ಚಾಮರಾಜನಗರ: ಸ್ಥಗಿತವಾಗಿದ್ದ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ‘ಮೈಸೂರು ಮಿತ್ರ’ ತನ್ನ ಸೆ.29ರ ಸಂಚಿಕೆಯಲ್ಲಿ ‘ಚಾ.ನಗರ ಜೋಡಿ ರಸ್ತೆ ಅಭಿ ವೃದ್ಧಿ ಕಾಮಗಾರಿ ಸ್ಥಗಿತ’ ಎಂಬ ಶೀರ್ಷಿಕೆಯಡಿ ಕಾಮಗಾರಿ ಸ್ಥಗಿತಗೊಂಡಿದ್ದರ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಒಂದೇ ದಿನಕ್ಕೆ ಕಾಮಗಾರಿ ಪುನಾರಂಭಗೊಂಡಿದೆ. ನಗರದ ಏಕೈಕ ಬಿ.ರಾಚಯ್ಯ ಜೋಡಿ ರಸ್ತೆಯ 3.1 ಕಿಲೋ ಮೀಟರ್ ರಸ್ತೆ ಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿ ಸುವ ಕಾಮಗಾರಿಯನ್ನು…

ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ
ಚಾಮರಾಜನಗರ

ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ

October 31, 2018

ಚಾಮರಾಜನಗರ: ಎಚ್1 ಎನ್1 ಜ್ವರಕ್ಕೆ ಮಹಿ ಳೆಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪಟ್ಟಣ ದಲ್ಲಿ ನಡೆದಿದೆ. ಪಟ್ಟಣದ ಪಿಡಬ್ಲ್ಯುಡಿ ಕಾಲೋನಿ ನಿವಾಸಿ, ನಿವೃತ್ತ ಎಸ್‍ಐ ಶಿವಣ್ಣ ಅವರ ಪತ್ನಿ ನಾಗಮ್ಮ (58) ಮೃತಪಟ್ಟವರು. ಮೃತರು ಎರಡು ವಾರಗಳ ಹಿಂದೆ ಮೈಸೂರಿಗೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಅವರು ಎಚ್1ಎನ್1 ಜ್ವರಕ್ಕೆ ತುತ್ತಾಗಿ ದ್ದರು. ಚಿಕಿತ್ಸೆಗಾಗಿ ನಾಗಮ್ಮ ಅವರನ್ನು ಅ.25ರಂದು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನ ಪ್ಪಿದ್ದಾರೆ. ಇದು ಜಿಲ್ಲೆಯಲ್ಲಿ…

ಶಶಿ ಮಾರಮ್ಮನ ಜಾತ್ರೆ ಆರಂಭ
ಚಾಮರಾಜನಗರ

ಶಶಿ ಮಾರಮ್ಮನ ಜಾತ್ರೆ ಆರಂಭ

October 31, 2018

ಉಮ್ಮತ್ತೂರು: ಇಲ್ಲಿಗೆ ಸಮೀಪದ ಜೆನ್ನೂರು-ಹೊಸೂರು ಗ್ರಾಮದ ಅಧಿದೇವತೆ ಶಶಿ ಮಾರಮ್ಮ ಜಾತ್ರೆ ಇಂದಿನಿಂದ (ಅ.30)ಆರಂಭವಾಗಿದ್ದು, ನ.2ರವರೆಗೆ ನಡೆಯಲಿದೆ. ಜಾತ್ರೆಗೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದ್ದು, ಗ್ರಾಮದಲ್ಲಿ ಸಂಜೆ ಪಂಜಿನ ಸೇವೆ ನಡೆಯಿತು. ಬುಧವಾರ ಬೆಳಿಗ್ಗೆ 11ಕ್ಕೆ ಶಶಿ ಮಾರಮ್ಮನ ಉತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಮಡೆ ಉತ್ಸವ ನಡೆಯಲಿದೆ. ಗುರುವಾರ ದೇವತಾ ಕಾರ್ಯಗಳು ಹಾಗೂ ಶುಕ್ರವಾರ ಗೊರೆ ಹಬ್ಬದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಮತದಾನ ಗೌಪ್ಯತೆ ಬಹಿರಂಗ: ಯುವಕನ ವಿರುದ್ಧ ಎಫ್‍ಐಆರ್!
ಚಾಮರಾಜನಗರ

ಮತದಾನ ಗೌಪ್ಯತೆ ಬಹಿರಂಗ: ಯುವಕನ ವಿರುದ್ಧ ಎಫ್‍ಐಆರ್!

October 31, 2018

ಕೊಳ್ಳೇಗಾಲ:  ಮತದಾನದ ಗೌಪ್ಯತೆಯನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದ ಯುವಕನ ವಿರುದ್ಧ ಕೊಳ್ಳೇ ಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸೆಕ್ಷನ್ 145, 135, 66 ರಡಿ ಏಫ್‍ಐಆರ್ ದಾಖಲಾಗಿದೆ. ಪಟ್ಟಣದ ಮಠದ ಬೀದಿಯ ಯುವಕ ನಿಖಿಲ್ ಅ.28ರಂದು ಪಟ್ಟಣದ 9ನೇ ವಾರ್ಡ್‍ನಲ್ಲಿ ನಡೆದ ನಗರಸಭೆ ಉಪ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸ್‍ಪ್‍ಗಳಿಗೆ…

ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ
ಚಾಮರಾಜನಗರ

ಚಿತ್ರದುರ್ಗ ಬಳಿ ಚಾ.ನಗರ ಜಿಪಂ ಅಧ್ಯಕ್ಷೆ ಕಾರು ಅಪಘಾತ

October 30, 2018

ಚಾಮರಾಜನಗರ:  ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕಾರು ಭಾನುವಾರ ಚಿತ್ರದುರ್ಗ ಬಳಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರನಿಗೆ ಕೈ-ಕಾಲು ಮುರಿದಿದ್ದು, ಕಾರಿನಲ್ಲಿದ್ದ ಜಿಪಂ ಅಧ್ಯಕ್ಷೆ ಶಿವಮ್ಮ, ಆಕೆಯ ಪತಿ ಕೃಷ್ಣ ಹಾಗೂ ಚಾಲಕ ಪಾರಾಗಿದ್ದಾರೆ. ಜಿಪಂ ಅಧ್ಯಕ್ಷೆ ಶಿವಮ್ಮ ಅವರು ತಮ್ಮ ಪತಿಯೊಂದಿಗೆ ಸರ್ಕಾರಿ ವಾಹನ ಇನ್ನೋವಾ (ಕೆಎ-10, ಜಿ.9000) ಕಾರಿನಲ್ಲಿ ತೆರಳು ತ್ತಿದ್ದರು. ಈ ವೇಳೆ ಹಿರಿಯೂರು ಬಳಿ ಎದುರಿನಿಂದ ಬಂದ ಬೈಕ್‍ಗೆ ಇವರ ಕಾರು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಬೈಕ್ ಸವಾರನ ಕೈ-ಕಾಲು…

ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಚಾಮರಾಜನಗರ

ಹಾಸ್ಟೆಲ್‍ಗಳ ಸುಧಾರಣೆಗೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

October 30, 2018

ಚಾಮರಾಜನಗರ:  ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಣ ನೀಡುವ ಮೂಲಕ ಹಾಸ್ಟಲ್‍ಗಳ ಸುಧಾರಣೆಗೆ ಕ್ರಮ ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿಂದು ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೂರಕ ವಾತಾ ವರಣ ಕಲ್ಪಿಸಲು ಸರ್ಕಾರ ಸಾಕಷ್ಟು ಅನುದಾನ ಒದಗಿಸಿದೆ….

ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ
ಚಾಮರಾಜನಗರ

ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ

October 30, 2018

ಚಾಮರಾಜನಗರ: ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗೂಳೀಪುರ ಗ್ರಾಮದಿಂದ ಸೋಮವಾರ ವರದಿಯಾಗಿದೆ. ಗ್ರಾಮದ ಶಂಕರಪ್ಪ ಎಂಬುವರ ಪುತ್ರ ಮಹೇಶ್ ಉ. ಮಹದೇವಸ್ವಾಮಿ (25) ಆತ್ಮಹತ್ಯೆ ಮಾಡಿ ಕೊಂಡ ಯುವಕ. ಮೃತ ಮಹೇಶ್ ಮೂರು ವರ್ಷದ ಹಿಂದೆ ಆಟೋ ಅಪಘಾತ ನಡೆಸಿದ್ದ ಎನ್ನಲಾಗಿದೆ. ಇದರ ಪ್ರಕರಣ ಯಳಂದೂರು ನ್ಯಾಯಾ ಲಯದಲ್ಲಿ ಸೋಮವಾರ ಇತ್ತು. ಇದರಿಂದ ಭಯಭೀತನಾಗಿ ಗ್ರಾಮದ ಮನೆಯ ಹಿಂಭಾಗ ಇದ್ದ ಹುಣಸೆಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಮಸಮುದ್ರ ಠಾಣೆಯ…

1 29 30 31 32 33 74
Translate »