ಚಾಮರಾಜನಗರ: ವಿಳಾಸ ಕೇಳುವ ನೆಪದಲ್ಲಿ ಹಾಡಹ ಗಲೇ ಮಹಿಳೆಯ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶನಿ ವಾರ ಮಧ್ಯಾಹ್ನ ನಡೆದಿದೆ.ಗ್ರಾಮದ ಸ್ವೆಲ್ಲಮ್ಮ (65) ಚಿನ್ನದ ಸರ ಕಳೆದುಕೊಂಡ ಮಹಿಳೆ.
ವಿವರ: ಜಮೀನಿಗೆ ತೆರಳಿದ್ದ ಸ್ವೆಲ್ಲಮ್ಮ ಅವರು ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ಗ್ರಾಮದ ಚರ್ಚ್ ಬಳಿ ನಡೆದು ಕೊಂಡು ಬರುತ್ತಿದ್ದ ಇವರನ್ನು ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿ ಗಳು ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಸ್ವೆಲ್ಲಮ್ಮ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಬೈಕ್‍ನ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಮಹಿಳೆಯ ಕತ್ತಿನಲ್ಲಿದ್ದ 25ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾ ದರು ಎಂದು ಕುದೇರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ಗೀತಾಪ್ರಸನ್ನ, ಡಿವೈಎಸ್ಪಿ ಜಯ ಕುಮಾರ್, ಸಿಪಿಐ ರಾಜೇಂದ್ರ, ಕುದೇರು ಎಸ್‍ಐ ಸಿದ್ದಯ್ಯ ಭೇಟಿ ನೀಡಿ ಪರಿಶೀ ಲಿಸಿದರು. ಇದುವರೆಗೂ ನಗರ ಪ್ರದೇಶ ಗಳಲ್ಲಿ ಸರಗಳ್ಳತನ ನಡೆಯುತ್ತಿತ್ತು. ಇದೀಗ ಗ್ರಾಮೀಣ ಪ್ರದೇಶಕ್ಕೂ ಸರಗಳ್ಳರು ಕಾಲಿ ಟ್ಟಿರುವ ಕಾರಣ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.