Tag: Gonikoppal

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ
ಕೊಡಗು

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ

July 10, 2018

ಗೋಣಿಕೊಪ್ಪಲು: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ಬೆಳೆಗಾರರ ತೋಟಕ್ಕೆ ಅಳವಡಿಸಿರುವ ಸೋಲರ್ ಬೇಲಿಯನ್ನು ಕಾಡಾನೆಗಳು ಧ್ವಂಸ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ. ಕಾಡಾನೆಯ ಭಯದಿಂದ, ಭಾರೀ ಮಳೆಯಲ್ಲಿ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸಮೀಪದ ದೇವರ ಕಾಡುವಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಯ ಹಿಂಡು ಸಂಜೆ ಆಗುತ್ತಿದ್ದಂತೆಯೇ ಸಮೀಪದ ಮನೆಯಪಂಡ, ಕಡೇಮಾಡ, ಕಂಜಿತಂಡ, ಕಳ್ಳಿಚಂಡ ಕುಟುಂಬಸ್ಥರ ಕಾಫಿ ತೋಟಕ್ಕೆ ಲಗ್ಗೆ ಇಡುವ ಈ ಕಾಡಾನೆ…

ತಿತಿಮತಿ ಬಳಿ 2 ಪ್ರತ್ಯೇಕ ಬೈಕ್ ಅಪಘಾತ ಬೈಕ್ ಸವಾರ ಸಾವು, ಚೆನ್ನೈನ ಇಬ್ಬರು ಪ್ರವಾಸಿಗರ ಕಾಲು ಮುರಿತ
ಕೊಡಗು

ತಿತಿಮತಿ ಬಳಿ 2 ಪ್ರತ್ಯೇಕ ಬೈಕ್ ಅಪಘಾತ ಬೈಕ್ ಸವಾರ ಸಾವು, ಚೆನ್ನೈನ ಇಬ್ಬರು ಪ್ರವಾಸಿಗರ ಕಾಲು ಮುರಿತ

July 8, 2018

ಗೋಣಿಕೊಪ್ಪಲು:  ಕೆಎಸ್ ಆರ್‍ಟಿಸಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ವಾರದ ರಜೆ ಕಳೆಯಲು ಚೆನ್ನೈನಿಂದ ಕೊಡಗಿಗೆ ಬೈಕ್‍ನಲ್ಲಿ ಆಗ ಮಿಸುತ್ತಿದ್ದ ಇಬ್ಬರು ಯುವಕರು ತೀವ ್ರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ತಿತಿಮತಿ ಬಳಿ ನಡೆದಿದೆ. ರಾತ್ರಿ 8 ಗಂಟೆ ವೇಳೆಯಲ್ಲಿ ಟೆಂಪೋಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಚೆನ್ನೈ ಮೂಲದ ಲೋಕೇಶ್ (25) ಹಾಗೂ ಅಶ್ವಿನ್(24) ಬೆಳಿಗ್ಗೆ ನಡೆದ ಅಪ ಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಇಬ್ಬರು ಯುವಕರ ಕಾಲು ಮುರಿದಿದೆ. ಚೆನ್ನೈನಿಂದ…

ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು
ಕೊಡಗು

ಮಗುಚಿದ ಸರ್ಕಾರಿ ಬಸ್: ಅಪಾಯದಿಂದ ಪ್ರಯಾಣಿಕರು ಪಾರು

July 6, 2018

ಗೋಣಿಕೊಪ್ಪಲು:  ಗೋಣಿಕೊಪ್ಪಲು-ಪೊನ್ನಂಪೇಟೆ-ಬಾಳೆಲೆ ಮಾರ್ಗವಾಗಿ ಸಂಜೆ 4 ಗಂಟೆಗೆ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಪೊನ್ನಂಪೇಟೆ-ಕಿರುಗೂರು ರಸ್ತೆಯ ಮತ್ತೂರು ಬಳಿ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ. ಬಸ್‍ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ರಸ್ತೆಯ ಎಡ ಭಾಗದ ಚರಂಡಿಗೆ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಾಲಕನ ಬಳಿ ಇರುವ ಬಾಗಿಲಿನ ಮೂಲಕ ಒಬ್ಬಬ್ಬರಾಗಿ ಹೊರ ಬಂದರು.

ಬೀದಿ ನಾಯಿಗಳ ಕಾಟ
ಕೊಡಗು

ಬೀದಿ ನಾಯಿಗಳ ಕಾಟ

July 5, 2018

ಗೋಣಿಕೊಪ್ಪಲು: ಗೋಣಿಕೊಪ್ಪಲು ಪಂಚಾಯ್ತಿ ವ್ಯಾಪ್ತಿಯ ಬಸ್ ನಿಲ್ದಾಣ, ಮುಖ್ಯ ರಸ್ತೆ,ಮಾರ್ಕೇಟ್ ಆವರಣದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ಸಾರ್ವಜನಿಕರಿಗೆ ನಡೆದಾಡುವುದೇ ಕಷ್ಟವಾಗಿದೆ. ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣಗೊಂಡಿದೆ. ಮುಂಜಾನೆ ವಾಯು ವಿಹಾರಕ್ಕೆ ತೆರಳುವ ಮಹಿಳೆಯರು ಈ ಬೀದಿ ನಾಯಿಗಳ ಉಪಟಳದಿಂದ ರೋಸಿ ಹೋಗಿದ್ದು ವಾಯು ವಿಹಾರ ನಡೆಸುವುದನ್ನು ಬಿಟ್ಟಿದ್ದಾರೆ. ರಸ್ತೆಯ ಬದಿಯಲ್ಲಿ ಬಿಸಾಡುತ್ತಿರುವ ಆಹಾರವನ್ನು ಹುಡುಕುತ್ತಾ ನಗರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ನಗರಕ್ಕೆ ಆಗಮಿಸುತ್ತಿವೆ. ನಾಯಿಗಳ ಕಾಟದಿಂದ ಬಸ್…

ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ
ಕೊಡಗು

ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ

July 4, 2018

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಸುಮಾರು 130 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ್ದರು. ಆರಂಭದಲ್ಲಿ ಇದ್ದ ಸ್ಥಿತಿಯಲ್ಲಿಯೇ ಕಾಲೇಜು ಈಗಲೂ ಮುಂದುವರೆಯು ತ್ತಿದೆ. ಕಟ್ಟಡ ದುರಸ್ಥಿ ಕಾಣದೆ, ಶಿಥಿ ಲಾವಸ್ಥೆಗೆ ತಲುಪಿದೆ. ಕಟ್ಟಡದ ಗೋಡೆ ಗಳಲ್ಲಿ ಅಲ್ಲಲ್ಲಿ ಬಿರುಕು, ಪ್ಲಾಸ್ಟಿಂಗ್ ಕಿತ್ತು ಬಂದಿದೆ. ಕೆಲವು ಗೋಡೆ ಬಿದ್ದು ದೊಡ್ಡಕಿಂಡಿಯಾಗಿದೆ. ಹೆಂಚುಗಳು ಹಳತಾಗಿ, ಕೆಲವು ಹೆಂಚುಗಳು ತೂತಾಗಿ, ಎಲ್ಲಾ ತರಗತಿ ಕೊಠಡಿಗಳೂ ಮಳೆಯಿಂದ ಸೋರುತ್ತಿವೆ. ಬೆಂಚ್‍ಗಳು,…

ಪೊಲೀಸ್ ಠಾಣೆ ಬಳಿಯೇ ಶ್ರೀಗಂಧ ಮರ ಕಳವು
ಕೊಡಗು

ಪೊಲೀಸ್ ಠಾಣೆ ಬಳಿಯೇ ಶ್ರೀಗಂಧ ಮರ ಕಳವು

June 30, 2018

ಗೋಣಿಕೊಪ್ಪಲು:  ಶ್ರೀಗಂಧದ ಮರವನ್ನು ಕಡಿದು ತುಂಡುಗಳನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆಯ ಸಮೀಪದಲ್ಲೇ ನಡೆದಿದೆ. ಪಟ್ಟಣದ ಜ್ಯೂಸ್ ಫ್ಯಾಕ್ಟರಿ ರಸ್ತೆಯ ಸಮೀಪ ಖಾಸಗಿ ಜಾಗದಲ್ಲಿ ಗುರುವಾರ ರಾತ್ರಿ ಕಳ್ಳರು ಈ ದುಷ್ಕತ್ಯ ಎಸಗಿದ್ದಾರೆ. ಮರವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಪ್ರಮುಖ ಬುಡವನ್ನು ಸಾಗಿಸಿದ್ದಾರೆ ಆದರೆ 2 ಮರದ ತುಂಡುಗಳನ್ನು ಸಾರ್ವಜನಿಕರು ಬಂದ ಹಿನ್ನಲೆಯಲ್ಲಿ ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಉಳಿದಿದ್ದ…

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ
ಕೊಡಗು

ಶೀಘ್ರ ಲಘು ವಾಹನ ಸಂಚಾರ: ಅಧಿಕಾರಿಗಳ ಭರವಸೆ

June 26, 2018

ಮಾಕುಟ್ಟ-ವಿರಾಜಪೇಟೆ ಸಂಪರ್ಕ ರಸ್ತೆಯ ಕಾಮಗಾರಿ ಪರಿಶೀಲಿಸಿದ ಸಂಕೇತ್ ಪೂವಯ್ಯ ಗೋಣಿಕೊಪ್ಪಲು:  ಈ ಬಾರಿ ಸುರಿದ ಭಾರಿ ಮಳೆಯಿಂದ ಕೊಡಗು-ಕೇರಳ ಸಂಪರ್ಕ ರಸ್ತೆ ಕಡಿತಗೊಂಡಿರುವ ವಿರಾಜಪೇಟೆ-ಮಾಕುಟ್ಟ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಜೆಡಿಎಸ್ ಜಿಲ್ಲಾ ಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು. ಸೋಮವಾರ ಮಾಕುಟ್ಟಕ್ಕೆ ತೆರಳಿದ ಸಂಕೇತ್ ಪೂವಯ್ಯ ಘಟನಾ ಸ್ಥಳದಿಂದ ಮಡಿಕೇರಿ ಲೋಕೋಪಯೋಗಿ ಅಧಿಕಾರಿ ಗಳಾದ ವಿನಯ್ ಕುಮಾರ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತು ಕತೆ ನಡೆಸಿದರು. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವ ಜನಿಕರಿಗೆ…

ಅರಣ್ಯ ವಿದ್ಯಾಲಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಕೊಡಗು

ಅರಣ್ಯ ವಿದ್ಯಾಲಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

June 26, 2018

ಗೋಣಿಕೊಪ್ಪಲು:  ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯವನ್ನು ಖಾಸಗಿ ಕಾಲೇಜು ಮಾಡಲು ಮುಂದಾಗಿರು ವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರಸ್ತುತ ಕಾಲೇಜಿಗೆ ಉತ್ತಮ ಅನುದಾನ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಿ ನಡೆಯುತ್ತಿದ್ದು, ಇದನ್ನು ಖಾಸಗಿಗೆ ನೀಡಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ಖಾಸಗಿಗೆ ನೀಡಿದರೆ ಉದ್ಯೋಗ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಣದ ಆಮಿಷಕ್ಕೆ ಒಳಗಾಗುವುದರಿಂದ ಪ್ರತಿಭೆಗಳು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ….

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಆರ್ಭಟ
ಕೊಡಗು

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಆರ್ಭಟ

June 23, 2018

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರೆ ದಿದ್ದು ರೈತರ ಜಾನುವಾರುಗಳನ್ನು ಪ್ರತಿ ದಿನ ಕೊಂದು ಹಾಕುತ್ತಿದೆ. ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ನಿವಾಸಿ ಕುಂಞಂಗಡ ಸಿದ್ದು, ಸಿದ್ದಾರ್ಥ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಗಬ್ಬ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಹಸು ಇನ್ನು ಮೂರು ದಿನದಲ್ಲಿ ಈ ಹಸುವು ಕರುವನ್ನು ಹಾಕುವ ಸಂಭ ವವಿತ್ತು. ಮುಂಜಾನೆಯ ವೇಳೆಯಲ್ಲಿ ಲಗ್ಗೆ ಯಿಡುವ ಹುಲಿಯು ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮುಂಜಾನೆ ಕೊಟ್ಟಿಗೆಗೆ…

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ
ಕೊಡಗು

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ

June 21, 2018

ಗೋಣಿಕೊಪ್ಪಲು:  ಶ್ರೀಮಂಗಲ ಗ್ರಾಪಂ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪನವರ ಎರಡು ಹಾಲು ಕರೆಯುವ ಹಸು ವಿನ ಮೇಲೆ ದಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆ ಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಸಮೀಪದ ಗದ್ದೆ ಬಯ ಲಿನ ಪೊದೆಯಲ್ಲಿ ಅರ್ಧ ಭಾಗವನ್ನು ತಿಂದು ಹಾಕಿದೆ. ಮುಂಜಾನೆ ಕೊಟ್ಟಿಗೆಗೆ…

1 5 6 7 8 9
Translate »