ಗುಂಡ್ಲುಪೇಟೆ: ಇಲ್ಲಿನ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಪಿ.ಸುರೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಆಂತರಿಕ ಒಪ್ಪಂದದಂತೆ ಈ ಹಿಂದೆ ಇದ್ದ ನಾಗರಾಜನಾಯ್ಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಯಲ್ಲಿ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಪಿ.ಸುರೇಂದ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿ ಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ರಶೀದ್ ಬೇಗ್ ಘೋಷಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಸುರೇಂದ್ರ…
ಗ್ರಾಮೀಣ ಕ್ರೀಡಾಪಟುಗಳಿಗೆ ಸೌಲಭ್ಯ ಕಲ್ಪಿಸಲು ಆದ್ಯತೆ
July 21, 2018ಗುಂಡ್ಲುಪೇಟೆ: ‘ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿರುವುದು ಅಭಿನಂದನಾರ್ಹ’ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು. ತಾಲೂಕಿನ ಕೆಲಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಕೆಲಸೂರು ಗ್ರಾಮದ ಯುವಜನ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳು ಹಾಗೂ ತರಬೇತುದಾರರ ಸಹಕಾರದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿರುವ…
ರಾಜ್ಯದಲ್ಲಿ ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಿ.ವೈ.ವಿಜಯೇಂದ್ರ ಭವಿಷ್ಯ
July 19, 2018ಗುಂಡ್ಲುಪೇಟೆ: ರಾಜ್ಯದ ಜನತೆಯ ಆಶೀರ್ವಾದವಿಲ್ಲದ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂಭವ ಹೆಚ್ಚಾಗಿದೆ ಎಂದು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಹಿಂದೇಟು ಹಾಕಿದ್ದರೂ ಸಹ ಪಟ್ಟುಬಿಡದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ ಪರಿಣಾಮ ಸಾಲಮನ್ನಾ ಮಾಡಲಾಗಿದೆ. ಆದರೆ…
ಚಿರತೆ ಕೊಂದ ಜಿಂಕೆ ಕಳೇಬರ ಸಾಗಾಣೆ: ಇಬ್ಬರ ಬಂಧನ
July 19, 2018ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಚಿರತೆ ಬೇಟೆಯಾಡಿದ್ದ ಜಿಂಕೆಯ ಕಳೇಬರವನ್ನು ಕೊಂಡೊ ಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಂಗಳವಾರ ತಡರಾತ್ರಿ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಗೊಳಪಡುವ ಓಂಕಾರ್ ಅರಣ್ಯ ವಲಯದ ಕಾಡಂಚಿನ ಗ್ರಾಮವಾದ ಸವಕನಹಳ್ಳಿ ಬಳಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ಕೊಂದು ಸ್ವಲ್ಪ ಭಾಗವನ್ನು ತಿಂದಿತ್ತು, ಚಿರತೆಯು ಕೊಂದಿದ್ದ ಜಿಂಕೆಯ ಕಳೇಬರವನ್ನು ಸಮೀಪದ ಮಂಚಹಳ್ಳಿ ಗ್ರಾಮದ ವಾಸಿ ಮಹದೇವಯ್ಯ ಹಾಗೂ ಬೇರಂಬಾಡಿ ಗ್ರಾಮದ ವಾಸಿ ಕೃಷ್ಣನಾಯ್ಕ ನೋಡಿ ಉಳಿದ…
ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ
July 19, 2018ಗುಂಡ್ಲುಪೇಟೆ: ಕೊಲೆ, ಅಪಹರಣ ಪ್ರಕರಣ ಸೇರಿದಂತೆ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ವಾಸಿ ರಾಮಚಂದ್ರ ಎಂಬುವರ ಮಗ ನಂದೀಶ್ ಅಲಿಯಾಸ್ ಕಾರದಪುಡಿ(24) ಬಂಧಿತ ಆರೋಪಿ. ಈತ ಪಟ್ಟಣದ 16ನೇ ವಾರ್ಡಿನಲ್ಲಿ ಸತೀಶ್ ಎಂಬುವರ ಮನೆಯಲ್ಲಿ, ಅಶ್ವಿನಿ ಬಡಾವಣೆಯ ಚಿದಂಬರ ಎಂಬುವರ ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿ ತಲೆ ಮರೆಸಿ ಕೊಂಡಿದ್ದ. ಇದಲ್ಲದೆ ಈತ ಮಳವಳ್ಳಿಯಲ್ಲಿನ…
ಬುದ್ಧಿಮಾಂದ್ಯ ಶಾಲೆ ನೆರವು ನೀಡಿದ ಉದ್ಯಮಿ
July 17, 2018ಗುಂಡ್ಲುಪೇಟೆ: ಸರ್ಕಾರದ ಅನುದಾನವಿಲ್ಲದೆ ದಾನಿಗಳ ನೆರನಿಂದ ನಡೆಯುತ್ತಿರುವ ಪಟ್ಟಣದ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಉದ್ಯಮಿ ಯೊಬ್ಬರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕಳೆದ 9 ವರ್ಷಗಳಿಂದ ಪೃಥ್ವಿ ವುಮೆನ್ ಅಂಡ್ ರೂರಲ್ ಡೆವಲಪ್‍ಮೆಂಟ್ ಆರ್ಗ ನೈಜೇಷನ್ ವತಿಯಿಂದ ಪಟ್ಟಣದ ಅರಳೀ ಕಟ್ಟೆ ಬೀದಿಯಲ್ಲಿ ನಡೆಸುತ್ತಿರುವ ಬುದ್ಧಿ ಮಾಂದ್ಯ ಮಕ್ಕಳ ಈ ವಿಶೇಷ ಶಾಲೆಯಲ್ಲಿ ಮಕ್ಕಳು ಹಾಗೂ ವಯಸ್ಕರೂ ಸೇರಿದಂತೆ ಸುಮಾರು 27 ಜನರಿದ್ದಾರೆ. ಇದಕ್ಕೆ ಸರ್ಕಾರದ ವಿವಿಧ ಅಂಗ ಸಂಸ್ಥೆ ಗಳಿಂದ ನೆರವು ಪಡೆಯಲು ಸಾಹಸ ಮಾಡುತ್ತಿದ್ದರೂ…
ಸಚಿವರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
July 17, 2018ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕೈಗೊಂಡಿರುವ ವಿವಿಧ ರಸ್ತೆ, ಚರಂಡಿ, ಕಟ್ಟಡ ಕಾಮಗಾರಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಸೋಮವಾರ ವ್ಯಾಪಕವಾಗಿ ಪರಿಶೀಲಿಸಿದರು. ಬೆಳಿಗ್ಗೆಯಿಂದಲೇ ನಗರಾದ್ಯಂತ ಚುರುಕಿನಿಂದ ಸಂಚರಿಸಿ ಕಾಮಗಾರಿಗಳನ್ನು ಸಚಿವರು ವಿಕ್ಷೀಸಿದರು. ಮೊದಲಿಗೆ ಜಿಲ್ಲಾ ತರಬೇತಿ ಸಂಸ್ಥೆಯ ಮುಂಭಾಗದಲ್ಲಿರುವ ಶಿಥಿಲ ಗೊಂಡ ಒವರ್ ಹೆಡ್‍ಟ್ಯಾಂಕ್‍ನ್ನು ಪರಿ ಶೀಲಿಸಿದರು. ಇದಕ್ಕೆ ಪರ್ಯಾಯವಾಗಿ ಹೊಸ ಟ್ಯಾಂಕ್ ನಿರ್ಮಾಣ ಇಲ್ಲವೆ ದುರಸ್ಥಿ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ತುರ್ತಾಗಿ ನಿರ್ಧಾರ…
ವೇತನ ವಿಳಂಬ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು
July 17, 2018ಗುಂಡ್ಲುಪೇಟೆ: ಎರಡು ತಿಂಗಳಿನಿಂದ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಸಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕರೆಯ ಮೇರೆಗೆ ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರೂ ತಮ್ಮ ತೋಳುಗಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ ದರು. ಎರಡು ತಿಂಗಳ ವೇತನ ದೊರಕದೆ ಶಿಕ್ಷಕರಿಗೆ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿರುವ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲವಾದ್ದರಿಂದ ಜೀವನ ನಿರ್ವಹಣೆಗೆ ಸಾಲಮಾಡಬೇಕಾದ…
ಬೆಂಡರವಾಡಿಯಲ್ಲಿ ಗ್ರಂಥಾಲಯಕ್ಕೆ ಭೂಮಿ ಪೂಜೆ
July 16, 2018ಗುಂಡ್ಲುಪೇಟೆ: ತಾಲೂಕಿನ ಬೆಂಡರವಾಡಿಯಲ್ಲಿ ತುಮ ಕೂರಿನ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಕ್ಷರ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಅವರ ಗೌರವಾರ್ಥ ನಿರ್ಮಿಸುತ್ತಿರುವ ಸುಸಜ್ಜಿತ ಗ್ರಂಥಾಲಯಕ್ಕೆ ಐಎಫ್‍ಎಸ್ ಅಧಿಕಾರಿ ಡಾ.ಆರ್.ರಾಜು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ತಂದೆಯವರಾದ ಅಕ್ಷರ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಅವರು ಬೆಂಡರವಾಡಿ ಗ್ರಾಮದ ಮೇಲೆ ವಿಶೇಷವಾದ ಪ್ರೀತಿ ಮತ್ತು ಗೌರವವನ್ನು ಇಟ್ಟು ಕಳೆದ 25 ವರ್ಷಗಳ ಹಿಂದೆಯೇ ಗ್ರಂಥಾಲಯ ಸೌಕರ್ಯ ಕಲ್ಪಿಸಿದ್ದರು. ಇತ್ತೀಚಿಗೆ ಉಪ…
ಕೊಂಗಳ್ಳಿ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ
July 16, 2018ಗುಂಡ್ಲುಪೇಟೆ: ತಾಲೂಕಿನ ಭಕ್ತರು ಆಷಾಢ ಮಾಸದ ಅಮಾವಾಸ್ಯೆಯ ಅಂಗವಾಗಿ ತಾಳವಾಡಿ ಫಿರ್ಕಾಗೆ ಸೇರಿದ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆಷಾಢ ಮಾಸದ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಕಾರಣದಿಂದ ತಾಲೂಕಿನ ಮತ್ತು ಹೆಗ್ಗಡದೇವನಕೋಟೆ ಹಾಗೂ ನಂಜನಗೂಡು ತಾಲೂಕುಗಳಿಂ ದಲೂ ಹೆಚ್ಚಿನ ಭಕ್ತರು ಕೊಂಗಳ್ಳಿ ಮಲ್ಲಿ ಕಾರ್ಜುನಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆಯಲ್ಲಿ ಭಾಗವಹಿಸಿದ್ದರು. ಕೊಂಗಳ್ಳಿ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.