ಸಚಿವರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಸಚಿವರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

July 17, 2018

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕೈಗೊಂಡಿರುವ ವಿವಿಧ ರಸ್ತೆ, ಚರಂಡಿ, ಕಟ್ಟಡ ಕಾಮಗಾರಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಸೋಮವಾರ ವ್ಯಾಪಕವಾಗಿ ಪರಿಶೀಲಿಸಿದರು.

ಬೆಳಿಗ್ಗೆಯಿಂದಲೇ ನಗರಾದ್ಯಂತ ಚುರುಕಿನಿಂದ ಸಂಚರಿಸಿ ಕಾಮಗಾರಿಗಳನ್ನು ಸಚಿವರು ವಿಕ್ಷೀಸಿದರು. ಮೊದಲಿಗೆ ಜಿಲ್ಲಾ ತರಬೇತಿ ಸಂಸ್ಥೆಯ ಮುಂಭಾಗದಲ್ಲಿರುವ ಶಿಥಿಲ ಗೊಂಡ ಒವರ್ ಹೆಡ್‍ಟ್ಯಾಂಕ್‍ನ್ನು ಪರಿ ಶೀಲಿಸಿದರು. ಇದಕ್ಕೆ ಪರ್ಯಾಯವಾಗಿ ಹೊಸ ಟ್ಯಾಂಕ್ ನಿರ್ಮಾಣ ಇಲ್ಲವೆ ದುರಸ್ಥಿ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ತುರ್ತಾಗಿ ನಿರ್ಧಾರ ಕೈಗೊಂಡು ಕಾಮಗಾರಿಗೆ ಅಗತ್ಯ ಪ್ರಕ್ರಿಯೆ ವಹಿಸ ಬೇಕು ಎಂತೆ ಸೂಚಿಸಿದರು.

ಬಳಿಕ, ಅನ್ವರ್‍ಪಾಷ ಕಲ್ಯಾಣ ಮಂಟಪ ಬಳಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು. ಕರಿವರದರಾಜನಬೆಟ್ಟದ ಬಳಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು. ಘಟಕದ ಬಳಿ ಇರುವ ಮಣ್ಣುಗುಡ್ಡೆಯನ್ನು ಸಮತಟ್ಟುಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿ ಗಳಿಗೆ ತಿಳಿಸಿದರು.

ತದನಂತರ ಚಿಕ್ಕಂಗಡಿ ಬೀದಿ, ದೊಡ್ಡಂ ಗಡಿ ಬೀದಿ, ರಥದ ಬೀದಿಯಲ್ಲಿ ನಿರ್ಮಾಣವಾಗಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ದರು. ಕೆಲವೆಡೆ ಕಾಮಗಾರಿ ಸರಿ ಇಲ್ಲದಿ ರುವ ಬಗ್ಗೆ ಆಕ್ಷೇಪಿಸಿ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಅಂಗಡಿ ಮಾಲೀಕರು ಸಚಿವ ರಿಗೆ ಮನವಿ ಮಾಡಿ ಶೀಘ್ರವಾಗಿ ಕಾಮ ಗಾರಿ ಪೂರ್ಣಗೊಳಿಸಬೇಕು. ಇದರಿಂದ ವ್ಯಾಪಾರ, ವಹಿವಾಟು ಎಂದಿನಂತೆ ನಡೆ ಯಲು ಅನುಕೂಲವಾಗಲಿದೆ ಎಂದರು.

ರಥದ ಬೀದಿಯಲ್ಲಿ ನಗರೋತ್ಥಾನದಡಿ ಯಲ್ಲಿ 290 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿ ಪರಿ ಶೀಲಿಸಿದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ವ್ಯಾಪಾರ ಮಾಡುವ ವರಿಗೆ ಸೌಲಭ್ಯ ತಲುಪುವಂತೆ ನೋಡಿ ಕೊಳ್ಳಬೇಕು ಎಂದು ತಿಳಿಸಿದರು.

ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ಸÀಚಿವರು ಅಲ್ಲಿನ ವ್ಯಾಪಾರಸ್ಥರಿಗೆ ತಾತ್ಕಾಲಿಕ ವಾಗಿ ಮಾರಿಗುಡಿ ಬಳಿ ವ್ಯಾಪಾರ ಸ್ಥಳವನ್ನು ಸ್ಥಳಾಂತರ ಮಾಡಿ. ನಿಮಗೆ ಇದೇ ಜಾಗ ದಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡಿಕೊಡಲಿದ್ದೇವೆ ಎಂದರು.

ಈ ವೇಳೆ ವ್ಯಾಪಾರಿಗಳು ತಾತ್ಕಾಲಿಕವಾಗಿ ವ್ಯಾಪಾರ ಮಾಡಲು ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಕೋರಿದರು. ಅಲ್ಲಿಯೆ ಇದ್ದ ನಗರಸಭೆ ಆಯುಕ್ತರಿಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವರು ತಿಳಿಸಿದರು. ಬಳಿಕ ನಗರದ ಬಿ.ರಾಚಯ್ಯ ಜೋಡಿರಸ್ತೆ ಕಾಮಗಾರಿ ಪರಿಶೀಲಿಸಿದರು. ರಾಮಸಮುದ್ರದಲ್ಲಿಯೂ ರಸ್ತೆ ಕಾಮಗಾರಿ ಹಾಗೂ ಇತರೆ ಕಾಮಗಾರಿಯನ್ನು ವಿಕ್ಷೀಸಿದರು. ಇದೇ ವೇಳೆ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಶುದ್ಧ ಕುಡಿ ಯುವ ನೀರು ಘಟಕ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಬಡಾವಣೆಯ ನಿವಾಸಿ ಗಳು ಬೀದಿದೀಪ, ರಸ್ತೆ, ಚರಂಡಿ ಸೇರಿದಂತೆ ಇತರೆ ಮೂಲ ಸೌಕರ್ಯವನ್ನು ಒದಗಿಸಿ ಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾಮಗಾರಿ ಪರಿಶೀಲನೆ ಬಳಿಕ ಮಾತ ನಾಡಿದ ಅವರು, ಸೆಪ್ಟೆಂಬರ್ ವೇಳೆಗೆ ನಗರದ ಎಲ್ಲಾ ರಸ್ತೆ ಕಾಮಗಾರಿಗಳು ಪೂರ್ಣ ಗೊಳ್ಳಲಿವೆ. ಈ ಬಾರಿಯು ದಸರಾ ಆಚರಣೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲಾಗುತ್ತದೆ. ಈ ವೇಳೆಗೆ ಎಲ್ಲ ರಸ್ತೆಗಳು, ಇತರೆ ಅಭಿವೃದ್ಧಿ ಕೆಲಸಗಳು ಸಿದ್ಧಗೊಂಡಿರುತ್ತವೆ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಶೋಭ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಸದಸ್ಯ ರಾದ ಚೆಂಗುಮಣಿ , ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಉಮೇಶ್, ಪೌರಾಯುಕ್ತ ರಾಜಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಸತ್ಯಮೂರ್ತಿ, ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಡಿ.ಟಿ.ವಾಸುದೇವ್, ಮುಖಂಡ ಅಸ್ಗರ್ ಮುನ್ನಾ ಇದ್ದರು.

Translate »