Tag: Gundlupet

ಬಂಡೀಪುರ ರಾತ್ರಿ ಸಂಚಾರ ಮುಕ್ತಗೊಳಿಸಿದರೆ  ರಾಜ್ಯ ಬಂದ್, ಉಗ್ರ ಹೋರಾಟ
ಚಾಮರಾಜನಗರ

ಬಂಡೀಪುರ ರಾತ್ರಿ ಸಂಚಾರ ಮುಕ್ತಗೊಳಿಸಿದರೆ  ರಾಜ್ಯ ಬಂದ್, ಉಗ್ರ ಹೋರಾಟ

August 13, 2018

ಗುಂಡ್ಲುಪೇಟೆ:  ಯಾವುದೇ ಕಾರಣಕ್ಕೂ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡಬಾರದು ಎಂದು ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜು ಆಗ್ರಹಿಸಿದರು. ತಾಲೂಕಿನ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ರಾತ್ರಿ ನಿಷೇಧವನ್ನು ತೆರವುಗೊಳಿಸಲು ಯತ್ನಿಸುತ್ತಿರುವ ಕೇರಳ ರಾಜ್ಯದ ಮನವಿಯನ್ನು ರಾಜ್ಯ ಸರ್ಕಾರ ಗಣನೆಗೆ ತೆಗೆದುಕೊಳ್ಳಬಾರದು ಮತ್ತು ರಾತ್ರಿ ನಿಷೇ ಧವನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಬಂಡೀಪುರ ಹೆದ್ದಾರಿ ತಡೆದು ಒಂದು ಗಂಟೆಗೂ ಹೆಚ್ಚು…

ಪರಿಸರ ಮಾಲಿನ್ಯದಿಂದ ಕಾಡಂಚಿನ ಜನರಿಗೆ ತೊಂದರೆ: ಅಂಬಾಡಿ ಮಾಧವ್
ಚಾಮರಾಜನಗರ

ಪರಿಸರ ಮಾಲಿನ್ಯದಿಂದ ಕಾಡಂಚಿನ ಜನರಿಗೆ ತೊಂದರೆ: ಅಂಬಾಡಿ ಮಾಧವ್

August 11, 2018

ಗುಂಡ್ಲುಪೇಟೆ:  ಆಧುನಿಕ ಜೀವನ ಶೈಲಿ ಹಾಗೂ ಕಲುಷಿತ ಪರಿ ಸರದಿಂದಾಗಿ ಕಾಡಂಚಿನ ಗ್ರಾಮಗಳ ಜನರು ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಗೊಳಗಾಗುತ್ತಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದರು. ತಾಲೂಕಿನ ಬಂಡೀಪುರದ ಸ್ವಾಗತ ಕಚೇರಿ ಯಲ್ಲಿ ಅರಣ್ಯ ಇಲಾಖೆ, ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಎನ್.ಎ.ಬಿ. ಮತ್ತು ಅರ ವಿಂದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು….

ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ
ಚಾಮರಾಜನಗರ

ಗುಂಡ್ಲುಪೇಟೆ-ತಮಿಳುನಾಡು ಗಡಿ ಭಾಗದಲ್ಲಿ ವಾಹನಗಳಿಗೆ ತಡೆ

August 9, 2018

ಗುಂಡ್ಲುಪೇಟೆ:  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿನತ್ತ ತೆರಳುವ ಎಲ್ಲಾ ವಾಹನಗಳನ್ನೂ ಕರ್ನ ಟಕದ ಗಡಿಭಾಗವಾದ ಕೆಕ್ಕನಹಳ್ಳ ಪ್ರದೇಶದಲ್ಲಿ ಸಂಜೆಯವರೆವಿಗೂ ತಡೆ ಹಿಡಿಯಲಾಯಿತು. ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನ ಹಳ್ಳ ಚೆಕ್ ಪೋಸ್ಟ್ ಬಳಿ ಬೆಳಗ್ಗಿನಿಂದಲೇ ಎಲ್ಲಾ ವಾಹನಗಳನ್ನೂ ತಡೆ ಹಿಡಿಯಲಾಯಿತು. ಇದರಿಂದ ಸುಮಾರು ಮೂರು ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ತಡೆದಿದ್ದರಿಂದ ಈ ಮಾರ್ಗದಲ್ಲಿ ಹೊರಟಿದ್ದ ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಯಿತು. ಸಾರಿಗೆ ಬಸ್ಸುಗಳ…

ಬಂಡೀಪುರ ಮುಖ್ಯ ರಸ್ತೆಯಲ್ಲಿ ಕಳೆ ಗಿಡಗಳ ತೆರವು
ಚಾಮರಾಜನಗರ

ಬಂಡೀಪುರ ಮುಖ್ಯ ರಸ್ತೆಯಲ್ಲಿ ಕಳೆ ಗಿಡಗಳ ತೆರವು

August 8, 2018

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾ ನದ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿರುವ ಕಳೆಗಳನ್ನು ಸಿಬ್ಬಂದಿಗಳ ನೆರವಿನೊಂದಿಗೆ ತೆರವುಗೊಳಿಸಲಾಗುತ್ತಿದೆ. ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಉತ್ತಮ ಮಳೆ ಬಿದ್ದ ಪರಿಣಾಮವಾಗಿ ಎಲ್ಲೆಡೆಯೂ ಹಸಿರು ಹುಲ್ಲುಗರಿಕೆ ಚಿಗುರಿ ಮರಗಿಡಗಳು ಹಸಿರಿನಿಂದ ನಳನಳಿಸುತ್ತಿವೆ. ಆದರೆ ಇದರೊಂದಿಗೆ ಲಾಂಟಾನ ಹಾಗೂ ಕಳೆಯ ಗಿಡಗಳು ಬೆಳೆದಿದ್ದು, ಹುಲ್ಲು ಗರಿಕೆಗಳು ಹೆಚ್ಚಾಗಿ ಬೆಳೆಯದಂತೆ ವ್ಯಾಪಿಸುವ ಜತೆಗೆ ರಸ್ತೆಯು ಕಾಣದಂತೆ ಆವರಿಸುತ್ತಿದೆ. ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆಗಿಡ ಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ….

ಮದ್ದಾನೇಶ್ವರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಿಗೆ ಸನ್ಮಾನ
ಚಾಮರಾಜನಗರ

ಮದ್ದಾನೇಶ್ವರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಿಗೆ ಸನ್ಮಾನ

August 8, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿರುವ ಶ್ರೀ ಮದ್ದಾನೇಶ್ವರ ಮಹಾಮನೆಯ ಯೋಗಕೇಂದ್ರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನದ ಹಿನ್ನೆಲೆಯಲ್ಲಿ ಮುಂಜಾನೆ ಯೋಗ ಮತ್ತು ಪ್ರಾರ್ಥನೆಯೊಂದಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಮೂಹ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಕೆ.ಸಿ.ರಾಜಪ್ಪ, ಬಸವಣ್ಣ ಮತ್ತು ಶ್ವೇತಾದ್ರಿಯವರನ್ನು ಸನ್ಮಾನಿಸುವುದರೊಂದಿಗೆ ಶಿಬಿರಾರ್ಥಿಗಳು ಗುರುಪೂರ್ಣಿಮೆಯನ್ನು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ದೀಪಾಶ್ರೀನಿವಾಸ್, ಜಿ.ಪಿ.ಗಿರೀಶ್, ಪಂಕಜಾ, ವನಜಾ, ಮಹದೇವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಬಂಧನ
ಚಾಮರಾಜನಗರ

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಬಂಧನ

August 7, 2018

ಗುಂಡ್ಲುಪೇಟೆ: ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡದಂತೆ ನೊಟೀಸ್ ನೀಡಲು ಹೋಗಿದ್ದ ವಲಯ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲೆತ್ನಿಸಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅನುಮತಿ ಇಲ್ಲದೆ ರೆಸಾರ್ಟ್ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸುನಿಲ್ ಎಂಬುವರಿಗೆ ನೋಟೀಸ್ ನೀಡಲು ಹೋಗಿದ್ದಾಗ ತಮ್ಮ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರ್‍ಎಫ್‍ಒ ಪುಟ್ಟಸ್ವಾಮಿ…

ಅಕ್ರಮ ರೆಸಾರ್ಟ್ ನಿರ್ಮಾಣ ಮಾಲೀಕನಿಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ
ಚಾಮರಾಜನಗರ

ಅಕ್ರಮ ರೆಸಾರ್ಟ್ ನಿರ್ಮಾಣ ಮಾಲೀಕನಿಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ

August 6, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶ ದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದ ಕಟ್ಟಡವನ್ನು ನಿಲ್ಲಿಸುವಂತೆ ನೋಟಿಸ್ ನೀಡಲು ಹೋಗಿದ್ದ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರೆಸಾರ್ಟ್ ಮಾಲೀಕನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ಪ್ರದೇಶದ ಮಗುನಹಳ್ಳಿ ರಸ್ತೆಯಲ್ಲಿ ಸನಂ 218/5 ಹಾಗೂ 218/6ರಲ್ಲಿ ಜಮೀನು ಹೊಂದಿರುವ ರಾಜಸ್ಥಾನ ಮೂಲದ ರೆಸಾರ್ಟ್ ಮಾಲೀಕ ಬಿ.ಸುನಿಲ್ ಬಿನ್ ಶರ್ಮ ಎಂಬುವರು ಅರಣ್ಯ ಇಲಾಖೆಯ ಅನುಮತಿ ಪಡೆಯದೆ…

ದಾನ ಧರ್ಮಕ್ಕೆ ಗುಂಡ್ಲುಪೇಟೆ ಪ್ರಸಿದ್ಧ
ಚಾಮರಾಜನಗರ

ದಾನ ಧರ್ಮಕ್ಕೆ ಗುಂಡ್ಲುಪೇಟೆ ಪ್ರಸಿದ್ಧ

August 4, 2018

ಗುಂಡ್ಲುಪೇಟೆ: ಹಿಂದಿನಿಂದಲೂ ತಾಲೂಕಿನಲ್ಲಿ ಹೆಚ್ಚಿನ ದಾನಿಗಳು ಸಾರ್ವಜನಿಕರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ದಾನ ಧರ್ಮದ ಕಾರ್ಯಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಶಾಸಕ ಸಿ.ಎಸ್. ನಿರಂಜನ್‍ಕುಮಾರ್ ಹೇಳಿದರು. ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆವ ರಣದಲ್ಲಿ ನಿರ್ಮಾಣವಾಗಿರುವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಸ್ಮರಣಾ ರ್ಥವಾಗಿ ಪ್ರಸಾದ್ ಕುಟುಂಬದವರು ನಿರ್ಮಿಸಿದ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಮುಂತಾದ ಸಾರ್ವಜನಿಕರಿಗೆ ಉಪ ಯೋಗವಾಗುವ ರೀತಿಯಲ್ಲಿ ದಾನ ಮಾಡುವ ದಾನಿಗಳನ್ನು ನೆನೆಯಬೇಕು….

ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ
ಚಾಮರಾಜನಗರ

ಉದ್ದೇಶಿತ ಕೆರೆಗಳಿಗೆ ನೀರು ಹರಿಸಲು ಕ್ರಮ

August 2, 2018

ಗುಂಡ್ಲುಪೇಟೆ:  ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆ ಗಳಿಗೂ ಕಬಿನಿ ನದಿ ಮೂಲದಿಂದ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ಪಟ್ಟಣದ ಸಿ.ಎಂ.ಎಸ್.ಕಲಾಮಂದಿರ ದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕ ರಸಿ ಮಾತನಾಡಿ, ಈಗಾಗಲೇ ಬೆಳಚಲವಾಡಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಮರಹಳ್ಳಿ ಸೇರಿದಂತೆ ಹಂತಹಂತವಾಗಿ ಉದ್ದೇಶಿತ ಎಲ್ಲಾ ಕೆರೆಗಳಿಗೂ ಕಬಿನಿ ನದಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಅಭಿವೃದ್ಧಿ ಕಾರ್ಯಗಳಿಗೆ…

ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ
ಚಾಮರಾಜನಗರ

ತೇಜೋವಧೆಗೆ ಯತ್ನಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ

August 2, 2018

ಗುಂಡ್ಲುಪೇಟೆ:  ಲಂಚದ ಆರೋಪ ಹೊರಿಸಿ ನನ್ನನ್ನು ತೇಜೋವಧೆ ಮಾಡಲೆಂದು ಪ್ರಯತ್ನಿಸುತ್ತಿ ರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತಿಸಿದ್ದೇನೆ ಎಂದು ತಾಲೂಕಿನ ಬೇಗೂರು ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಸ್.ಚೇತನ್ ತಿಳಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನರಹಿತರ ಪಟ್ಟಿ ಸಿದ್ಧಪಡಿಸಲು ಗ್ರಾಮ ಸಭೆಯನ್ನು ಬೇಗೂರು ಗ್ರಾಮದಲ್ಲಿ ಕರೆಯಲಾಗಿತ್ತು. ಈ ವೇಳೆ ಏಕಾಏಕಿ ಸಭೆಗೆ ಬಂದ ಬಾರ್ ಮಾಲೀಕ ಗೋವಿಂದ ಎಂಬುವರು ಬಾರ್ ಲೈಸೆನ್ಸ್ ನವೀಕರಣಕ್ಕಾಗಿ ಅಧ್ಯಕ್ಷರಿಗೆ 50 ಸಾವಿರ ಲಂಚ ನೀಡಿದ್ದೇನೆ ಎಂದು ಗಂಭೀರವಾಗಿ ಆರೋಪಿಸಿದ್ದರು….

1 3 4 5 6 7 13
Translate »