ಹಾಸನ: ‘ಜಿಲ್ಲೆಯಲ್ಲಿನ ಗ್ರಂಥಾಲಯಗಳು ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲಕಾರಿಯಾಗುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಾಭಿರುಚಿ ಬೆಳೆಸುವ ಕೇಂದ್ರವಾಗಿ ಪರಿವರ್ತನೆ ಯಾಗಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆ ನಡೆಸಿದ ಅವರು, ನಗರ ಹಾಗೂ ಗ್ರಾಮೀಣ ಮಟ್ಟ ದಲ್ಲಿ ಗ್ರಂಥಾಲಯ ಜ್ಞಾನ ಭಂಡಾರ ಗಳಾಗುವ ಜೊತೆಗೆ, ವಿದ್ಯಾರ್ಥಿ ಸ್ನೇಹಿ ಯಾಗಿರಬೇಕು. ಅದಕ್ಕೆ ಅಧಿಕಾರಿಗಳು ಅಗತ್ಯವಾದ ಪೂರಕ ವಾತಾವರಣ ಕಲ್ಪಿಸಿ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದ ಬಹು ತೇಕ…
ಎಟಿಎಂ ಕಳುವಿಗೆ ವಿಫಲ ಯತ್ನ
July 19, 2018ಹಾಸನ: ನಗರದ ಆರ್.ಸಿ. ರಸ್ತೆ, ಅರಳಿಕಟ್ಟೆ ರಸ್ತೆ ಎದುರು ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿರುವ ಹಣ ಕಳುವು ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ. ಎಟಿಎಂ ಒಳಗೆ ನುಗ್ಗಿರುವ ಕಳ್ಳರು ಮೊದಲು ಸಿಸಿ ಕ್ಯಾಮೆರಾವನ್ನು ಪೇಪರ್‍ನಿಂದ ಮುಚ್ಚಿದ ಬಳಿಕ ಹಣವನ್ನು ದೋಚಲು ನಾನಾ ಪ್ರಯತ್ನ ಮಾಡಿದ್ದಾರೆ. ಕಬ್ಬಿಣದ ರಾಡು ಬಳಿಸಿ ಎಟಿಎಂ ಮಷಿನ್ ಓಪನ್ ಮಾಡಲಾಗದೆ ಬೇಸತ್ತು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೃತ್ತ ನಿರೀಕ್ಷಕ ಸತ್ಯನಾರಾಯಣ್, ಬಡಾವಣೆ ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ…
ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ
July 19, 2018ಹಾಸನ: ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿಟ್ಟು ಕೊಳ್ಳಲು ಕ್ರೀಡೆ ಬಹಳ ಮುಖ್ಯ ಎಂದು ಮಲೆನಾಡು ತಾಂತ್ರಿಕ ಕಾಲೇಜು ಪ್ರಾಂಶು ಪಾಲ ಕೆ.ಎಸ್.ಜಯಂತ್ ತಿಳಿಸಿದರು. ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾ ಸಂಘ ದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾ ವಳಿ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಕ್ರೀಡೆ ಯಲ್ಲ್ಲಿ ಆಗಾಗ್ಗೆ ಭಾಗವಹಿಸುವ ಮೂಲಕ ತಮ್ಮ ದೈಹಿಕ, ಮಾನಸಿಕ…
ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನ ಸಭೆ ವಿಫಲ
July 18, 2018ಹಾಸನ: ವಿಮಾನ ನಿಲ್ದಾಣ ನಿರ್ಮಾಣ ಹಿನ್ನೆಲೆ ಭೂ-ಸ್ವಾಧೀನಕ್ಕಾಗಿ ಕಳೆದ ಎರಡು ದಿನಗಳಿಂದ ರೈತರೊಂದಿಗೆ ನಡೆಯುತ್ತಿರುದ ಸಭೆ ವಿಫಲವಾಗಿ ಜಿಲ್ಲಾಡಳಿತ ನಿಗದಿ ಪಡಿಸಿದ್ದ ಪರಿಹಾರ ದರ ಒಪ್ಪದೆ ರೈತರು ಅಸಮಾಧಾನದಿಂದ ಹೊರ ನಡೆದ ಘಟನೆ ಮಂಗಳವಾರ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಭೂ-ಸ್ವಾಧೀನದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಎರಡನೇ ದಿನ ಕರೆದಿದ್ದ ಪರಿಹಾರ ದರ ನಿಗದಿ ಕುರಿತ ಸಭೆಯಲ್ಲಿ ಅಧಿಕಾರಿಗಳು ಸಾಕಷ್ಟು ಸಮಯ ರೈತರೊಂದಿಗೆ ಚರ್ಚಿಸಿದರು. ಆದರೂ ಪಟ್ಟುಬಿಡದ ರೈತರು ಎಕರೆಗೆ…
ಎಕರೆಗೆ 2 ಕೋಟಿ ನೀಡುವಂತೆ ರೈತರ ಒತ್ತಾಯ
July 17, 2018ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿಂದು ವಿಮಾನ ನಿಲ್ದಾಣ ನಿರ್ಮಾಣದ ಭೂಸ್ವಾಧೀನ ಪರಿಹಾರ ಕುರಿತು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಕರೆಗೆ 2 ಕೋಟಿ ರೂ. ಪರಿಹಾರ ನೀಡುವಂತೆ ರೈತರು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಒಪ್ಪದೆ ಮಂಗಳವಾರಕ್ಕೆ ಸಭೆ ಮುಂದೂಡಲಾಯಿತು. ತಾಲೂಕಿನ ಬೂವನಹಳ್ಳಿ, ಸಂಕೇನಹಳ್ಳಿ, ದ್ಯಾವಲಾಪುರ, ಲಕ್ಷ್ಮೀಸಾಗರ, ತೆಂಡೆಹಳ್ಳಿ, ಮೈಲನಹಳ್ಳಿ ಸೇರಿದಂತೆ ಇತರೆ ಹಳ್ಳಿಗಳ ಭೂ-ಸ್ವಾಧೀನದ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಎಕರೆ ಭೂಮಿಗೆ 2 ಕೋಟಿ ರೂ. ಪರಿಹಾರ. ಭೂಮಿ…
ನಾಲ್ಕು ವರ್ಷದ ಬಳಿಕ ಹೇಮಾವತಿ ಜಲಾಶಯ ಭರ್ತಿ
July 15, 2018ಹಾಸನ: ತಾಲೂಕಿನ ಗೊರೂರಿನಲ್ಲಿರುವ ಹೇಮಾ ವತಿ ಜಲಾಶಯ 4 ವರ್ಷಗಳ ಬಳಿಕ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಪತ್ನಿ ಜಿಪಂ ಸದಸ್ಯೆ ಭವಾನಿ ರೇವಣ್ಣ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ 15,000ಕ್ಯೂಸೆಕ್ಸ್ ನೀರು ನದಿಗೆ ಬಿಡಲು ಚಾಲನೆ ನೀಡಿದರು. ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಜುಲೈ ತಿಂಗಳ ಮಧ್ಯದಲ್ಲೇ ಭರ್ತಿಯಾಗಿರುವುದು ವಿಶೇಷ. ಇಂದು ಹೇಮಾವತಿ ಅಣೆಕಟ್ಟೆಯ 6 ಕ್ರೆಸ್ಟ್‍ಗೇಟ್‍ಗಳಿಂದ ನೀರು ಬಿಡಲಾಯಿತು. ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ…
ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
July 14, 2018ಹಾಸನ: ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಎಐಎಂಎಸ್‍ಎಸ್, ಎಐಡಿಯುಓ ಹಾಗೂ ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ಕಾರರು, ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ರಾಜ್ಯ ಸರ್ಕಾರ ಉಚಿತ ಬಸ್‍ಪಾಸ್ ನೀಡು ವುದಾಗಿ ಆಶ್ವಾಸನೆ ನೀಡಿ, ಈಗ ನಿರ್ಲಕ್ಷ್ಯ ತೋರುತ್ತಿದೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಚಳುವಳಿ ಫಲವಾಗಿ ಹಿಂದಿನ ರಾಜ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್…
ಮುಸುಕಿನ ಜೋಳ ಕೀಟ ಬಾಧೆ: ಆತಂಕದಲ್ಲಿ ಅನ್ನದಾತ
July 13, 2018ಜಿಲ್ಲೆಯಲ್ಲಿ 85,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ರೈತರು ಮುಂಜಾಗ್ರತೆ ವಹಿಸಲು ಸಲಹೆ – ಎಸ್.ಪ್ರತಾಪ್ ಹಾಸನ: ಜಿಲ್ಲೆಯ ಹಲವು ಗ್ರಾಮ ಗಳಲ್ಲಿ ರೈತರು ಬಿತ್ತನೆ ಮಾಡಿದ ಮುಸುಕಿನ ಜೋಳ ಬೆಳೆಗೆ ಕೀಟಗಳ ಬಾಧೆ ಹೆಚ್ಚಾಗಿದ್ದು, ರೈತರು ಆತಂಕಿತರಾಗಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಶಾಂತಿಗ್ರಾಮ, ಬ್ರಹ್ಮ ದೇವರಹಳ್ಳಿ, ನಿಟ್ಟೂರು ಗ್ರಾಮಗಳು ಹಾಗೂ ಅರಕಲಗೂಡು, ಬೇಲೂರು ಸೇರಿ ದಂತೆ ಜಿಲ್ಲೆಯ ವಿವಿಧೆಡೆ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಪ್ರಸ್ತುತ ಕಾಂಡಕೋರಕ ಕೀಟದ ಹಾವಳಿ ಜಾಸ್ತಿಯಾಗಿದ್ದು, ಎಲೆ ಹಾಗೂ ಸುರುಳಿ…
ಹಿರಿಯ ಭೂ ವಿಜ್ಞಾನಿ ವಿರುದ್ಧ ಕ್ರಮವಹಿಸಲು ಸರ್ಕಾರಕ್ಕೆ ಡಿಸಿ ಪತ್ರ
July 13, 2018ಹಾಸನ: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ಸಹಕಾರ ನೀಡಿದ ಆರೋಪದಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ವ್ಯವಸ್ಥಾಪಕ ಜಗದೀಶ್ ಅವರನ್ನು ಅಮಾನತುಗೊಳಿಸಿರುವ ಡಿಸಿ ರೋಹಿಣಿ ಸಿಂಧೂರಿ, ಹಿರಿಯ ಭೂ ವಿಜ್ಞಾನಿ ಪದ್ಮಜಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ, ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಜ. 29ರಂದು ಸರ್ಕಾರಿ ಜಮೀನು ಸರ್ವೆ…
ದಲಿತ ಕುಟುಂಬಗಳಿಗೆ ನ್ಯಾಯ ನೀಡಲು ಒತ್ತಾಯ
July 13, 2018ಹಾಸನ: ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ವಾರದಲ್ಲಿ ನ್ಯಾಯ ಸಿಗದಿದ್ದರೇ ಪಾದಯಾತ್ರೆ ಮೂಲಕ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಹೊಸೂರು ಗ್ರಾಮದ ಸರ್ವೇ ನಂ. 22 ರಲ್ಲಿ ಕಳೆದ 10 ವರ್ಷದಿಂದ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜಿಪಂ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಸಮುದಾಯ…