Tag: Hassan

ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು
ಹಾಸನ

ಖಾಸಗಿ ಬಸ್ ಪಂಚರ್; ಪರದಾಡಿದ ಪ್ರಯಾಣಿಕರು

July 8, 2018

ಹಾಸನ: ಖಾಸಗಿ ಟ್ರಾವೆಲ್ಸ್ ಮಾಲೀಕನ ನಿರ್ಲಕ್ಷ್ಯ ಹಾಗೂ ಬಸ್ ಟೈರ್ ಸ್ಫೋಟದಿಂದ ಇಡೀ ರಾತ್ರಿ ರಸ್ತೆಯಲ್ಲಿ ಕಳೆಯ ಬೇಕಾದ ಘಟನೆ ಬೆಳ್ಳೂರು ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನ ಮೂಲಕ ಮಂಗಳೂರಿಗೆ ತೆರಳುತ್ತಿದ್ದ 45 ಪ್ರಯಾಣಿಕರಿದ್ದ ಎಸ್.ಎಂ.ಟ್ರಾವೆಲ್ಸ್ ಬಸ್ಸು ತಡ ರಾತ್ರಿ 1.30ರ ಸಮಯದಲ್ಲಿ ಬೆಳ್ಳೂರು ಕ್ರಾಸ್ ಬಳಿ ಎರಡು ಟೈರುಗಳು ಸ್ಫೋಟ ಗೊಂಡು ಕೆಟ್ಟು ನಿಂತಿತು. ಸ್ಟೆಪ್ನಿ ಇಲ್ಲ ದ್ದರಿಂದ ಪ್ರಯಾಣಿಕರು ಮುಂಜಾನೆವರೆಗೂ ಬಸ್‍ನಲ್ಲೇ ಕಾಲ ಕಳೆಯು ವಂತಾಯಿತು. ಬಸ್ ಕೆಟ್ಟು ನಿಂತ ವಿಷಯ ತಿಳಿಸಲು ಟ್ರಾವೆಲ್ಸ್…

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ
ಹಾಸನ

ಜಿಟಿಜಿಟಿ ಮಳೆಯಲ್ಲೂ ಡಿಸಿಗೆ ಅಹವಾಲು ಸಲ್ಲಿಕೆ

July 7, 2018

ಬೇಲೂರು: ತಾಲೂಕು ಪ್ರವಾಸ ಮುಂದುವರೆಸಿರುವ ಡಿಸಿ ರೋಹಿಣಿ ಸಿಂಧೂರಿ ಪಟ್ಟಣದಲ್ಲಿಂದು ವಿವಿಧ ಇಲಾಖೆ ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಿದರು. ಸುರಿಯುವ ಮಳೆ ಯಲ್ಲೂ ನೂರಾರು ಮಂದಿ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು. ಬೇಲೂರು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರಿಂದ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಸುಮಾರು ನಾಲ್ಕೂವರೆ ಗಂಟೆ ಕಾಲ ಸಾರ್ವಜನಿಕರಿಂದ 345ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೆಳಿಗ್ಗೆಯಿಂದಲೇ ತುಂತುರು ರೀತಿ ಆರಂಭ ವಾದ ಮಳೆ ಸಭೆಗೆ ಅಡ್ಡಿ ಪಡಿಸಿತು….

ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಒತ್ತಾಯ
ಹಾಸನ

ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಒತ್ತಾಯ

July 7, 2018

ಹಾಸನ: ನಗರದ ದೇವಿಗೆರೆ ಸಮೀಪದ ಭಗತ್‍ಸಿಂಗ್ ವೃತ್ತದಲ್ಲಿ ಆಟೋ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾ ಯಿಸಿ ಆಟೋ ಚಾಲಕರು ಮತ್ತು ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರಿನ ಬಿ.ಎಂ. ರಸ್ತೆಯಲ್ಲಿ ಆಟೋ ನಿಲ್ಲಿಸಿ ಪ್ರತಿಭಟಿಸಿದರು. ಕಳೆದ ಹಲವು ವರ್ಷಗಳಿಂದ ಭಗತ್ ಸಿಂಗ್ ವೃತ್ತದ ರಸ್ತೆಬದಿ ಆಟೋ ನಿಲ್ದಾಣ ಮಾಡಿಕೊಂಡು, ಯಾರಿಗೂ ತೊಂದರೆ ಯಾಗದಂತೆ ಜೀವನ ನಡೆಸುತ್ತಿದ್ದೆವು ಆದರೆ ಇತ್ತೀಚಿಗೆ ಪೊಲೀಸ್ ಸಿಬ್ಬಂದಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ನೆಪ ಹೇಳಿ ಆಟೋ ನಿಲ್ಲಿಸದಂತೆ ನಿಷೇಧ ಏರಿದ್ದಾರೆ. ಇದರಿಂದ ನಾವು ತೀವ್ರ…

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ
ಹಾಸನ

ಭತ್ತದ ಖರೀದಿ ಕೇಂದ್ರ ತೆರೆಯಲು ಡಿಸಿ ಸೂಚನೆ

July 6, 2018

ಹಾಸನ: ‘ರಾಜ್ಯ ಸರ್ಕಾರದ ಸೂಚನೆಯಂತೆ ಕೂಡಲೇ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಗೆ ಅಗತ್ಯವಿರುವ ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭತ್ತ ಖರೀದಿ ಕೇಂದ್ರ ತೆರೆಯುವ ಕುರಿ ತಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ಬಾರಿ ಹೆಚ್ಚಾಗಿ ಹಿಂಗಾರು ಋತುವಿನಲ್ಲಿ (ಬೇಸಿಗೆ ಬೆಳೆ) ಭತ್ತ…

ಜು.10 ರಂದು ಅಂಗನವಾಡಿ ನೌಕರರ ಪ್ರತಿಭಟನೆ
ಹಾಸನ

ಜು.10 ರಂದು ಅಂಗನವಾಡಿ ನೌಕರರ ಪ್ರತಿಭಟನೆ

July 6, 2018

ಹಾಸನ:  ಅಂಗನವಾಡಿ ನೌಕರರ ಬೇಡಿಕಾ ದಿನಾಚರಣೆ ಅಂಗವಾಗಿ ಜು. 10ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಿಐಟಿಯು ಸಂಘ ಟನೆಯ ಪ್ರಧಾನ ಕಾರ್ಯದರ್ಶಿ ಡಿ.ಎಲ್. ರಾಘವೇಂದ್ರ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಐಸಿಡಿಎಸ್ ಯೋಜನೆಯಡಿ ಕೆಲಸ ಮಾಡುವ ಅಂಗನ ವಾಡಿ ನೌಕರರನ್ನು ಅತ್ಯಂತ ಕಡಿಮೆ ಸೌಲಭ್ಯ ದಿಂದ ಹೆಚ್ಚಿನ ಸಮಯ ಕೆಲಸವನ್ನು ಎಲ್ಲ ಇಲಾಖೆಗಳು ಮಾಡಿಸಿಕೊಳ್ಳುತ್ತಿದೆ. ಸರ್ವೇ ಗಳು,…

2023ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ: ಡಾ.ಸತೀಶ್
ಹಾಸನ

2023ರೊಳಗೆ ಜಿಲ್ಲೆ ಮಲೇರಿಯಾ ಮುಕ್ತ: ಡಾ.ಸತೀಶ್

July 6, 2018

ಹಾಸನ:  ‘ಸೊಳ್ಳೆಯಿಂದ ಮಲೇರಿಯಾ ಮತ್ತು ಡೆಂಗ್ಯೂ ಹರಡು ವುದರಿಂದ ಇದರ ನಿಯಂತ್ರಣಕ್ಕೆ ಕ್ರಮ ವಹಿಸಲು ಜನರಿಗೆ ತಿಳುವಳಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ 2023ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡುವ ಗುರಿ ಹೊಂದಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆಯಿಂದ ಪತ್ರಕರ್ತರಿಗಾಗಿ ಹಮ್ಮಿ ಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸೊಳ್ಳೆಗಳಿಂದ ಹರಡುವ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ…

ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮಟ್ಟದ 28ನೇ ಜಾಂಬೂರಿ ಈ ಬಾರಿ ಹಾಸನದಲ್ಲಿ ಆಯೋಜನೆ
ಮೈಸೂರು

ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮಟ್ಟದ 28ನೇ ಜಾಂಬೂರಿ ಈ ಬಾರಿ ಹಾಸನದಲ್ಲಿ ಆಯೋಜನೆ

July 5, 2018

ಮೈಸೂರು:  ರಾಜ್ಯಮಟ್ಟದ 28ನೇ ಜಾಂಬೂರಿ ಉತ್ಸವವನ್ನು ಹಾಸನ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಉತ್ಸವದಲ್ಲಿ ಪಾಲ್ಗೊಳ್ಳುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯ ಕಾರ್ಯ ವೈಖರಿ, ಇಸ್ರೋ ಸಂಸ್ಥೆಯ ತಜ್ಞರಿಂದ ಮಾಹಿತಿ-ತಂತ್ರಜ್ಞಾನದ ಪರಿಚಯ ಮಾಡಿಕೊಡುವುದರೊಂದಿಗೆ ವಿವಿಧ ಹೊಸ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ವರ್ಷ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ…

ಮರಳು ಸಾಗಣೆ ತಡೆಗೆ ಪರಿವರ್ತನಾ ವೇದಿಕೆ ಪ್ರತಿಭಟನೆ
ಹಾಸನ

ಮರಳು ಸಾಗಣೆ ತಡೆಗೆ ಪರಿವರ್ತನಾ ವೇದಿಕೆ ಪ್ರತಿಭಟನೆ

July 5, 2018

ಹಾಸನ: ಮಳೆಗಾಲ ಮುಗಿಯುವವರೆಗೂ ಮರಳು ಸಾಗಾಣೆ ತಡೆಯುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕು ಪರಿವರ್ತನಾ ವೇದಿಕೆಯಿಂದ ಪ್ರತಿಭಟಿಸಲಾಯಿತು. ನಗರದ ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಕಳೆದ 3 ತಿಂಗಳಿಂದ ಸಕಲೇಶಪುರ ತಾಲೂಕಿನ ನಿಡಿಗೆರೆ ಹಾಗೂ ಹಳ್ಳಿ ಬಯಲು ಗ್ರಾಮದಲ್ಲಿ ಹೆಚ್ಚು ಲಾರಿಗಳು ಮರಳು ಸಾಗಾಣೆ ಮಾಡುತ್ತಿರುವುದರಿಂದ ಗ್ರಾಮದ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದೆ. ಯಾವುದೇ ಸಣ್ಣಪುಟ್ಟ ವಾಹನಗಳ ಮೂಲಕ ನಮ್ಮ ಗದ್ದೆ ತೋಟಗಳಿಗೆ ಗೊಬ್ಬರ ಹಾಗೂ ಇತರೆ ಕೃಷಿಕರ…

ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
ಹಾಸನ

ಜನಸಂಪರ್ಕ ಸಭೆ ಆರಂಭಿಸಿದ ಡಿಸಿ ರೋಹಿಣಿ ಸಿಂಧೂರಿ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

July 3, 2018

ಹಾಸನ: ತಾಲೂಕು ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಲೂಕು ಕಚೇರಿಗಳಿಗೆ ಭೇಟಿ-ಪರಿಶೀಲನೆ ಸೇರಿದಂತೆ ಸಾರ್ವಜನಿಕ ಕುಂದು ಕೊರತೆ ಆಲಿಸುವ ಪ್ರಕ್ರಿಯೆ ಆರಂಭಿಸಿದ್ದು, ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ತಾಲೂಕು ಕಚೇರಿಗೆ ಇಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿ, ಸುಮಾರು ಮೂರೂವರೇ ಗಂಟೆ ಕಾಲ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದು ಕೊಂಡರು. ನಂತರ ಜನರಿಂದ 150ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ, ಅಹವಾಲು ಆಲಿಸಿದರು….

ವೈದ್ಯಕೀಯ ವಸತಿ ನಿಲಯಕ್ಕೆ ಗುದ್ದಲಿಪೂಜೆ
ಹಾಸನ

ವೈದ್ಯಕೀಯ ವಸತಿ ನಿಲಯಕ್ಕೆ ಗುದ್ದಲಿಪೂಜೆ

July 3, 2018

ಹಾಸನ: ವೈದ್ಯಕೀಯ ವಿದ್ಯಾರ್ಥಿ ನಿಯರ ನೂತನ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಶಾಸಕ ಪ್ರೀತಮ್ ಜೆ.ಗೌಡ ಗುದ್ದಲಿ ಪೂಜೆ ನೆರವೇರಿಸಿದರು. ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ ದಲ್ಲಿ ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಹೆಚ್.ಡಿ. ರೇವಣ್ಣ, ಹಾಸನಾಂಬ ವೈದ್ಯಕೀಯ ವಿದ್ಯಾ ಲಯದಲ್ಲಿ 750 ವಿದ್ಯಾರ್ಥಿಗಳಿದ್ದು, ಅವರಲ್ಲಿ 300 ವಿದ್ಯಾರ್ಥಿನಿಯರಿಗೆ ಅವಕಾಶವಾ ಗುವಂತೆ ವಸತಿನಿಲಯ ನಿರ್ಮಾಣವಾಗ ಲಿದೆ. ಇದಲ್ಲದೆ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೂ…

1 91 92 93 94 95 103
Translate »