Tag: Kodagu

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ಆಯ್ಕೆ
ಕೊಡಗು

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ಆಯ್ಕೆ

January 13, 2020

ಮಡಿಕೇರಿ, ಜ.12- ಕೊಡಗು ಜಿಲ್ಲಾ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರಾಗಿ ಪಳೆಯಂಡ ರಾಬಿನ್ ದೇವಯ್ಯ ಆಯ್ಕೆಯಾಗಿ ದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಬಿನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಉಸ್ತುವಾರಿ ಉದಯ್ ಕುಮಾರ್ ಶೆಟ್ಟಿ ರಾಬಿನ್ ದೇವಯ್ಯ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ರಾಬಿನ್ ದೇವಯ್ಯ, ಬಳಿಕ ಬಿಜೆಪಿ ಪಕ್ಷದಲ್ಲೂ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಸಂಘ ಪರಿವಾರದ ಮುಖಂಡರೊಂದಿಗೆ ಆತ್ಮೀಯರಾಗಿದ್ದ, ಪಕ್ಷ ಸಂಘಟನೆಯಲ್ಲಿ…

ಯಮಧರ್ಮ, ಚಿತ್ರಗುಪ್ತ ವೇಷಧಾರಿಗಳಿಂದ ಹೆಲ್ಮೆಟ್ ಜಾಗೃತಿ
ಕೊಡಗು

ಯಮಧರ್ಮ, ಚಿತ್ರಗುಪ್ತ ವೇಷಧಾರಿಗಳಿಂದ ಹೆಲ್ಮೆಟ್ ಜಾಗೃತಿ

January 13, 2020

ಕುಶಾಲನಗರ, ಜ.12- ಪಟ್ಟಣದಲ್ಲಿ ಪ್ರತ್ಯಕ್ಷರಾದ ಯಮಧರ್ಮ ಮತ್ತು ಚಿತ್ರಗುಪ್ತ, ವಾಹನ ಸವಾರರಿಗೆ ಸಂಚಾರಿ ನಿಯಮ ಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿದ ದೃಶ್ಯ ಕಂಡುಬಂತು. ಕೈಯಲ್ಲಿ ಯಮಪಾಶ ಹಿಡಿದು ತನ್ನ ವಾಹನ ಸಹಿತ ಚಿತ್ರಗುಪ್ತನೊಂದಿಗೆ ಪಟ್ಟಣ ದಲ್ಲಿ ಸಂಚರಿಸಿದ ಯಮಧರ್ಮ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ಸವಾರಿ ನಡಸುತ್ತಿದ್ದ ಚಾಲಕರು ಮತ್ತು ಸವಾರರಿಗೆ ಗುಲಾಬಿ ಮತ್ತು ಚಾಕಲೆಟ್ ನೀಡಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ನೆರೆದಿದ್ದ ವರಲ್ಲಿ ಆಶ್ಚರ್ಯ ಮೂಡಿಸಿತು. ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆ…

ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಟ್ಟಡ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ
ಕೊಡಗು

ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಟ್ಟಡ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ

January 11, 2020

ಮಡಿಕೇರಿ, ಜ.10- ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗಿಗೆ ಫಲ ದೊರೆತಿದ್ದು, ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಕ್ಯಾಂಪಸ್‍ನಲ್ಲೇ ಇನ್ನೂ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಆರಂಭವಾಗ ಲಿದೆ. ಮಡಿಕೇರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 100 ರೂ. ಕೋಟಿ ವೆಚ್ಚ ಮಾಡಲಾಗುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮದಂತೆ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 750…

ರಷ್ಯಾ ಯುವತಿಯನ್ನು ವರಿಸಿದ ಕೊಡಗಿನ ಯೋಗಪಟು
ಕೊಡಗು

ರಷ್ಯಾ ಯುವತಿಯನ್ನು ವರಿಸಿದ ಕೊಡಗಿನ ಯೋಗಪಟು

January 11, 2020

ಸೋಮವಾರಪೇಟೆ, ಜ.10- ಕೊಡಗಿನ ಯೋಗಪಟು, ರಷ್ಯಾದ ಯುವತಿಯನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ಇತ್ತೀಚೆಗೆ ಇಲ್ಲಿನ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು. ಇಲ್ಲಿಗೆ ಸಮೀಪದ ನಂದಿಗುಂದ ಗ್ರಾಮದ ಕೃಷಿಕ ಎನ್.ಬಿ.ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಎನ್.ಸಿ.ಜೈಚಂದನ್ ಅವರು, ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಲೆ ಗ್ಸಾಂಡ್ರೋನಾ (ಮಿಲನಾ)ರನ್ನು ವರಿಸಿದ್ದಾರೆ. ಜೈಚಂದನ್ ಕಳೆದ 8 ವರ್ಷಗಳಿಂದ ಮಾಸ್ಕೊದಲ್ಲಿ ಯೋಗ ತರಬೇತುದಾರ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕೇಂದ್ರದಲ್ಲಿ ಉಚಿತ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲೆಗ್ಸಾಂಡ್ರೋನಾ…

ಬೇಗೂರು ಬಳಿ ಗದ್ದೆಗೆ ಉರುಳಿದ ‘ಐರಾವತ’
ಕೊಡಗು

ಬೇಗೂರು ಬಳಿ ಗದ್ದೆಗೆ ಉರುಳಿದ ‘ಐರಾವತ’

January 11, 2020

ಗೋಣಿಕೊಪ್ಪ, ಜ.10- ಕೇರಳಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಗದ್ದೆಗೆ ಉರುಳಿ ಬಿದ್ದ ಘಟನೆ ಬೇಗೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಗುರುವಾರ ತಡರಾತ್ರಿ ಮೈಸೂರು ಕಡೆಯಿಂದ ಕೇರಳದ ಕೋಯಿಕೋಡ್‍ಗೆ ತೆರಳುತ್ತಿದ್ದ ಬಸ್ ಬೇಗೂರು ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿ ಅವಘಡವಾಯಿತು. ಬಸ್ ನಲ್ಲಿದ್ದ ಸುಮಾರು 30 ಪ್ರಯಾಣಿಕರು ಅಪಾಯದಿಂದ ಪಾರಾದರು. ಈ ಬಗ್ಗೆ…

ಕಾಡಾನೆ ಹಾವಳಿಯಿಂದ ಅಡಿಕೆ ಬೆಳೆ ನಾಶ
ಕೊಡಗು

ಕಾಡಾನೆ ಹಾವಳಿಯಿಂದ ಅಡಿಕೆ ಬೆಳೆ ನಾಶ

January 11, 2020

ಕುಶಾಲನಗರ, ಜ.10- ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಪ್ರಗತಿಪರ ರೈತ ಎಚ್.ಎಸ್. ಮಹೇಶ್ ಎಂಬು ವರಿಗೆ ಸೇರಿದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಾಶವಾಗಿದೆ. ಗುರುವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳು ಹಸಿವು ನೀಗಿಸಿ ಕೊಳ್ಳಲು ಅಡಿಕೆ ತೋಟಕ್ಕೆ ದಾಳಿ ಯಿಟ್ಟು ಎಳೆಯ ಅಡಿಕೆ ಗಿಡಗಳನ್ನು ತಿಂದು, ತುಳಿದು ನೆಲಸಮ ಮಾಡಿವೆ. ಇದರಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ ಎಂದು ರೈತ ಮಹೇಶ್ ದೂರಿದ್ದಾರೆ. ಅರಣ್ಯ ಇಲಾಖೆ…

ಅಪ್ರಾಪ್ತ ಬಾಲಕಿಗೆ ಜನಿಸಿದ ಮಗು ಮಾರಾಟ ಪ್ರಕರಣ: ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ವಿರುದ್ಧ ತನಿಖೆ
ಕೊಡಗು

ಅಪ್ರಾಪ್ತ ಬಾಲಕಿಗೆ ಜನಿಸಿದ ಮಗು ಮಾರಾಟ ಪ್ರಕರಣ: ಜಿಲ್ಲಾಸ್ಪತ್ರೆಯ ವೈದ್ಯ ದಂಪತಿ ವಿರುದ್ಧ ತನಿಖೆ

January 10, 2020

ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ಭರವಸೆ ಮಡಿಕೇರಿ, ಜ.9- ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ, ಮಗುವನ್ನು 1.50 ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದ ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ದಂಪತಿಯ ವಿರುದ್ದ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಗ್ಯ ಇಲಾಖೆಯ ಮೇಲ ಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಲೋಕೇಶ್, ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಸರಕಾರಿ…

ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಉಜ್ವಲ್ ಘೋರ್ಮಡೆ ಅಧಿಕಾರ ಸ್ವೀಕಾರ
ಕೊಡಗು

ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಉಜ್ವಲ್ ಘೋರ್ಮಡೆ ಅಧಿಕಾರ ಸ್ವೀಕಾರ

January 10, 2020

ಕುಶಾಲನಗರ, ಜ.9- ಸಮೀಪದ ಕೂಡಿಗೆ ಕೊಡಗು ಸೈನಿಕ ಶಾಲೆಯ ನೂತನ ಪ್ರಾಂಶು ಪಾಲರಾಗಿ ಗ್ರೂಪ್ ಕ್ಯಾಪ್ಟನ್ ಉಜ್ವಲ್ ಘೋರ್ಮಡೆಯವರು ಬುಧವಾರ ಅಧಿಕಾರ ಸ್ವೀಕರಿಸಿದರು. ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ನೂತನ ಪ್ರಾಂಶುಪಾಲರನ್ನು ಬರಮಾಡಿಕೊಂಡರು. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವು ದರ ಮೂಲಕ ಉಜ್ವಲ್ ಘೋರ್ಮಡೆ ಗೌರವ ಸಲ್ಲಿಸಿದರು. ನಂತರ ಶಾಲೆಯ ಜೆಡಿ ಎನ್‍ಸಿಸಿ ಘಟಕದ ವತಿಯಿಂದ ಪೆರೇಡ್ ನಾಯಕ ಕೆಡೆಟ್ ನರೇಂದ್ರ ರೋಡಗಿ ಹಾಗೂ ವಿದ್ಯಾರ್ಥಿಗಳಿಂದ ಗೌರವ ವಂದನೆ…

ಕೊಡಗಿನ ಹಲವೆಡೆ ಕಾರ್ಮಿಕರ ಪ್ರತಿಭಟನೆ ಮಡಿಕೇರಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ
ಕೊಡಗು

ಕೊಡಗಿನ ಹಲವೆಡೆ ಕಾರ್ಮಿಕರ ಪ್ರತಿಭಟನೆ ಮಡಿಕೇರಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ

January 9, 2020

ಮಡಿಕೇರಿ, ಜ.8- ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನು ಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜಿಲ್ಲೆಯಾ ದ್ಯಂತ ಪ್ರತಿಭಟನೆ ನಡೆಸಿದವು. ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜ ಪೇಟೆ ತಾಲೂಕಿನಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದರು. ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಮಡಿಕೇರಿ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾ ವೇಶಗೊಂಡು…

ನವೋದಯ ಶಾಲೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ
ಕೊಡಗು

ನವೋದಯ ಶಾಲೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ

January 9, 2020

ಮಡಿಕೇರಿ, ಜ.8- ನಗರದ ಹೊರ ವಲಯದಲ್ಲಿರುವ ಜವಾಹರ್ ನವೋ ದಯ ವಸತಿ ಶಾಲೆಯಲ್ಲಿ ಸೃಷ್ಟಿಯಾಗಿ ರುವ ಸಮಸ್ಯೆಯನ್ನು 6 ತಿಂಗಳೊಳಗೆ ಪರಿಹರಿಸಲಾಗುವುದು. ಕಟ್ಟಡ ನವೀ ಕರಣ ಹಾಗೂ ಮರು ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು. ಕಾರ್ಯಕ್ರಮದ ನಿಮಿತ್ತ ಮಡಿಕೇರಿಗೆ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ, ಶಾಲೆಯ ವಾಸ್ತವ ಪರಿಸ್ಥಿತಿ, ವಿದ್ಯಾರ್ಥಿ ನಿಲಯದಲ್ಲಿರುವ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿ ಶಾಲಾ ಪ್ರಾಂಶುಪಾಲರು, ಪೋಷ ಕರು ಹಾಗೂ…

1 2 3 4 5 6 84
Translate »