ಯಮಧರ್ಮ, ಚಿತ್ರಗುಪ್ತ ವೇಷಧಾರಿಗಳಿಂದ ಹೆಲ್ಮೆಟ್ ಜಾಗೃತಿ
ಕೊಡಗು

ಯಮಧರ್ಮ, ಚಿತ್ರಗುಪ್ತ ವೇಷಧಾರಿಗಳಿಂದ ಹೆಲ್ಮೆಟ್ ಜಾಗೃತಿ

January 13, 2020

ಕುಶಾಲನಗರ, ಜ.12- ಪಟ್ಟಣದಲ್ಲಿ ಪ್ರತ್ಯಕ್ಷರಾದ ಯಮಧರ್ಮ ಮತ್ತು ಚಿತ್ರಗುಪ್ತ, ವಾಹನ ಸವಾರರಿಗೆ ಸಂಚಾರಿ ನಿಯಮ ಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿದ ದೃಶ್ಯ ಕಂಡುಬಂತು.

ಕೈಯಲ್ಲಿ ಯಮಪಾಶ ಹಿಡಿದು ತನ್ನ ವಾಹನ ಸಹಿತ ಚಿತ್ರಗುಪ್ತನೊಂದಿಗೆ ಪಟ್ಟಣ ದಲ್ಲಿ ಸಂಚರಿಸಿದ ಯಮಧರ್ಮ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ಸವಾರಿ ನಡಸುತ್ತಿದ್ದ ಚಾಲಕರು ಮತ್ತು ಸವಾರರಿಗೆ ಗುಲಾಬಿ ಮತ್ತು ಚಾಕಲೆಟ್ ನೀಡಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ನೆರೆದಿದ್ದ ವರಲ್ಲಿ ಆಶ್ಚರ್ಯ ಮೂಡಿಸಿತು.

ಕೊಡಗು ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ 31ನೇ ರಾಷ್ಟ್ರೀಯ ರಸ್ತೆ ಸುರ ಕ್ಷತಾ ಸಪ್ತಾಹ ಮತ್ತು ಸಂಚಾರಿ ನಿರ್ವಹಣೆ ಕಾರ್ಯಕ್ರಮದ ಅಂಗವಾಗಿ ಹೀಗೊಂದು ವಿಶೇಷ ಜಾಗೃತಿ ಕಾರ್ಯಕ್ರಮ ಕುಶಾಲ ನಗರದಲ್ಲಿ ನಡೆಯಿತು. ಕುಶಾಲನಗರ ಸಂಚಾರಿ ಪೆÇಲೀಸ್ ಠಾಣೆಯ ಆಶ್ರಯ ದಲ್ಲಿ ನಡೆದ ಕಾರ್ಯಕ್ರಮಕ್ಕೆ ಸೋಮ ವಾರಪೇಟೆ ಉಪವಿಭಾಗದ ಡಿವೈಎಸ್ಪಿ ಎಚ್. ಎಂ.ಶೈಲೇಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕಿದೆ. ಅಸುರಕ್ಷಿತ ವಾಹನ ಚಾಲನೆ ಮೂಲಕ ಪ್ರತಿನಿತ್ಯ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ನೂತನ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡದ ಮೊತ್ತ ಹೆಚ್ಚಿಸ ಲಾಗಿದ್ದು ಈ ಬಗ್ಗೆ ಸವಾರರು, ಚಾಲಕರು ಅರಿತುಕೊಳ್ಳಬೇಕಿದೆ ಎಂದರು.

ವೃತ್ತ ನಿರೀಕ್ಷಕ ಎಂ.ಮಹೇಶ್ ಮಾತ ನಾಡಿ, ರಸ್ತೆ ಸುರಕ್ಷತಾ ಸಪ್ತಾಹ ಮೂಲಕ ಜಾಗೃತಿ ಸಾರ್ವಜನಿಕರಿಗೆ, ವಿದ್ಯಾರ್ಥಿ ಗಳಿಗೆ ಸಂಚಾರಿ ನಿಯಮಗಳನ್ನು ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ. ಸಂಚಾರಿ ನಿಮಯಗಳನ್ನು ಉಲ್ಲಂಘಿಸುವ ವರಿಗೆ ಗುಲಾಬಿ ಮತ್ತು ಚಾಕಲೆಟ್ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ವಿಶೇಷವಾಗಿ ಯಮಧರ್ಮ ಮತ್ತು ಚಿತ್ರಗುಪ್ತ ವೇಷಧಾರಿ ಪೆÇಲೀಸರು ನಿಯಮ ಉಲ್ಲಂಘಿಸುವ ಮೂಲಕ ಉಂಟಾಗುವ ಅಪಘಾತದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದರು.

ಇದೇ ಸಂದರ್ಭ ಹೆಲ್ಮೆಟ್, ಸೀಟ್ ಬೆಲ್ಟ್, ಸಮವಸ್ತ್ರ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು, ಕಾರು, ಬಸ್, ಲಾರಿ ಚಾಲಕರಿಗೆ ಗುಲಾಬಿಯೊಂದಿಗೆ ಚಾಕಲೆಟ್ ನೀಡುವ ಮೂಲಕ ನಿಯಮಗಳನ್ನು ಪಾಲಿಸು ವಂತೆ ಪೆÇಲೀಸ್ ಅಧಿಕಾರಿ ಸಿಬ್ಬಂದಿಗಳು ಎಚ್ಚರಿಕೆ ನೀಡಿದರು. ಯಮ ಮತ್ತು ಚಿತ್ರಗುಪ್ತ ವೇಷಧಾರಿಗಳಾಗಿ ಇಲಾಖೆಯ ಸಿಬ್ಬಂದಿ ಸಜಿ ಮತ್ತು ಪಾರ್ಥ ಪ್ರಯಾಣಿಕರು ಮತ್ತು ಸಾರ್ವಜನಿಕರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕುಶಾಲನಗರ ಠಾಣಾಧಿ ಕಾರಿಗಳಾದ ವೆಂಕಟರಮಣ, ನಂದೀಶ್, ಅಚ್ಚಮ್ಮ, ಸುಂಟಿಕೊಪ್ಪದ ತಿಮ್ಮಪ್ಪ, ಸಿಬ್ಬಂದಿಗಳಾದ ಜೋಸೆಫ್, ರವೀಂದ್ರ, ಸಹದೇವ್ ಮತ್ತಿತರರು ಇದ್ದರು.

Translate »