ಸುರಕ್ಷತಾ ಕ್ರಮ ಖಾತರಿ ನೀಡುವವರೆಗೆ ಕೇಬಲ್ ಅಳವಡಿಸಕೂಡದು
ಮೈಸೂರು

ಸುರಕ್ಷತಾ ಕ್ರಮ ಖಾತರಿ ನೀಡುವವರೆಗೆ ಕೇಬಲ್ ಅಳವಡಿಸಕೂಡದು

January 12, 2020

ಮೈಸೂರು, ಜ. 11(ಆರ್‍ಕೆ)- ಈವರೆಗೆ ತೆಗೆದಿ ರುವ ಗುಂಡಿಗಳನ್ನು ಮುಚ್ಚಿ ವೈಜ್ಞಾನಿಕ ರೀತಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವವರೆಗೆ ರಸ್ತೆಗಳಲ್ಲಿ ಕೇಬಲ್ ಅಳವಡಿಸುವ ಕೆಲಸ ಸ್ಥಗಿತಗೊಳಿಸುವಂತೆ ಪಾಲಿಕೆ ಅಧಿಕಾರಿಗಳು, ಮೊಬೈಲ್ ಕಂಪನಿ ಹಾಗೂ ಚೆಸ್ಕಾಂ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಯಾದವಗಿರಿಯ ರಾಮಕೃಷ್ಣ ವಿದ್ಯಾ ಶಾಲೆ ಹಿಂಭಾಗದ ಜಾಯ್ ಐಸ್ ಕ್ರೀಂ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ ಮೊಬೈಲ್ ಕಂಪನಿಯು ಆಪ್ಟಿಕಲ್ ಫೈಬರ್ ಕೇಬಲ್ (ಔಈಅ) ಅಳವಡಿಸಲು ತೆಗೆದಿದ್ದ ಗುಂಡಿಗೆ ಬೈಕೊಂದು ಬಿದ್ದು ಸವಾರ ಪ್ರದೀಪ್ ಎಂಬುವರು ತೀವ್ರವಾಗಿ ಗಾಯಗೊಂಡ ಘಟನೆಯಿಂದ ಎಚ್ಚೆತ್ತ ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಶುಕ್ರವಾರ ರಾತ್ರಿಯೇ ಜಿಯೋ ಕಂಪನಿ ಮುಖ್ಯಸ್ಥರು ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ಪ್ರಗತಿಯಲ್ಲಿರುವ ಕೇಬಲ್ ಅಳ ವಡಿಕೆ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದ್ದಾರೆ.

ಇಂದು ಬೆಳಿಗ್ಗೆ ಪಾಲಿಕೆಯ ಎಲ್ಲಾ 9 ವಲಯ ಕಚೇರಿಗಳ ಸಹಾಯಕ ಆಯುಕ್ತರ ಮೂಲಕ ಲಿಖಿತ ತಿಳಿವಳಿಕೆ ಪತ್ರವನ್ನೂ ತಲುಪಿಸಲಾಗಿದ್ದು, ಕೇಬಲ್ ಅಳವಡಿಕೆಗೆ ಅನುಮತಿ ನೀಡುವಾಗ ವಿಧಿಸಿರುವ ಷರತ್ತು ಹಾಗೂ ಒಪ್ಪಂದದಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸುವವರೆಗೆ ಕೇಬಲ್ ಅಳವಡಿಸುವ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸೂಚನೆ ನೀಡಿದ್ದಾರೆ.

ಅಗೆದ ಗುಂಡಿಗಳನ್ನು ಕೇಬಲ್ ಅಳವಡಿಸಿದ ತಕ್ಷಣ ಮುಚ್ಚಿ ಸುತ್ತ ಕಬ್ಬಿಣದ ಪ್ಲೇಟ್ ಹಾಕಿ ಅದರ ಸುತ್ತಲೂ ರಸ್ತೆಗೆ ಸಮನಾಂತರವಾಗಿ ಡಾಂಬರೀಕರಣ ಮಾಡ ಬೇಕು. ಕೆಲಸ ಮಾಡುವ ಸ್ಥಳದಲ್ಲಿ ಜವಾಬ್ದಾರಿಯುತ ಅಧಿಕಾರಿ ಖುದ್ದು ಹಾಜರಿದ್ದು, ಕೆಂಪು ಪಟ್ಟಿ ಹಾಕಿ ಸುರಕ್ಷತಾ ಕ್ರಮ ವಹಿಸಬೇಕು ಎಂದು ತಿಳಿವಳಿಕೆ ಪತ್ರ ದಲ್ಲಿ ಹೇಳಲಾಗಿದೆ. ರಸ್ತೆಗಳಲ್ಲಿ ಅಪಾಯಕ್ಕೆ ಬಾಯ್ತೆರೆ ದಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವವರೆಗೆ ಕೆಲಸ ಮುಂದುವರೆಸಬಾರದು. ಕ್ರಮ ವಹಿಸಿದ ಬಗ್ಗೆ ಫೋಟೋ ಸಮೇತ ವರದಿ ಸಲ್ಲಿಸಬೇಕೆಂದು ಗುರು ದತ್ ಹೆಗ್ಡೆ ಸೂಚನೆ ನೀಡಿದ್ದಾರೆ.

ಮೈಸೂರಿನ ಯಾದವಗಿರಿ, ವಿವಿ ಮೊಹಲ್ಲಾ, ಹೆಬ್ಬಾಳು, ಮೇಟಗಳ್ಳಿ, ವಿಜಯನಗರ, ಕುವೆಂಪುನಗರ, ರಾಮ ಕೃಷ್ಣನಗರ, ದೇವರಾಜ ಮೊಹಲ್ಲಾ, ಸಯ್ಯಾಜಿರಾವ್ ರಸ್ತೆ, ನಜರ್‍ಬಾದ್ ಸೇರಿದಂತೆ ಹಲವೆಡೆ ಚೆಸ್ಕಾಂ ನವರು ಅಂಡರ್‍ಗ್ರೌಂಡ್ ವಿದ್ಯುತ್ ಲೈನ್‍ಗಾಗಿ ಹಾಗೂ ಜಿಯೋ ಕಂಪನಿಯವರು ಓಎಫ್‍ಸಿ ಕೇಬಲ್ ಅಳ ವಡಿಸಲು ಎಲ್ಲೆಡೆ ಗುಂಡಿಗಳನ್ನು ತೆಗೆದಿದ್ದು, ತಕ್ಷಣ ಮುಚ್ಚದಿರುವುದರಿಂದ ರಾತ್ರಿ ಹಾಗೂ ಹಗಲಿನ ವೇಳೆ ದ್ವಿಚಕ್ರ ವಾಹನ ಸವಾರರು ಬಿದ್ದು, ಗಾಯ ಗೊಳ್ಳುತ್ತಿರುವುದನ್ನು ಸ್ಮರಿಸಬಹುದು.

ಪಾಲಿಕೆ ವಲಯ ಅಧಿಕಾರಿಗಳು ಶುಕ್ರವಾರ ರಾತ್ರಿ ತಮ್ಮ ವ್ಯಾಪ್ತಿಗಳಲ್ಲಿ ಗುಂಡಿ ತೆಗೆಯುವ ಕೆಲಸ ಮಾಡುತ್ತಿರು ವುದನ್ನು ನಿಲ್ಲಿಸಿ, ಅದಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ, ಇಂದೂ ಸಹ ಆ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು, ಸಂಬಂಧಪಟ್ಟ ಇಂಜಿನಿ ಯರ್‍ಗಳು ಕಾರ್ಯಾಚರಣೆ ನಡೆಸಿ ಗುಂಡಿ ತೆಗೆಯ ದಂತೆ ಎಚ್ಚರ ವಹಿಸಿ, ಇದ್ದ ಗುಂಡಿಗಳನ್ನು ಮುಚ್ಚಿಸುವು ದಕ್ಕೆ ಪ್ರಯತ್ನಿಸುತ್ತಿದ್ದಾರೆ. ಶುಕ್ರವಾರ ರಾತ್ರಿ ಯಾದವಗಿರಿ ಯಲ್ಲಿ ಗುಂಡಿಗೆ ಬೈಕ್ ಬಿದ್ದು ತಲೆ, ಕಾಲಿಗೆ ಗಾಯ ವಾಗಿರುವ ಸವಾರ ಪ್ರದೀಪ್‍ನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Translate »