ಮೈಸೂರಲ್ಲಿ ನಾನಾ ಗಡ್ಡೆ-ಗೆಣಸು ಮೇಳ
ಮೈಸೂರು

ಮೈಸೂರಲ್ಲಿ ನಾನಾ ಗಡ್ಡೆ-ಗೆಣಸು ಮೇಳ

January 12, 2020

ಮೈಸೂರು,ಜ.11(ಎಂಟಿವೈ)-ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಗಡ್ಡೆ-ಗೆಣಸು ಮೇಳ ಶನಿವಾರ ಆರಂಭ ವಾಯಿತು. ಆರೋಗ್ಯಕರ ಭೂತಾಯಿ ಮಡಿಲಲ್ಲಿ ಬೆಳೆಯುವ ಬಗೆ ಬಗೆಯ ಗಡ್ಡೆ-ಗೆಣಸುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಯಿತು.

ಸಹಜ ಸಮೃದ್ಧ ಸಂಸ್ಥೆ ಆಯೋಜಿಸಿರುವ ಮೇಳಕ್ಕೆ ಶನಿವಾರ ಬೆಳಿಗ್ಗೆ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಚಾಲನೆ ನೀಡಿದರು. ಬಳಿಕ ಮಾತನಾ ಡಿದ ಅವರು, ಭೂ ಒಡಲಲ್ಲಿ ಬೆಳೆಯುವ ಗಡ್ಡೆ-ಗೆಣಸು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥವಾಗಿದೆ. ಕಾಡಲ್ಲಿ ಬೆಳೆಯುತ್ತಿದ್ದ ಇವುಗಳನ್ನು ಬುಡಕಟ್ಟು, ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಸೇವಿಸುತ್ತಿದ್ದರು. ಹಾಗಾಗಿ ಆ ಜನರು ಆರೋಗ್ಯವಂತರೂ, ದಷ್ಟಪುಷ್ಟವಾಗಿರುತ್ತಿ ದ್ದರು. ಇತ್ತೀಚಿನ ದಿನಗಳಲ್ಲಿ ಗಡ್ಡೆ-ಗೆಣಸುಗಳನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲೆಡೆ ಅದರ ಮಹತ್ವ ಹರಡುತ್ತಿದೆ. ನಗರ ಪ್ರದೇಶದಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಗೆ ಬಗೆಯ ಗಡ್ಡೆ-ಗೆಣಸು ಒಂದೇ ವೇದಿಕೆಯಲ್ಲಿ ದೊರಕುವಂತೆ ಸಹಜ ಸಮೃದ್ಧ ವೇದಿಕೆ ಎರಡು ದಿನಗಳ ಮೇಳ ಆಯೋಜಿಸಿರುವುದು ಶ್ಲಾಘನೀಯ. ಈ ಮೇಳದ ಪ್ರಯೋಜನವನ್ನು ಮೈಸೂರಿನ ಜನತೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

roots and tubers mela in mysore-1

ಹಲವು ಬಗೆಯ ಗೆಣಸು: ಕಳೆದ ಎರಡು ವರ್ಷ ಗಳಿಂದ ಮೈಸೂರಿನಲ್ಲಿ ಗಡ್ಡೆ-ಗೆಣಸು ಮೇಳ ಆಯೋ ಜಿಸಲಾಗುತ್ತಿದೆ. ಒಂದೇ ಸೂರಲ್ಲಿ ಹತ್ತಾರು ಬಗೆಯ ಗಡ್ಡೆ-ಗೆಣಸನ್ನು ಪ್ರದರ್ಶಿಸಿ, ಮಾರಾಟ ಮಾಡಲಾಗು ತ್ತಿದೆ. ಮೈಸೂರು, ಕೊಡಗು ಜಿಲ್ಲೆಯ ವಿವಿಧೆಡೆ ಯಿಂದ ವಿವಿಧ ಸಂಸ್ಥೆಗಳ ರೈತರು ಬೆಳೆದಿರುವ ಗಡ್ಡೆ-ಗೆಣಸು, ಸೊಪ್ಪು ಹಾಗೂ ಸಾವಯವ ಕೃಷಿಯ ದವಸ ಧಾನ್ಯ, ಸಿರಿಧಾನ್ಯಗಳ ಮಾರಾಟ ಮಾಡ ಲಾಗುತ್ತಿದೆ. ಮೇಳದಲ್ಲಿ 10 ಗ್ರಾಂ ತೂಗುವ ಗೆಣಸಿಂದ 80 ಕೆಜಿ ತೂಕದ ಮುದ್ರೆ ಗೆಣಸಿನವರೆಗೂ ಪ್ರದರ್ಶನಕ್ಕಿಡಲಾಗಿದೆ.

ತಿನಿಸು ಲಭ್ಯ: ಮೇಳದಲ್ಲಿ ಕೇವಲ ಗಡ್ಡೆ-ಗೆಣಸು ಪ್ರದರ್ಶನ ಮಾತ್ರವಲ್ಲದೆ, ಗೆಣಸಿನಿಂದ ಮಾಡಿದ ವಿವಿಧ ತಿನಿಸು ಲಭ್ಯವಿದೆ. ಗೆಣಸಿನ ಐಸ್‍ಕ್ರೀಮ್, ಪಾಯಸ, ಪಲ್ಯ, ಚಕ್ಕಲಿ, ಚಿಪ್ಸ್ ಸೇರಿದಂತೆ ಇನ್ನಿತ ರರ ಸಿದ್ಧ ತಿನಿಸು ಗ್ರಾಹಕರ ನಾಲಿಗೆ ತಣಿಸುತ್ತಿದೆ.

ಗಿಡಗಳ ಮಾರಾಟ: ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಹಲಸು, ಮಾವು, ಸೀಬೆ, ಸಪೋಟ ಸೇರಿದಂತೆ ವಿವಿಧ ಹಣ್ಣುಗಳ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.

Translate »