ವಾಯುಮಾಲಿನ್ಯ: ಮೈಸೂರು ವಿವಿಗೆ ನಗರಪಾಲಿಕೆ 10 ಸಾವಿರ ದಂಡ
ಮೈಸೂರು

ವಾಯುಮಾಲಿನ್ಯ: ಮೈಸೂರು ವಿವಿಗೆ ನಗರಪಾಲಿಕೆ 10 ಸಾವಿರ ದಂಡ

January 12, 2020

ಮೈಸೂರು, ಜ. 11(ಆರ್‍ಕೆ)- ವಾಯುಮಾಲಿನ್ಯ ತಡೆ ಕಾಯ್ದೆ ಉಲ್ಲಂಘನೆಗಾಗಿ ಮೈಸೂರು ಮಹಾನಗರ ಪಾಲಿಕೆಯು ಮೈಸೂರು ವಿಶ್ವ ವಿದ್ಯಾನಿಲಯಕ್ಕೆ 10 ಸಾವಿರ ರೂ. ದಂಡ ವಿಧಿಸಿದೆ.

2020ರ ಜನವರಿ 1ರಂದು ಸಂಜೆ 4.30 ಗಂಟೆ ವೇಳೆಗೆ ಮಾನಸಗಂಗೋತ್ರಿ ಆವರಣದ ರಾಸಾಯನ ಶಾಸ್ತ್ರ ವಿಭಾಗದ ಎದುರಿನ ರಸ್ತೆಯಲ್ಲಿಟ್ಟಿರುವ ಕಸದ ತೊಟ್ಟಿಗೆ ಬೆಂಕಿ ಹಾಕಿದ್ದ ರಿಂದ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ದಂತೆ ಘನತ್ಯಾಜ್ಯ ವಸ್ತು ಸುಟ್ಟು ವಾಯುಮಾಲಿನ್ಯ ಉಂಟಾಗಿರುವುದರಿಂದ 10 ಸಾವಿರ ರೂ. ದಂಡ ಪಾವ ತಿಸುವಂತೆ ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ಜನವರಿ 10ರಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಮುಂದೆ ಮಾಲಿನ್ಯ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು, ತಪ್ಪಿದಲ್ಲಿ ಆಸ್ತಿ ತೆರಿಗೆ ಜೊತೆಗೆ ದಂಡ ಸೇರಿಸಿ, ಕಾನೂನು ರೀತಿಯ ಕ್ರಮ ಜರುಗಿಸ ಲಾಗುವುದು ಎಂದು ಆಯುಕ್ತರು ನೀಡಿರುವ ತಿಳಿವಳಿಕೆ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

Translate »