ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವಕ್ಕೆ ಹಿನ್ನಡೆ
ಮೈಸೂರು

ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವಕ್ಕೆ ಹಿನ್ನಡೆ

January 12, 2020

ಮೈಸೂರು, ಜ.11(ಆರ್‍ಕೆ)- ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವ ಹಿನ್ನಡೆ ಅನುಭವಿಸುತ್ತದೆ ಎಂದು ಸಾಹಿತಿ ಪ್ರೊ. ಅರವಿಂದ ಮಾಲ ಗತ್ತಿ ಇಂದಿಲ್ಲಿ ಅಭಿ ಪ್ರಾಯಪಟ್ಟಿದ್ದಾರೆ.

ಬಹುಜನ ವಿದ್ಯಾರ್ಥಿ ಸಂಘದ ವತಿ ಯಿಂದ ಮೈಸೂರಿನ ಮಾನಸಗಂಗೋ ತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋ ಜಿಸಿದ್ದ ‘ಭಾರತಕ್ಕೆ ಬೇಕಿರುವುದು ಇಇಇ (ಕ್ರಿಯಾತ್ಮಕ ಶಿಕ್ಷಣ, ಸಶಕ್ತ ಉದ್ಯೋಗ, ಸುಭದ್ರ ಆರ್ಥಿಕತೆ)-ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಅಲ್ಲ’ ಎಂಬ ವಿಚಾರ ಸಂಕಿರಣ ದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎಗೆ ಜನರು ವಿರೋಧ ವ್ಯಕ್ತಪಡಿಸುತ್ತಿ ರುವುದು ನಮ್ಮ ಸಂವಿಧಾನ ಸುಭದ್ರ ಎಂಬುದನ್ನು ಸಾರುತ್ತಿದೆ. ಈಗ ಡಾ. ಅಂಬೇ ಡ್ಕರ್‍ರನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ. ಸಂವಿ ಧಾನದ ಪ್ರಸ್ತಾಪವನ್ನು ಪಕ್ಕಕ್ಕೆ ಸರಿಸಿ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ. ಮೂರು ದೇಶಗಳ ನಿರಾಶ್ರಿತರಿಗೆ ಇಲ್ಲಿ ಪೌರತ್ವ ನೀಡಿ ದರೆ ಅವರಿಗೆ ಉದ್ಯೋಗ ಎಲ್ಲಿ ನೀಡು ವಿರಿ ಎಂದು ಅವರು ಪ್ರಶ್ನಿಸಿದರು.

ದೇಶದ ಬೌದ್ಧಿಕ ಮೆದುಳಿನಂತಿವೆ ವಿಶ್ವ ವಿದ್ಯಾನಿಲಯಗಳು. ಅವುಗಳನ್ನು ಹತ್ತಿಕ್ಕಿ ದರೆ ಅಪಾಯ ಖಚಿತ. ಸಿಎಎನಿಂದ ಜನರ ಬದುಕು ಅಡಕತ್ತರಿಯಲ್ಲಿ ಸಿಲುಕು ತ್ತದೆ ಎಂದ ಅವರು, ಭಾರತದಲ್ಲಿ ಧರ್ಮವೇ ಮುಂದಾದರೆ ದೇಶ ಹಿಂದೆ ಸರಿಯುತ್ತದೆ ಎಂದು ಪ್ರೊ. ಮಾಲಗತ್ತಿ ನುಡಿದರು.

ಮಾಜಿ ಸಚಿವ ಎನ್.ಮಹೇಶ್ ಮಾತ ನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಅನು ಷ್ಠಾನಕ್ಕೆ ಅಸಹಕಾರ ತೋರುವ ಮೂಲಕ ವಿರೋಧ ವ್ಯಕ್ತಪಡಿಸಬೇಕಿದೆ ಎಂದರು.

ರಾಜಕೀಯ ಪಕ್ಷಗಳು ಪೌರತ್ವ ಕಾಯ್ದೆ ಬಗ್ಗೆ ಪರ-ವಿರೋಧ ಚರ್ಚೆ ಮಾಡಿ ಅನ ಗತ್ಯ ಗೊಂದಲ ಮೂಡಿಸುತ್ತಿವೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿ ಸುತ್ತಿದ್ದಾರೆ ಎಂದ ಅವರು, ನಮ್ಮ ಪೌರತ್ವ ಪ್ರಶ್ನಿಸಲು ಅವರ್ಯಾರು? ಅಕ್ರಮ ವಲಸಿ ಗರಿಗೆ ಆಶ್ರಯ ನೀಡಲು ಬಿಜೆಪಿಯವರು ಈ ಕಾಯಿದೆ ತರುತ್ತಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ, ಅವರು ಸ್ವಾತಂತ್ರ್ಯ ಪೂರ್ವದಲ್ಲಿ ತೋರಿದ ಅಸಹಕಾರ ಚಳ ವಳಿ ನಡೆಸಿದಂತೆ ಪೌರತ್ವ ಕಾಯ್ದೆ ಜಾರಿಗೆ ಬಂದಾಗ ನಾವೆಲ್ಲಾ ಅಗತ್ಯ ಮಾಹಿತಿ ನೀಡದೆ ಅಸಹಕಾರ ತೋರೋಣ ಎಂದ ಅವರು, ಸಾಲಿಗ್ರಾಮದ ದಲಿತರ ಕಾಲೋನಿಯಲ್ಲಿ ನಡೆದ ಗಲಭೆಯಲ್ಲಿ ಪಾಲನೆಯಾಗದ ಕಾನೂನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಪಾಲನೆಯಾಗುತ್ತದೆ ಎಂಬುದು ಪ್ರತಿಭಟನಾಕಾರರ ಮೇಲೆ ದೂರು ದಾಖಲಿಸಿರುವುದೇ ಸಾಕ್ಷಿಯಾಗಿದೆ ಎಂದರು. ಅಂಕಣಕಾರ ಕೆ.ಸಿ.ರಘು, ಐಎಎಸ್ ಅಕಾಡೆಮಿ ತರಬೇತುದಾರ ಡಾ.ಶಿವ ಕುಮಾರ್, ಪ್ರದೀಪ್‍ರಾಜ್, ಹೆಚ್.ಎಸ್. ಗಣೇಶ್‍ಮೂರ್ತಿ ಹಾಗೂ ಇತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

Translate »