ರಷ್ಯಾ ಯುವತಿಯನ್ನು ವರಿಸಿದ ಕೊಡಗಿನ ಯೋಗಪಟು
ಕೊಡಗು

ರಷ್ಯಾ ಯುವತಿಯನ್ನು ವರಿಸಿದ ಕೊಡಗಿನ ಯೋಗಪಟು

January 11, 2020

ಸೋಮವಾರಪೇಟೆ, ಜ.10- ಕೊಡಗಿನ ಯೋಗಪಟು, ರಷ್ಯಾದ ಯುವತಿಯನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ಇತ್ತೀಚೆಗೆ ಇಲ್ಲಿನ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು.

ಇಲ್ಲಿಗೆ ಸಮೀಪದ ನಂದಿಗುಂದ ಗ್ರಾಮದ ಕೃಷಿಕ ಎನ್.ಬಿ.ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಎನ್.ಸಿ.ಜೈಚಂದನ್ ಅವರು, ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಲೆ ಗ್ಸಾಂಡ್ರೋನಾ (ಮಿಲನಾ)ರನ್ನು ವರಿಸಿದ್ದಾರೆ.

ಜೈಚಂದನ್ ಕಳೆದ 8 ವರ್ಷಗಳಿಂದ ಮಾಸ್ಕೊದಲ್ಲಿ ಯೋಗ ತರಬೇತುದಾರ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕೇಂದ್ರದಲ್ಲಿ ಉಚಿತ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲೆಗ್ಸಾಂಡ್ರೋನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ರಷ್ಯಾ ಯುವತಿ ಮಿಲನಾ ಭಾರತದ ಸಂಸ್ಕøತಿ ಬಗ್ಗೆ ಅಧ್ಯಯನ ಮಾಡಿದ್ದು, ಭಗವದ್ಗೀತೆ ಮತ್ತು ರಾಮಾಯಣದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದಾರೆ. ಹಿಂದೂ ಸಂಪ್ರದಾಯ ದಂತೆಯೇ ವಿವಾಹವಾಗಲು ಮಿಲನಾ ಇಚ್ಚಿಸಿ ದ್ದರು. ಮನೆಯ ಹಿರಿಯರ ಒಪ್ಪಿಗೆ ಪಡೆದು ನಾವಿಬ್ಬರೂ ವಿವಾಹವಾಗಿದ್ದೇವೆ ಎಂದು ಜೈಚಂದನ್ ‘ಮೈಸೂರು ಮಿತ್ರ’ ನಿಗೆ ತಿಳಿಸಿದ್ದಾರೆ. ಅಪಾರ ಬಂಧು ಬಳಗದವರು, ಸ್ನೇಹಿತರು ವಧು-ವರರನ್ನು ಹಾರೈಸಿದರು.

Translate »