ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಟ್ಟಡ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ
ಕೊಡಗು

ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಟ್ಟಡ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ

January 11, 2020

ಮಡಿಕೇರಿ, ಜ.10- ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗಿಗೆ ಫಲ ದೊರೆತಿದ್ದು, ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಕ್ಯಾಂಪಸ್‍ನಲ್ಲೇ ಇನ್ನೂ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಆರಂಭವಾಗ ಲಿದೆ. ಮಡಿಕೇರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 100 ರೂ. ಕೋಟಿ ವೆಚ್ಚ ಮಾಡಲಾಗುತ್ತಿದೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮದಂತೆ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 750 ಹಾಸಿಗೆ ವ್ಯವಸ್ಥೆ ಇರಬೇಕು. ಇದೀಗ ಬೋಧಕ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) 300 ಹಾಸಿಗೆ ಮಾತ್ರ ಸಾಮಥ್ರ್ಯವಿದೆ. ಇದರಿಂದಾಗಿ 450 ಹೆಚ್ಚುವರಿ ಹಾಸಿಗೆಯನ್ನು ಸೇರಿಸಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ಸುಲಭವಾಗುವ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೋಧಕ ಆಸ್ಪತ್ರೆಯ ಕ್ಯಾಂಪಸ್‍ನಲ್ಲೇ ನೂತನ ಆಸ್ಪತ್ರೆ ಮಾಡಲಾಗುತ್ತಿದ್ದು, ಉದ್ದೇಶಿತ ಕಟ್ಟಡದ ನೀಲನಕಾಶೆಯೂ ತಯಾರಾಗಿದೆ.  ಮಡಿಕೇರಿಯಲ್ಲಿ 450 ಹಾಸಿಗೆ ಸಾಮಥ್ರ್ಯದ ದೊಡ್ಡ ಆಸ್ಪತ್ರೆ ಸಂಕೀರ್ಣ ನಿರ್ಮಾಣವಾಗುತ್ತಿರುವುದರಿಂದ ಮುಂದೆ ಮೆಲ್ಟಿ ಸ್ಪೆಷಾಲಿಟಿ ಸೇವೆಗಳ ಘಟಕಗಳು ತೆರೆಯಲು ಸಹಕಾರಿಯಾಗಲಿದೆ. ವೈದ್ಯಕೀಯ, ಹೈಟೆಕ್ ಶಸ್ತ್ರ ಚಿಕಿತ್ಸಾ, ಆರ್ಥೊಪೆಡಿಕ್ಸ್, ಲ್ಯಾಬ್‍ಗಳು, ತೀವ್ರ ನಿಗಾ ಘಟಕ, ಇಎನ್‍ಟಿ, ಮಕ್ಕಳ ವಿಭಾಗ, ಸ್ತ್ರೀ ಮತ್ತು ಪ್ರಸೂತಿ ರೋಗ ವಿಭಾಗ, ಕಣ್ಣಿನ ವಿಭಾಗ ಮೇಲ್ದರ್ಜೆಗೆ ಏರಲಿದೆ.

ಆಯುಷ್ ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾಲ್ತಿಯಲ್ಲಿರುವುದರಿಂದ ಮುಂದಿನ ದಿನ ಗಳಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಇಲ್ಲೇ ದೊರೆಯುವಂತಾಗುತ್ತದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಆಸ್ಪತ್ರೆ ನಿರ್ಮಾಣ ಕಾರ್ಯ ಮುಕ್ತಾಯವಾದ ಬಳಿಕ ಪೂರ್ಣ ಪ್ರಮಾಣದ ವೈದ್ಯಕೀಯ ಸೇವೆಗಳು ಲಭಿಸಲಿದೆ. ತಜ್ಞ ವೈದ್ಯರುಗಳು, ಸ್ಟಾಪ್ ನರ್ಸ್‍ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಕೊಡಗು ಜಿಲ್ಲೆಯ ಜನರಿಗೆ ಜಿಲ್ಲೆಯಲ್ಲೇ ಹೆಚ್ಚಿನ ವೈದ್ಯಕೀಯ ಸೇವೆ ದೊರೆಯಲಿದೆ.

ಈಗಾಗಲೇ ಮೆಡಿಕಲ್ ಕಾಲೇಜು ಕಾರ್ಯನಿರ್ವ ಹಿಸುತ್ತಿದ್ದು, ಅಂತಿಮ ಹಂತದ ವೈದ್ಯ ವಿದ್ಯಾರ್ಥಿಗಳು ಇಂಟರ್‍ಶಿಪ್ ಅವಧಿಯಲ್ಲಿ ದಿನದ 24 ಗಂಟೆಯಲ್ಲಿ ಎಲ್ಲಾ ವಿಭಾಗದಲ್ಲೂ ರೋಗಿಗಳ ಸೇವೆಗೆ ಲಭ್ಯವಿರು ತ್ತಾರೆ. ಇದಲ್ಲದೆ ವೈದ್ಯಕೀಯ ವಿಭಾಗದಲ್ಲಿ ಸ್ನಾತ ಕೋತ್ತರ ಕೋರ್ಸ್ ಆರಂಭವಾಗುವ ಸಾಧ್ಯತೆಗಳಿದೆ.

 

 

Translate »